IBPS Clerk Prelims Admit Card 2024: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ CRP ಕ್ಲರ್ಕ್ XIV ಅಡಿಯಲ್ಲಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ನೇಮಕಾತಿಗೆ ಸಂಬಂಧಿಸಿದ ಪ್ರಿಲಿಮ್ಸ್ ಪರೀಕ್ಷೆಯು ನಡೆಯಲಿದ್ದು, ಈ ಪರೀಕ್ಷೆಯ ಪ್ರವೇಶ ಪತ್ರ ಅನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
IBPS ಕ್ಲರ್ಕ್ 2024 ಪರೀಕ್ಷೆಯನ್ನು ಆಗಸ್ಟ್ 24, 25, ಮತ್ತು 31, 2024 ರಂದು ನಡೆಸಲಾಗುತ್ತದೆ. ಈ ಪರೀಕ್ಷೆಯ ಮೂಲಕ ಖಾಲಿ ಇರುವ ಒಟ್ಟು 6128 ಹುದ್ದೆಗಳಗೆ ಭರ್ತಿ ಮಾಡಲಾಗುತ್ತದೆ. ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕ್ಲೆರಿಕಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಪ್ರತಿ ವರ್ಷ IBPS ಕ್ಲರ್ಕ್ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಲು IBPS ಅಧಿಕೃತ ವೆಬ್‌ಸೈಟ್ ಗೆ www.ibps.in ಭೇಟಿ ನೀಡಿ ಮತ್ತು ಜನ್ಮ ದಿನಾಂಕಗಳನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.