Gruha Lakshmi Amount: ಮಹಿಳೆಯರಿಗೆ ಗುಡ್ ನ್ಯೂಸ್ – ಗೃಹಲಕ್ಷ್ಮಿ ಮೂರು ತಿಂಗಳ ಕಂತಿನ ಹಣ ಒಟ್ಟಿಗೆ ಬಿಡುಗಡೆ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Gruha Lakshmi Amount
Gruha Lakshmi Amount

ಮಹಿಳೆಯರಿಗೆ ಬಾಕಿ ಉಳಿದಿರುವ ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ(Gruha Lakshmi Amount) ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಪ್ರಮುಖ ಉದ್ದೇಶ ರಾಜ್ಯದ್ಯಂತ ಆರ್ಥಿಕವಾಗಿ ದುರ್ಬಲವಾಗಿರುವಂತಹ ಕುಟುಂಬದ ಹಿರಿಯ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಪ್ರಸ್ತುತ ಮೂರು ತಿಂಗಳ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಿದ್ದಾರೆ ಎಂಬುದರ ಕುರಿತು ಕೆಲ ಅಪ್ಡೇಟ್ ಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಿದ್ದಾರೆ ?

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನವರಿ, ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳ ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿ ಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಈ ಯೋಜನೆಗೆ ನೀವು ಇನ್ನೂ ಫಲಾನುಭವಿಯಾಗದಿದ್ದಲ್ಲಿ ಈಗಲೇ ಅರ್ಜಿ ಸಲ್ಲಿಸಿ

How to Apply for Gruha Lakshmi Scheme

ಅರ್ಜಿಯನ್ನು ಆನ್ ಲೈನ್ ಹಾಗೂ ಆಫ್ ಲೈನ್ ಮುಖಾಂತರ ಸಲ್ಲಿಸಬಹುದು.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

  • ಸೇವಾ ಸಿಂಧು ಖಾತರಿ ಯೋಜನೆಗಳ ಪೋರ್ಟಲ್ ಗೆ ಭೇಟಿ ನೀಡಿ.
  • ಪಾಪ್ – ಅಪ್ ಬಾಕ್ಸ್ ನಲ್ಲಿ ಡಿಸ್ಪ್ಲೇ ಮಾಡುವ ಗೃಹಲಕ್ಷ್ಮಿ ಯೋಜನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಯೋಜನೆಗೆ ಬೇಕಾದ ವೈಯಕ್ತಿಕ ದಾಖಲೆಗಳು ಹಾಗೂ ಮಾಹಿತಿಯನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಫಲಾನುಭವಿಗಳು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕಚೇರಿ, ಬಾಪೂಜಿ ಸೇವಾ ಕೇಂದ್ರಗಳು ಮತ್ತು ನಾಡ ಕಚೇರಿಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದು.

ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?

ಫಲಾನುಭವಿಯು ಸೇವಾ ಸಿಂಧು ಖಾತರಿ ಯೋಜನೆಗಳ ಪೋರ್ಟಲ್‌ನಿಂದ ಅರ್ಜಿ ನಮೂನೆಯ ಸ್ಥಿತಿಯನ್ನು ಪರಿಶೀಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಸಹಾಯವಾಣಿ ಸಂಖ್ಯೆ – 08022279954, ಮೊ.ಸಂ – 8792662814 ಅಥವಾ 8792662816

ಮತ್ತಷ್ಟು ಮಾಹಿತಿಗಾಗಿ KarnatakaHelp.inಗೆ ಭೇಟಿ ನೀಡಿ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment