CUET UG 2024 Exam City Intimation: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಯ(CUET UG) ನಗರದ ಮಾಹಿತಿ ಸ್ಲಿಪ್ ಅನ್ನು ಇಂದು (ಮೇ 6 ರಂದು) ಬಿಡುಗಡೆ. CUET UG ಪ್ರವೇಶ ಕಾರ್ಡ್. CUET ಯುಜಿ ನೋಂದಾಯಿತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – exams.nta.ac.in/CUET-UG – ಗೆ ಭೇಟಿ ನೀಡಿ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ಪರೀಕ್ಷಾ ನಗರ ಮಾಹಿತಿ ಸ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಬಹುದು.
ಪರೀಕ್ಷ ಕೇಂದದ ಬಗೆಗಿನ ಮಾಹಿತಿ ಮತ್ತು ಪ್ರಯಾಣದ ಯೋಜನೆಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ನಗರ ಸೂಚನೆಯ ಚೀಟಿಯು CUET UG ಪರೀಕ್ಷಾ ನಗರವನ್ನು ತಿಳಿಸುತ್ತದೆ. ಇದರ ನಂತರ, NTA CUET ಯುಜಿ ಪ್ರವೇಶ ಪತ್ರ ನೀಡುತ್ತದೆ. NTA CUET UG ಪ್ರವೇಶ ಪತ್ರ ನೀಡಿದ ತಕ್ಷಣ, ಅಭ್ಯರ್ಥಿಗಳು ತಮ್ಮ ಹೆಸರುಗಳು, ಛಾಯಾಚಿತ್ರಗಳು ಮತ್ತು CUET UG ಅರ್ಜಿ ನಮೂನೆ ಸಂಖ್ಯೆ ಮತ್ತು ಪರೀಕ್ಷೆಗೆ ಆಯ್ಕೆ ಮಾಡಿದ ವಿಷಯಗಳು ಸೇರಿದಂತೆ ಇತರ ವೈಯಕ್ತಿಕ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬೇಕು.