Coffee Drink Per Day?: ಆರೋಗ್ಯವಂತರು ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು?

By Mahima Bhat

Published On:

IST

Updated On:

ಫಾಲೋ ಮಾಡಿ

How Much Coffee Drink Per day
How Much Coffee Drink Per day

ಕಾಫಿ, ಟೀ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಕಾಫಿ ಪ್ರಪಂಚದಾದ್ಯಂತ ಪ್ರೀತಿಯ ಪಾನೀಯವಾಗಿದೆ.  ಪ್ರಪಂಚದಾದ್ಯಂತ 1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಪ್ರತಿದಿನ ಕಾಫಿ ಕುಡಿಯುತ್ತಾರೆ. ಅದು ವಿಶ್ವದ ಜನಸಂಖ್ಯೆಯ ಸುಮಾರು 12.6% ರಷ್ಟಿದೆ. ಆದರೆ ಕಾಫಿಯ ಪ್ರಮಾಣ ದೇಹಕ್ಕೆ ಅಧಿಕವಾದರೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು.

ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಪಾನೀಯ ಇದು.ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ. ತಜ್ಞರ ಪ್ರಕಾರ ಒಬ್ಬ ವ್ಯಕ್ತಿ 400 ಮಿಲಿ ಗ್ರಾಂಗಿಂತ ಹೆಚ್ಚು ಕೆಫೀನ್ ಅನ್ನು ಸೇವಿಸಬಾರದು. ಇದು ಸರಿಸುಮಾರು 4 ಕಪ್ ಕಾಫಿಗೆ ಸಮನಾಗಿರುತ್ತದೆ.

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಮೂರು ಕಪ್ ಕಾಫಿ ಸೇವಿಸಬಹುದು. ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ 300 ಮಿಲಿಗ್ರಾಂಗಳಷ್ಟು (mg) ಕೆಫೀನ್ ಅನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಸರಿಸುಮಾರು, ಒಂದು ಕಪ್ ಕಾಫಿ 95-100 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಇದು ಸುಮಾರು ನಾಲ್ಕು ಕಪ್ ಕುದಿಸಿದ ಕಾಫಿಯಲ್ಲಿನ ಕೆಫೀನ್ ಪ್ರಮಾಣವಾಗಿದೆ. 

ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ

About the Author

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದು ನಂತರ ಕನ್ನಡಸಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.‌ ಸದ್ಯ ಪಿಎಚ್.ಡಿ ಮಾಡುತ್ತಿದ್ದಾರೆ. 4 ವರ್ಷ ಪ್ರಿಲೈನ್ಸ್ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಯಕ್ಷಗಾನ, ನಾಟಕ, ಬರವಣಿಗೆ ಆಸಕ್ತಿ ವಿಷಯಗಳು.

Leave a Comment