SSC CGL 2024 Notification: ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ ಕಾಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಾಯುತ್ತಿದ್ದಾರೆ. ಇತ್ತೀಚಿನ SSC ಪರೀಕ್ಷಾ ವೇಳಪಟ್ಟಿಯ ಪ್ರಕಾರ, SSC CGL 2024 ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು SSC CGL ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಆಯ್ಕೆಯಾದವರನ್ನು ಸಂದರ್ಶನದ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ನಿಮ್ಮ ಪರೀಕ್ಷೆಗಳಿಗೆ ಇಂದಿನಿಂದಲೇ ಸಿದ್ಧತೆಯನ್ನು ನಡೆಸಿ. ಪರೀಕ್ಷಾ ಮಾದರಿ ಮತ್ತು ಆನ್ಲೈನ್ ನಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.
Organization Name – Staff Selection Commission Post Name – Combined Graduate Level Total Vacancy – 17727 Posts Application Process: Online Job Location – All Over India
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – June 24, 2024 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – July 27, 2024(Extended) ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – July 28, 2024(Extended) SSC CHSL 2024 ಶ್ರೇಣಿ-1 ಪರೀಕ್ಷೆಯ ದಿನಾಂಕ – Sep- Oct 2024
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಹುದ್ದೆಗಳ ಆಧಾರಿತವಾಗಿ ಸಂಬಂಧಿತ ವಿಷಯದಲ್ಲಿ) ತರಗತಿಯನ್ನು ಪಾಸ್ ಮಾಡಿರಬೇಕು.
ವಯಸ್ಸಿನ ಮಿತಿ:
ಈ ನೇಮಕಾತಿಗೆ ಪ್ರಕಟಿಸಲಾಗಿರುವ ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ:
SSC CGL 2024 ಪರೀಕ್ಷೆಯು ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ;
ಶ್ರೇಣಿ-1: ಲಿಖಿತ ಪರೀಕ್ಷೆ (CBT)
ಶ್ರೇಣಿ-2: ಲಿಖಿತ ಪರೀಕ್ಷೆ (CBT) ಮತ್ತು DEST
ದಾಖಲೆ ಪರಿಶೀಲನೆ
ದೈಹಿಕ/ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – 100 ರೂ.
ಪ.ಜಾತಿ/ಪ.ಪಂ/ESM ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ