Free Driving Training in Karnataka: ನಮಸ್ಕಾರ ಬಂಧುಗಳೇ, ಇವತ್ತು ನಾವು ಬಿಎಂಟಿಸಿ ಇಂದ ಉಚಿತ ಲಘು, ಭಾರಿ ವಾಹನ ಚಾಲನ ತರಬೇತಿ(BMTC Free Driving Training) ಅರ್ಜಿ ಸಲ್ಲಿಕೆ ಪ್ರಾರಂಭವಾಗಿರುವ ಕುರಿತು ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
ಈ ತರಬೇತಿಯ ಅರ್ಹತೆಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಕೆಳಗೆ ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ-ಕೇಂದ್ರ ಕಛೇರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪ ಯೋಜನೆ (ಟಿ.ಎಸ್.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ)ಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನ ತರಬೇತಿ ನೀಡಿ ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಚಾಲನ ಅನುಜ್ಞಾಪತ್ರ/ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಈ ತರಬೇತಿಯನ್ನು ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ(ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ)ಗಳ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಉಚಿತ ಲಘು ವಾಹನ ಚಾಲನಾ ತರಬೇತಿ (ಕಾರ್/ಜೀಪ್) :
ಕನಿಷ್ಠ 18 ವರ್ಷ ವಯೋಮಿತಿ ತುಂಬಿರಬೇಕು.
ಗರಿಷ್ಠ: 45 ವರ್ಷ.
ಉಚಿತ ಭಾರಿ ವಾಹನ ಚಾಲನಾ ತರಬೇತಿ (ಬಸ್) :
ಕನಿಷ್ಠ 20 ವರ್ಷಗಳ ವಯೋಮಿತಿ ಪೂರೈಸಿರಬೇಕು.
ಈ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಈ ಕೆಳಗಿನಂತಿವೆ;
ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ
ಎಸ್.ಎಸ್.ಎಲ್.ಸಿ. ಅಂಕಪಟ್ಟಿ / ಶಾಲಾ ವರ್ಗಾವಣಾ ಪ್ರಮಾಣ ಪತ್ರ / ನೋಟರಿಯಿಂದ ಪ್ರಮಾಣ ಪತ್ರ.
ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ 5
**ಈ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.
How to Apply Free driving Licence For SC/ST
ಅರ್ಹ ಮತ್ತು ಆಸಕ್ತಿ ಇರುವ ಪರಿಶಿಷ್ಟ ಜಾತಿ/ ಪಂಗಡದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಸೇವಾ ಸಿಂಧೂ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: 6364858520 / 7760991085 ಮಾತ್ರ ಸಂಪರ್ಕಿಸುವುದು ( ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 05.30).
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, 3ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು 560 027