Ministry of Tribal Affairs fellowship & Scholarship 2024-25
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯು 2024-25ರ ಶೈಕ್ಷಣಿಕ ಸಾಲಿನ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣವನ್ನು (M.Phil ಅಥವಾ Ph.D.) ಮುಂದುವರಿಸಲು ಅವರಿಗೆ ಹಣಕಾಸಿನ ನೆರವಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಫೆಲೋಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಫೆಲೋಶಿಪ್‌ಗೆ ಅರ್ಹರಾಗಲು ಕನಿಷ್ಠ 55% ನೊಂದಿಗೆ ಸ್ನಾತಕೋತ್ತರ ಪದವಿ (PG)ಪಡೆದುಕೊಂಡಿರಬೇಕು. ಅರ್ಹ ಅಭ್ಯರ್ಥಿಗಳು ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು https://fellowship.tribal.gov.in ಭೇಟಿ ನೀಡಿ, ಸೆಪ್ಟೆಂಬರ್ 30ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರತಿ ವರ್ಷ M.Phil/M.Phil +PhD/Ph.D ಗಾಗಿ ಒಟ್ಟು ಹೊಸ ಫೆಲೋಶಿಪ್‌ಗಳ ಸಂಖ್ಯೆ 750 ಆಗಿರುತ್ತದೆ.
Ministry Of Tribal Affairs Fellowship &Amp; Scholarship 2024-25
ಬುಡಕಟ್ಟು ವ್ಯವಹಾರಗಳ ಸಚಿವಾಲಯ ವಿದ್ಯಾರ್ಥಿವೇತನ(Ministry of Tribal Affairs fellowship & Scholarship 2024-25)ದ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಸರಿಯಾಗಿ ಓದಿ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.
ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
ಫೆಲೋಶಿಪ್‌ಗೆ ಅರ್ಹರಾಗಲು ಕನಿಷ್ಠ 55% ನೊಂದಿಗೆ ಸ್ನಾತಕೋತ್ತರ(Post-Graduation) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿದಾರ, ವಿದ್ಯಾರ್ಥಿವೇತನ ಪ್ರಶಸ್ತಿ ಸಂಬಂಧಿತ ವರ್ಷದ ಜುಲೈ ಮೊದಲ ದಿನದಂದು ಗರಿಷ್ಠ 36 ವರ್ಷಗಳು ಹೊಂದಿರಬೇಕು. (ಅರ್ಜಿದಾರರ ಹುಟ್ಟಿದ ದಿನಾಂಕವು 01/07/1988 ರ ಮೊದಲು ಇರಬಾರದು.)
ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಲ್ಲಿನ ನಿಯಮಿತ ಮತ್ತು ಪೂರ್ಣ ಸಮಯದ ಪಿಎಚ್‌ಡಿಗೆ ಪ್ರವೇಶ ಪಡೆಯಬೇಕು.
Documents required for NFST Fellowship 2024-25 Registration
ಪ್ರೊಫೈಲ್ ಫೋಟೋ {ಗಾತ್ರ: -50 KB-100 KB} – JPEG ಫೈಲ್ ಮಾತ್ರ
ಜನ್ಮ ದಿನಾಂಕ ಪುರಾವೆ [10ನೇ ತರಗತಿಯ ಪ್ರಮಾಣಪತ್ರ/10ನೇ ಅಂಕಪಟ್ಟಿ/ಶಾಲೆಯಿಂದ ಹೊರಡುವ ಪ್ರಮಾಣಪತ್ರ(TC)/ 10ನೇ ಪರೀಕ್ಷೆಯ ಪ್ರವೇಶ ಪತ್ರ, ಇದು ಜನ್ಮ ದಿನಾಂಕವನ್ನು ಹೊಂದಿರಬೇಕು]- PDF ಫೈಲ್ ಮಾತ್ರ
ಸ್ನಾತಕೋತ್ತರ ಮಾರ್ಕ್‌ಶೀಟ್(PG) (ಎಲ್ಲಾ ಸೆಮಿಸ್ಟರ್‌ಗಳು) – PDF ಫೈಲ್ ಮಾತ್ರ
ಕನ್ವರ್ಷನ್ ಸರ್ಟಿಫಿಕೇಟ್ -PDF ಫೈಲ್ ಮಾತ್ರ
ST ಪ್ರಮಾಣಪತ್ರ – PDF ಫೈಲ್ ಮಾತ್ರ
PWD ಪ್ರಮಾಣಪತ್ರ – ಪಿಡಿಎಫ್ ಫೈಲ್ ಮಾತ್ರ
PVTG ಪ್ರಮಾಣಪತ್ರ [ಅನ್ವಯಿಸಿದರೆ] – PDF ಫೈಲ್ ಮಾತ್ರ
Bonafide ಪ್ರವೇಶದ ಪ್ರಮಾಣಪತ್ರ/ Ph.D ಗೆ ಸೇರುವುದು. / ಇಂಟಿಗ್ರೇಟೆಡ್ M.Phil.+ Ph.D.-PDF ಫೈಲ್ ಮಾತ್ರ
Ministry of Tribal Affairs Scholarship 2024-25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2024
Step By Step Process of Ministry of Tribal Affairs fellowship & Scholarship Online Form 2024
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ…?
ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್ ಸೈಟ್ https://fellowship.tribal.gov.in/StudentsRegistrationForm.aspx ಭೇಟಿ ನೀಡಿ.
ಅರ್ಹತೆ ಮತ್ತು ಮಾನದಂಡಗಳನ್ನು ಗಮನವಿಟ್ಟು ಓದಿಕೊಂಡು ಸಲಿಸು ಕ್ಲಿಕ್ ಮಾಡಿ.
ನಂತರ ಹೊಸ ಖಾತೆಯನ್ನು ರಚಿಸಲು ಅಗತ್ಯ ವಿವರಗಳನ್ನು ನಮೂದಿಸಿ ಪಾಸ್ವರ್ಡ್ ರಚಿಸಿಕೊಳ್ಳಿ.
ಪಾಸ್ವರ್ಡ್ ಮತ್ತು ನೋಂದಣಿ ಸಂಖ್ಯೆಯ ಸಹಾಯದಿಂದ ಲಾಗಿನ್ ಮಾಡಿ.
ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಒದಗಿಸಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕೊನೆಯದಾಗಿ ಸಲ್ಲಿಸು ಕ್ಲಿಕ್ ಮಾಡಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.