ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ಗ್ರೂಪ್ ಎ ಆಫೀಸರ್ ಸ್ಕೇಲ್ 1(IBPS RRB PO) ನೇಮಕಾತಿ ಸಲುವಾಗಿ ನಡೆಸಿದ್ದ 2024 ರ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶಗಳನ್ನು ಇಂದು (ಸೆಪ್ಟೆಂಬರ್ 13) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ಗ್ರೂಪ್ ಎ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 3 ಮತ್ತು 4ರಂದು ಈ ಪರೀಕ್ಷೆ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಗಳ ಫಲಿತಾಂಶವನ್ನು IBPS ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ವೆಬ್ ಸೈಟಿಗೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು.