ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಉದ್ಯೋಗ

ಸಂದರ್ಶನ ನೋಂದಣಿಗೆ ಸೂಚನೆ | ಏ.28ರಂದು ಸಂದರ್ಶನ

Published on:

ಫಾಲೋ ಮಾಡಿ
Employment at Eklavya Model Residential School
ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಉದ್ಯೋಗ

ಯಾದಗಿರಿ: ಜಿಲ್ಲೆಯ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ.

ಪಿಜಿಟಿ (ಇಂಗ್ಲೀಷ್, ಕನ್ನಡ, ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ , ಗಣಿತ), ಟಿಜಿಟಿ (ಇಂಗ್ಲೀಷ್, ಕನ್ನಡ, ಗಣಿತ, ವಿಜ್ಞಾನ, ಹಿಂದಿ, ಸಂಗೀತ, ಕಂಪ್ಯೂಟರ್, ಸೈನ್ಸ್), ಪಿಇಟಿ (ಪುರುಷ) ಹುದ್ದೆಗಳನ್ನು 2026-27ನೇ ಶೈಕ್ಷಣಿಕ ಸಾಲಿನ ಒಪ್ಪಂದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ನೇರ ಸಂದರ್ಶನ ಏ.28ರಂದು ಜರುಗಲಿದೆ. ಆಸಕ್ತ ಅಭ್ಯರ್ಥಿಗಳು ಏ.20ರೊಳಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನೋಂದಣಿ ಮಾಡಿಕೊಳ್ಳಬಹುದು.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment