ಸಿಬ್ಬಂದಿಯ ಆಯ್ಕೆ ಆಯೋಗವು (SSC) ನಡೆಸಿದ್ದ ಜನರಲ್ ಡ್ಯೂಟಿ (GD) ಕಾನ್ಸ್‌ಟೇಬಲ್ CBT ಪರೀಕ್ಷೆಯ ಫಲಿತಾಂಶವನ್ನು ಇಂದು (ಜುಲೈ 10) SSCಯ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.
ಒಟ್ಟು 46,617 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು. CBT ಪರೀಕ್ಷೆಯನ್ನು 20 ಫೆಬ್ರವರಿ 2024 ರಿಂದ 7 ಮಾರ್ಚ್ 2024 ರವರೆಗೆ ನಡೆಸಿತು ಮತ್ತು 30 ಮಾರ್ಚ್ 2024 ರಂದು ಕೆಲವು ಕೇಂದ್ರಗಳಿಗೆ ಮರು ಪರೀಕ್ಷೆಯನ್ನು ಮಾಡಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಫಲಿತಾಂಶದ ಜೊತೆಗೆ, ಕಟ್-ಆಫ್ ಅಂಕಗಳು ಮತ್ತು ಮೆರಿಟ್ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯ ಅಂತಿಮ ಉತ್ತರ ಪತ್ರಿಯನ್ನು ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು SSC ಅಧಿಕೃತ ವೆಬ್‌ಸೈಟ್ ssc.nic.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿ, ತಮ್ಮ ನೋಂದಣಿ ಸಂಖ್ಯೆ ಹಾಕಿ ಸರ್ಚ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಆನ್ ಲೈನ್ ಮೂಲಕ SSC GD ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.