WhatsApp Channel Join Now
Telegram Group Join Now

NICL Assistant Recruitment 2024: ಯಾವುದೇ ಡಿಗ್ರಿ ಹೊಂದಿರುವವರು, ಈ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ!

ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ (ವರ್ಗ-III) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್’ನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಇತರೆ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ಕೊನೆವರೆಗೆ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

Shortview of NICL Assistant Notification 2024

Organization Name – National Insurance Company Limited
Post Name – Assistants (Class III cadre)
Total Vacancy – 500
Application Process: Online
Job Location – All Over India(Karnataka)

Important Dates:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 24, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 11, 2024
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – ನವೆಂಬರ್ 11, 2024
ಆನ್‌ಲೈನ್ ಪರೀಕ್ಷೆಯ ದಿನಾಂಕ(ಹಂತ I ) – ನವೆಂಬರ್ 30, 2024
ಆನ್‌ಲೈನ್ ಪರೀಕ್ಷೆಯ ದಿನಾಂಕ(ಹಂತ II) – ಡಿಸೆಂಬರ್ 28, 2024

ಶೈಕ್ಷಣಿಕ ಅರ್ಹತೆ:

ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ:

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷಗಳು(01.10.2024 ರಂತೆ) ಹಾಗೂ ಸರ್ಕಾರದ ನಿಯಮಗಳಿಗನುಸಾರವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

  • ಹಂತ-I: ಪೂರ್ವಭಾವಿ ಪರೀಕ್ಷೆ (ಆನ್‌ಲೈನ್)
  • ಹಂತ – II: ಮುಖ್ಯ ಪರೀಕ್ಷೆ (ಆನ್‌ಲೈನ್)
  • ಡಾಕ್ಯುಮೆಂಟ್ ಪರಿಶೀಲನೆ
  • ಪ್ರಾದೇಶಿಕ ಭಾಷಾ ಪರೀಕ್ಷೆ

ಅರ್ಜಿ ಶುಲ್ಕ:

  • SC/ST/PwBD/Ex-Servicemen ಅಭ್ಯರ್ಥಿಗಳಿಗೆ – ರೂ. 100/- (ಇಂಟಿಮೇಶನ್ ಶುಲ್ಕಗಳು ಮಾತ್ರ)
  • ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ- ರೂ. 850/- (ಅರ್ಜಿ ಶುಲ್ಕ + ಇಂಟಿಮೇಶನ್ ಶುಲ್ಕಗಳು ಸೇರಿದಂತೆ)

How to Apply for NICL Assistant Recruitment 2024

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಿ;

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಅಲ್ಲಿ “ನೇಮಕಾತಿ” ಮೇಲೆ ಕ್ಲಿಕ್ ಮಾಡಿ
  • ಮುಂದೆ “RECRUITMENT OF 500 ASSISTANTS (CLASS-III)” ಮೇಲೆ ಕ್ಲಿಕ್ ಮಾಡಿ, ಅಲ್ಲಿ “Click here to Apply Online” ಮೇಲೆ ಕ್ಲಿಕ್ ಮಾಡುವ ಮೂಲಕ ಹೊಸ ಖಾತೆ ರಚಿಸಿ ಅಥವಾ ಈಗಾಗಲೇ ಇದ್ದರೆ ಲಾಗಿನ್ ಮಾಡಿ.
  • ನಂತರ ಅರ್ಜಿ ಸಲ್ಲಿಕೆ ಫಾರಂ ಸರಿಯಾಗಿ ಭರ್ತಿ ಮಾಡಿ.
  • ಕೊನೆ ಅರ್ಜಿ ಶುಲ್ಕ ತುಂಬಿ, ಕೊನೆ ಅರ್ಜಿ ಸಲ್ಲಿಸಿ

Important Direct Links:

Official Notification PDFDownload
Online Application Form Link(From 24/10/2024)Soon
More UpdatesKarnatakaHelp.in

Leave a Comment