Krishi Bhagya subsidy scheme 2024: ಮಳೆಯಾಶ್ರಿತ ರೈತರಿಗೆ ಸರ್ಕಾರದ ಬಂಪರ್ ಕೊಡುಗೆ

Published on:

ಫಾಲೋ ಮಾಡಿ
Krishi Bhagya subsidy scheme

Krishi Bhagya subsidy scheme 2024: ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಕುಡಿಯುವ ನೀರು ಕೂಡ ಪರದಾಡುವಂತೆ ಆಗಿದೆ, ರೈತರಿಗೆ ಕೃಷಿ ಮಾಡಲು ಸರಿಯಾದ ಸಮಯಕ್ಕೆ ಕಾಲುವೆಗಳಲ್ಲಿ ನೀರು ಬಾರದ ಕಾರಣ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರವು ಮಳೆಯಾಶ್ರಿತ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆಯು ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು ಇದರ ಕುರಿತಂತೆ ಅರ್ಜಿ ಸಲ್ಲಿಸುವುದು ಹೇಗೆ, ಪ್ರಯೋಜನಗಳು ಯಾವುವು, ಈ ಯೋಜನೆಗೆ ಮಾನದಂಡಗಳು ಯಾವುವು, ಈ ಯೋಜನೆಯನ್ನು ರೈತರು ಹೇಗೆ ಉಪಯೋಗಿಸಬಹುದು ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ತಪ್ಪದೇ ಓದಿ ನೀವು ಮಳೆಯಾಶ್ರಿತ ರೈತರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಲ್ಲಿ 2023-24 ನೇ ಸಾಲಿನಲ್ಲಿ ಜಿಲ್ಲೆಗಳಲ್ಲಿನ 106 ತಾಲೂಕುಗಳಲ್ಲಿ ಈ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯು ಅನುಷ್ಠಾನ ಗೊಳಿಸಲು ಸರ್ಕಾರವು ಮುಂದಾಗಿದೆ. ಅಂತರ್ಜಲ ವೃದ್ಧಿ ಹಾಗೂ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿ ಕೃಷಿ ಚಟುವಟಿಗೆಗಳನ್ನು ನೀಡಲು ಈ ಯೋಜನೆಯು ಅನುಕೂಲ ಮಾಡಿಕೊಟ್ಟಿದೆ. ರೈತರ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ, ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬೆಳೆಗಳಿಗೆ ಉಪಯೋಗಿಸಿಕೊಂಡು ಆದಾಯ ಗಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment