ಗದಗ ಜಿಲ್ಲಾ ಪಂಚಾಯತ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗದಗ ಜಿಲ್ಲಾ ಪಂಚಾಯತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGA) ಅಡಿಯಲ್ಲಿ ತಾಂತ್ರಿಕ ಸಹಾಯಕರು ಕೃಷಿ / ತಾಂತ್ರಿಕ ಸಹಾಯಕರು ತೋಟಗಾರಿಕೆ/ ತಾಂತ್ರಿಕ ಸಹಾಯಕರು ಅರಣ್ಯ ವಿಭಾಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 16 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗದಗ ಜಿಲ್ಲಾ ಪಂಚಾಯತಿಯ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು ಗದಗ ಜಿಲ್ಲಾ ಪಂಚಾಯತಿಯ ಅಧಿಕೃತ https://gadag.nic.in ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಆಗಸ್ಟ್ 31, 2024 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ Gadag Zilla Panchayat Recruitment 2024 ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದ್ದು ಲೇಖನವನ್ನು ಕೊನೆವರೆಗೂ ಓದಿ.
Shortview of Gadag Zilla Panchayat Technical Assistant Vacancy 2024
Organization Name – Gadag District Panchayat Post Name – Technical Assistant Total Vacancy – 16 Application Process: Online Job Location – Gadag
ಪ್ರಮುಖ ದಿನಾಂಕಗಳು:
ಅರ್ಜಿ ಸಲಿಸಲು ಪ್ರಾರಂಭ ದಿನಾಂಕ –20,ಆಗಸ್ಟ್ 2024
ಅರ್ಜಿ ಸಲಿಸಲು ಕೊನೆಯ ದಿನಾಂಕ –30 ,ಆಗಸ್ಟ್ 2024
ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿನಾಂಕ – 5, ಸೆಪ್ಟೆಂಬರ್, 2024
ಮೆರಿಟ್ ಪಟ್ಟಿಗೆ ಅಕ್ಷೇಪಣೆ ಸಲ್ಲಿಸುವ ದಿನಾಂಕ – 10, ಸೆಪ್ಟೆಂಬರ್, 2024
ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ – 13, ಸೆಪ್ಟೆಂಬರ್, 2024
ಖಾಲಿ ಇರುವ ಹುದ್ದೆಗಳ ವಿವರ:
ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆ -6 ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆ – 5 ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆ – 5
ವಿದ್ಯಾರ್ಹತೆ:
ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗಳಿಗೆ – B.Sc (Agriculture) M.Sc (Agriculture) ಮತ್ತು 36 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗಳಿಗೆ – B.Sc (Horticulture) M.Sc (Horticulture) 36 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗಳಿಗೆ – B.Sc (Forestry) M.Sc (Forestry) 36 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 21 ರಿಂದ 40 ವರ್ಷ ವಯೋಮಿತಿಯ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ವಿಧಾನ:
ಮೆರಿಟ್ ಪಟ್ಟಿ
ದಾಖಲೆಗಳ ಪರಿಶೀಲನೆ
ವೇತನ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ₹24, 000/- ಜೊತೆಗೆ ಪ್ರಯಾಣ ಭತ್ಯೆ ₹2,000 ನೀಡಲಾಗುತ್ತದೆ.