ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯಡಿ ಕಾರ್ಯನಿರ್ವಹಿಸುವ ಸಂಶೋಧನಾ ಸಂಸ್ಥೆಯಾಗಿರುವ ಹೈದರಾಬಾದ್ನ ಕೋಶ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (CCMB)ದಲ್ಲಿ ತಾಂತ್ರಿಕ ಸಹಾಯಕ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ.
ತಾಂತ್ರಿಕ ಸಹಾಯಕ(25) ಹಾಗೂ ತಾಂತ್ರಿಕ ಅಧಿಕಾರಿ(05) ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸಂಬಂಧಿಸಿದ ವಿಭಾಗದಲ್ಲಿ ಬಿಎಸ್ಸಿ/ಎಂ.ಎಸ್ಸಿ/ಡಿಪ್ಲೋಮಾ/ಬಿ.ಇ./ಬಿ.ಟೆಕ್ ಓದಿದವರು ಅರ್ಜಿ ಸಲ್ಲಿಕೆ ಮಾಡಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ಫೆ.23ರೊಳಗೆ ಅಧಿಕೃತ ಜಾಲತಾಣ https://www.ccmb.res.in/Careers/Regular-Positions ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ತಾಂತ್ರಿಕ ಸಹಾಯಕ ಹುದ್ದೆಗೆ – ₹72,240 ತಾಂತ್ರಿಕ ಅಧಿಕಾರಿ ಹುದ್ದೆಗೆ – ₹90,100
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹500 ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
• ಮೊದಲಿಗೆ ಅಭ್ಯರ್ಥಿಗಳು CCMB ಅಧಿಕೃತ ಜಾಲತಾಣ https://www.ccmb.res.in/Careers/Regular-Positions ಕ್ಕೆ ಭೇಟಿ ನೀಡಿ.
• ನಿಯಮಿತ ಹುದ್ದೆಗಳು ವಿಭಾಗದಲ್ಲಿ ನೀಡಲಾಗಿರುವ “ತಾಂತ್ರಿಕ ಸಹಾಯಕ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ CSIR-CCMB ಜಾಹೀರಾತು.ಸಂಖ್ಯೆ 02/2026ರ ಜಾಹೀರಾತು” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ “ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ನಂತರ ನೋಂದಣಿ ಮಾಡಿಕೊಂಡು, ಅರ್ಜಿ ನಮೂನೆಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
Csir Ccmb Technical Assistant And Technical Officer Online Form 2026
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
ಆನ್ಲೈನ್ ಅರ್ಜಿಯ ಹಾರ್ಡ್ ಪ್ರತಿಯನ್ನು ಸರಿಯಾಗಿ ಸಹಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಮಾರ್ಚ್ 02ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ವಿಭಾಗ ಅಧಿಕಾರಿ (ನೇಮಕಾತಿ ವಿಭಾಗ), ಸಿಎಸ್ಐಆರ್ – ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯಾಲಜಿ ಕೇಂದ್ರ, ಉಪ್ಪಲ್ ರಸ್ತೆ, ಹಬ್ಸಿಗುಡ, ಹೈದರಾಬಾದ್-500007,ತೆಲಂಗಾಣ