ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಸದರಿ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ಹುದ್ದೆಗಳಿಗೆ ಸಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಗ ನಡೆಸಲಿದೆ. ಹೈದರಾಬಾದ್ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದ ಈ ಎರಡೂ ವೃಂದಗಳ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಲೇಖನದಲ್ಲಿ ಇಲಾಖೆಗಳು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
KPSC Various Group-A,B and C (RPC and HK) Exam Time Table 2024
ವಿವಿಧ ಇಲಾಖೆಗಳ ಪರೀಕ್ಷಾ ದಿನಾಂಕಗಳು
ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ- (3 ಬಾಯ್ಲರ್ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ)- ಸೆಪ್ಟೆಂಬರ್ 18, 2024
ಬಾಯ್ಲರ್ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಸೆಪ್ಟೆಂಬರ್ 18, 2024
ಅಂತರ್ಜಲ ನಿರ್ದೇಶನಾಲಯದಲ್ಲಿನ 10 ಭೂ ವಿಜ್ಞಾನಿಗಳ ಹುದ್ದೆಗಳಿಗೆ ಸೆಪ್ಟೆಂಬರ್ 19, 2024
ಜಲ ಸಂಪನ್ಮೂಲ ಇಲಾಖೆಯ (ಸಹಾಯಕ ಎಂಜಿನಿಯರ್ 10 ಹುದ್ದೆಗಳಿಗೆ) ಸೆಪ್ಟೆಂಬರ್ 26, 2024
ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ ಕಾರ್ಖಾನೆಗಳ (7 ಸಹಾಯಕ ನಿರ್ದೇಶಕರ ಹುದ್ದೆಗಳಿಗೆ) ಸೆಪ್ಟೆಂಬರ್ 27, 2024
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ (24 ಹುದ್ದೆಗಳಿಗೆ) ಅಕ್ಟೋಬರ್ 5, 2024
ಬಿಬಿಎಂಪಿಯಲ್ಲಿನ (92 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ) ಅಕ್ಟೋಬರ್ 6, 2024
ಅಂತರ್ಜಲ ನಿರ್ದೇಶನಾಲಯದಲ್ಲಿನ (15 ಭೂ ವಿಜ್ಞಾನಿ ಹುದ್ದೆಗಳಿಗೆ) ಅಕ್ಟೋಬರ್ 21, 2024
ಕಾರ್ಖಾನೆಗಳ ಸಹಾಯಕ ನಿರ್ದೇಶಕರ (2 ಹುದ್ದೆಗಳಿಗೆ) ಅಕ್ಟೋಬರ್ 22, 2024
ಸಹಾಯಕ ಭೂ ದಾಖಲೆಗಳ ನಿರ್ದೇಶಕರ (3 ಹುದ್ದೆಗಳಿಗೆ) ಅಕ್ಟೋಬರ್ 23, 2024
ಬಿಬಿಎಂಪಿ ಸಹಾಯಕ (ಸಿವಿಲ್ ಎಂಜಿನಿಯರ್ 8 ಹುದ್ದೆಗಳಿಗೆ) ಅಕ್ಟೋಬರ್ 24, 2024
ಕೈಗಾರಿಕಾ ಇಲಾಖೆಯ (3 ಸಹಾಯಕ ನಿರ್ದೇಶಕರ ಹುದ್ದೆಗೆ) ಅಕ್ಟೋಬರ್ 25, 2024
ಜಲಸಂಪನ್ಮೂಲ ಇಲಾಖೆಯ (90 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ) ಅಕ್ಟೋಬರ್ 26, 2024
ಆಯುಷ್ ಇಲಾಖೆಯ (1 ಪ್ರಾಧ್ಯಾಪಕ ಹುದ್ದೆಗೆ) ಅಕ್ಟೋಬರ್ 29, 2024 ಮತ್ತು ಅ. 30ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ (20 ಹುದ್ದೆಗಳಿಗೆ) ನವೆಂಬರ್10, 2024
ಪದವಿ ಪೂರ್ವ ವಿದ್ಯಾರ್ಹತೆಯ ವಿವಿಧ ಇಲಾಖೆಯಲ್ಲಿನ ವಿವಿಧ (ಸಿ ಗ್ರೂಪ್ 313 ಹುದ್ದೆಗಳಿಗೆ) ನವೆಂಬರ್ 13, 2024 ಮತ್ತು 14ರಂದು, 97 ಹುದ್ದೆಗಳಿಗೆ ನವೆಂಬರ್ 21, 2024 ಮತ್ತು ನವೆಂಬರ್ 22, 2024
ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ಲೆಕ್ಕ ನಿಯಂತ್ರಕರ (15 ಹುದ್ದೆಗಳಿಗೆ) ಡಿಸೆಂಬರ್ 10 ಮತ್ತು 13, 2024
97 ಹುದ್ದೆಗಳಿಗೆ ಡಿಸೆಂಬರ್. 17 ಮತ್ತು 20ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.