ರೈಲ್ವೆ ಇಲಾಖೆಯ ಉತ್ತರ ರೈಲ್ವೆಯ (NR) ವಿವಿಧ ವಿಭಾಗಗಳು/ ಘಟಕಗಳು/ ಕಾರ್ಯಾಗಾರಗಳಲ್ಲಿ ತರಬೇತಿ ನೀಡಲು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಉತ್ತರ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ವಿವಿಧ ವಿಭಾಗಗಳಿಗೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ನೇಮಕಾತಿಯಲ್ಲಿ ಒಟ್ಟು 4096 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. SSLC ಮತ್ತು ITI ಪೂರ್ಣಗೊಳಿಸಿರುವ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಸೆಪ್ಟೆಂಬರ್ 16ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ RRC NR Apprentice Recruitment 2024 ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Organization Name – Railway Recruitment Cell (RRC), NORTHERN RAILWAY(NR) Post Name – Apprentices Total Vacancy – 4096 Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಗಸ್ಟ್ 16, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸಪ್ಟೆಂಬರ್ 16, 2024
ಖಾಲಿ ಇರುವ ಹುದ್ದೆಗಳ ವಿವರ:
ಈ ಅಪ್ರೆಂಟಿಸ್ ತರಬೇತಿ ನೇಮಕಾತಿಯಲ್ಲಿ 4096 ಹುದ್ದೆಗಳು ಖಾಲಿ ಇದ್ದು, ವಿವಿಧ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಚೆಕ್ ಮಾಡಿ.
ವಿದ್ಯಾರ್ಹತೆ:
ಈ ಹುದ್ದಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSLC ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ITI ಪಡೆದುಕೊಂಡಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 15 ರಿಂದ ಗರಿಷ್ಠ 20 ವರ್ಷ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ದಾಖಲೆಗಳ ಪರಿಶೀಲನೆ
ವೈದ್ಯಕೀಯ ತಪಾಸಣೆ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ₹100 SC/ST/EWs/ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ₹00