ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ (GRSE)ನಲ್ಲಿ ಸೀನಿಯರ್ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ಸ್ (SPE) ಮತ್ತು ಪ್ರಾಜೆಕ್ಟ್ ಕೋಆರ್ಡಿನೇಟರ್(PC) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ (GRSE) ಮೂರು ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ಹಿರಿಯ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್‌ಗಳು (SPE) ಮತ್ತು ಪ್ರಾಜೆಕ್ಟ್ ಕೋಆರ್ಡಿನೇಟರ್ (PC) ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು GRSE Recruitment 2024 ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://www.grse.in/ ಸೆಪ್ಟೆಂಬರ್ 03 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ GRSE SPE-PC Posts Recruitment ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of GRSE Notification 2024
Organization Name – Garden Reach Shipbuilders & Engineers Ltd Post Name – Senior Project Executive (SPE) and Project Coordinator(PC) Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಗಸ್ಟ್ 14, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 03, 2024
ಸಲ್ಲಿಸದ ಅರ್ಜಿ ಪ್ರತಿಯನ್ನು ಕಛೇರಿ ತಲುಪಿಸಲು ಕೊನಯ ದಿನಾಂಕ – ಸೆಪ್ಟೆಂಬರ್ 10, 2024
ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ – Sep/Oct 2024
ಶೈಕ್ಷಣಿಕ ಅರ್ಹತೆಗಳು:
ಹಿರಿಯ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (SPE) ಹುದ್ದೆಗಳಿಗೆ – ಇಂಜಿನಿಯರಿಂಗ್ ಪದವಿ ಅಥವಾ ಮೆಕ್ಯಾನಿಕಲ್/ಸಿವಿಲ್/ನೇವಲ್ ಆರ್ಕಿಟೆಕ್ಚರ್‌ನಲ್ಲಿ ಡಿಪ್ಲೊಮಾ ಪಡೆದುಕೊಂಡಿರಬೇಕು.
ಪ್ರಾಜೆಕ್ಟ್ ಕೋಆರ್ಡಿನೇಟರ್(PC) ಹುದ್ದೆಗಳಿಗೆ – ಇಂಜಿನಿಯರಿಂಗ್ ಪದವಿ ಅಥವಾ ಮೆಕ್ಯಾನಿಕಲ್/ಸಿವಿಲ್/ನೇವಲ್ ಆರ್ಕಿಟೆಕ್ಚರ್/ಬಿಎಸ್ಸಿ (ಶಿಪ್ ಬಿಲ್ಡಿಂಗ್ ಮತ್ತು ರಿಪೇರಿ) ಡಿಪ್ಲೊಮಾ ಪಡೆದುಕೊಂಡಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 42 ವರ್ಷದ ಒಳಗಿರಬೇಕು.
ವೇತನ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹₹50,000 ರಿಂದ ₹73,000 ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ₹472
SC/ ST/ PH ಅಭ್ಯರ್ಥಿಗಳಿಗೆ: 00/-
How to Apply GRSE Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಮೊದಲಿಗೆ GRSE ಅಧಿಕೃತ ವೆಬ್ ಸೈಟ್ https://www.grse.in/ ಭೇಟಿ ನೀಡಿ.
ನಂತರ ಮುಖಪುಟದಲ್ಲಿ ಪ್ರಕಟಣೆ ವಿಭಾಗದಲ್ಲಿ ‘Recruitments’ ಲಿಂಕ್ ಅನ್ನು ಕ್ಲಿಕ್ ಮಾಡಿ.
ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿ.
ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಸಲ್ಲಿಸದ ಅರ್ಜಿಯನ್ನು ಪ್ರಿಂಟ್ ತಗೆದುಕೊಂಡು ಅಗತ್ಯ ದಾಖಲೆಗಳೂಂದಿಗೆ ನಿಗದಿತ ಕಛೇರಿ ವಿಳಾಸಕ್ಕೆ ಅಂಚೆ ವಿಳಾಸಕ್ಕೆ ಸಲ್ಲಿಸಬೇಕು
ಅರ್ಜಿ ಸಲ್ಲಿಸುವ ಕಛೇರಿಯ ಅಂಚೆ ವಿಳಾಸ – ಪೋಸ್ಟ್ ಬಾಕ್ಸ್ ಸಂಖ್ಯೆ 3076, ಲೋಧಿ ರಸ್ತೆ, ನವದೆಹಲಿ-110003 ಗೆ