ಮೈಸೂರಿನ ತಿಲಕ ನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಸಂಸ್ಥೆಯು ಕರ್ನಾಟಕ ರಾಜ್ಯ ಸಂಸ್ಥೆಯಾಗಿದ್ದು, ಸಂಸ್ಥೆಯಲ್ಲಿ ಶ್ರವಣದೋಷವುಳ್ಳ/ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯ ವಿದ್ಯಾರ್ಥಿನಿಯರಾಗಿ ಉಚಿತವಾಗಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಿಗಧಿ ಪಡಿಸಿರುವ ಸಾಮಾನ್ಯ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವನ್ನೇ ಇಲ್ಲಿಯೂ ಬೋಧಿಸಲಾಗುತ್ತದೆ. ವಿಶೇಷ ಮಕ್ಕಳಿಗೆ ಭಾಷಾ ಕಲಿಕೆಯಲ್ಲಿ ವಿನಾಯಿತಿ ಇದ್ದು, ಒಟ್ಟಾರೆಯಾಗಿ ಕನ್ನಡ ಭಾಷೆಯೊಂದಿಗೆ ಗಣಿತ ವಿಜ್ಞಾನ ಹಾಗೂ ಸಮಾಜಶಾಸ್ತ್ರ ವಿಷಯವನ್ನು ಮಕ್ಕಳು ಕಲಿಯಬೇಕಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಶಾಲಾ ಪ್ರವೇಶಾತಿಗೆ ಮಕ್ಕಳ ವಯೋಮಿತಿ
- ಮೇ 29 ರಂದು 2025-26ನೇ ಶೈಕ್ಷಣಿಕ ಸಾಲಿಗೆ 1ನೇ ತರಗತಿಗೆ 05 ವರ್ಷ 05 ತಿಂಗಳು ವಯೋಮಾನದಿಂದ 9 ವರ್ಷದೊಳಗಿನ ಕಿವುಡ ಬಾಲಕ ಬಾಲಕಿಯರನ್ನು ಪ್ರವೇಶಾತಿ ಮಾಡಿಕೊಳ್ಳಲಾಗುತ್ತದೆ.
- ವಿಕಲಚೇತನ ಕಾರಣದಿಂದಾಗಿ ಇದುವರೆಗೂ ಶಾಲೆಗೆ ದಾಖಲಾಗದವರನ್ನು ಹಾಗೂ ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಗಂಡು ಮಕ್ಕಳು ಬಯಸಿದ್ದಲ್ಲಿ ಅವರನ್ನು ಸಹ ದಾಖಲು ಮಾಡಿಕೊಳ್ಳಲಾಗುತ್ತದೆ.
ಕಿವುಡ ಬಾಲಕರಿಗೆ ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳು
- ಶೈಕ್ಷಣಿಕ ಅವಧಿಯಲ್ಲಿ ಸರ್ಕಾರದ ವತಿಯಿಂದ ಕಿವುಡ ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯವನ್ನು ನೀಡಲಾಗುವುದು.
- 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ಪಡೆದಂತಹ ನುರಿತ ಶಿಕ್ಷಕರಿಂದ ಪಠ್ಯ ಬೋಧನೆ ಮಾಡಲಾಗುವುದು.
- ಸಂಸ್ಥೆಯಲ್ಲಿ ಬಾಲಕ ಬಾಲಕಿಯರಿಗೆ ವಿಶಾಲವಾದ ಆಟದ ಮೈದಾನವಿದ್ದು, ಎಲ್ಲಾ ವಿಧವಾದ ಆಟೋಪಕರಣಗಳನ್ನು ನೀಡಲಾಗುತ್ತದೆ.
- ಜೊತೆಗೆ ಸ್ಪೀಚ್ ಟೈನರ್ ಮೂಲಕ ಮಾತಿನ ತರಬೇತಿ ಹಾಗೂ ಸ್ಮಾರ್ಟ್ ಕ್ಲಾಸ್ ವಿಧಾನದ ಮೂಲಕ ಪಠ್ಯವನ್ನು ಉತ್ತಮವಾಗಿ ಬೋಧಿಸಲಾಗುತ್ತದೆ.
- ಈ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಗೆ ಶ್ರವಣದೋಷವುಳ್ಳ ಮಕ್ಕಳನ್ನು ಸೇರಿಸಲು ಇಚ್ಛಿಸುವ ತಂದೆ ತಾಯಿ/ಪೋಷಕರು ಪ್ರವೇಶ ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಉಚಿತವಾಗಿ ಪಡೆದು. ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: ತಿಲಕ ನಗರ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರ ಕಚೇರಿಯ ದೂ. ಸಂ. 0821ಎಂ2494104, ಅಧೀಕ್ಷಕರ ದೂ. ಸಂ. 9449010499 ಅನ್ನು ಸಂಪರ್ಕಿಸಬಹುದು.
ಮತ್ತಷ್ಟು ಮಾಹಿತಿಗಾಗಿ KarnatakaHelp.inಗೆ ಭೇಟಿ ನೀಡಿ