ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಸಂಬಂಧ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ವಿವಿಧ ಜಿಲ್ಲೆಗಳಿಗೆ ಓಂಬುಡ್ಸ್ಪರ್ಸನ್ಸ್ ನೇಮಕಾತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದು ಅರೆಕಾಲಿಕ ಹುದ್ದೆಯಾಗಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಜಾಲತಾಣ(rdpr.karnataka.gov.in)ದ ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡಿ, ಭರ್ತಿ ಮಾಡಿ ಜೊತೆಗೆ ನಿಗದಿತ ದಾಖಲೆಗಳನ್ನು ಲಗತ್ತಿಸಿ ಏ.24ರೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ‘ಆಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. 5ನೇ ಮಹಡಿ, ಪ್ಯಾಟ್ ನಂ.1243, ಕೆಎಸ್ಐಐಡಿಸಿ ಕಟ್ಟಡ ಐಟಿ ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560010’ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು.
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಅಭ್ಯರ್ಥಿಗಳು (ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ, ಸಮಾಜ ಸೇವೆ ಹಾಗೂ ಮ್ಯಾನೇಜ್ಮೆಂಟ್) ಯಾವುದಾದರೂ ಒಂದು ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರಬೇಕು.
• ಸಾರ್ವಜನಿಕರೊಂದಿಗೆ/ಸಮುದಾಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವೂ ಒಂದು ಕಡ್ಡಾಯ ಅರ್ಹತೆಯಾಗಿರುತ್ತದೆ.
• ಅಭ್ಯರ್ಥಿಗಳು ತವಾಸಣೆ, ಕ್ಷೇತ್ರ ಭೇಟಿ, ಹಾಗೂ ವೀಕ್ಷಣೆ ಕೆಲಸಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಮರ್ಥರಾಗಿರಬೇಕು.
ವೈಯಕ್ತಿಕ ಘೋಷಣಾ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ:
ಅಭ್ಯರ್ಥಿಗಳು ಈ ಕೆಳಗೆ ತಿಳಿಸಲಾದ ವಿಷಯಗಳಲ್ಲಿ ಪಬ್ಲಿಕ್ ನೋಟರಿಯಿಂದ ಧೃಢೀಕರಿಸಿದ ವೈಯಕ್ತಿಕ ಘೋಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
• ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದೀರಾ/ಆರೋಪ ಪಟ್ಟಿ ದಾಖಲಾಗಿದೆಯೇ?
• ಇಲಾಖಾ ವಿಚಾರಣೆಯಲ್ಲಿ ದಂಡನೆಗೆ ಒಳಪಟ್ಟಿರುವಿರೇ?/ಯಾವುದೇ ಇಲಾಖಾ ವಿಚಾರಣೆ ಬಾಕಿ ಇದೆಯೇ?
• ಯಾವುದೇ ರಾಷ್ಟ್ರೀಯ/ರಾಜಕೀಯ ಪಕ್ಷ/ ನಿಷೇಧಿತ ಸಂಘ ಸಂಸ್ಥೆಯ ಸದಸ್ಯರಾಗಿರಬಾರದು.
ಸೇವಾ ಅವಧಿ:
ನೇಮಕಾತಿಯು ಮೊದಲಿಗೆ 2 ವರ್ಷಗಳ ಅವಧಿಯದಾಗಿರುತ್ತದೆ. ಆದರೆ ಕಾರ್ಯನಿರ್ವಹಣೆಯು ಅತೃಪ್ತಿಕರವಾಗಿ ಕಂಡು ಬಂದಲ್ಲಿ ಅವಧಿಗೆ ಮುನ್ನವೇ ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 66 ವರ್ಷಗಳು
ಆಯ್ಕೆ ವಿಧಾನ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ/ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳ ಅನುಸಾರ ಮಾಸಿಕ ₹10,000 ಗೌರವಧನ ಹಾಗೂ ₹2250 ಗಳಿಂದ ಗರಿಷ್ಠ ₹45,000)ವರೆಗೆ ಸಿಟ್ಟಿಂಗ್ ಫೀಜು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಗಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಜಾಲತಾಣದ https://rdpr.karnataka.gov.in/ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅಭ್ಯರ್ಥಿಗಳ ವ್ಯಕ್ತಿತ್ವ ಪರಿಚಯ, ಕನಿಷ್ಠ 10 ವರ್ಷಗಳ ಕಾರ್ಯನಿರ್ವಹಣೆ ಸೇವಾನುಭವದ ಪ್ರಮಾಣಪತ್ರ ವಿವರ, ಶೈಕ್ಷಣಿಕ ಮಾಹಿತಿಗಳು ಹಾಗೂ ಇತರೆ ಪೂರಕ ದಾಖಲೆಗಳನ್ನು ಲಗತ್ತಿಸಿ. ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 24ರ ಸಂಜೆ 5.30 ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಆಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. 5ನೇ ಮಹಡಿ, ಪ್ಯಾಟ್ ನಂ.1243, ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ. ಐ.ಟಿ. ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560010
ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ: 080-22342794 ಅನ್ನು ಸಂಪರ್ಕಿಸಬಹುದು.