ಸಿಬ್ಬಂದಿ ಆಯ್ಕೆ ಆಯೋಗ: ಸಬ್-ಇನ್ಸ್‌ಪೆಕ್ಟರ್(ಎಸ್‌ಐ) ಹುದ್ದೆಗಳ ಭರ್ತಿ

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು(ಎಸ್‌ಎಸ್‌ಸಿ) ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ಪಡೆಗಳಲ್ಲಿನ(ಸಿಎಪಿಎಫ್‌ಸ್) ಸಬ್-ಇನ್ಸ್‌ಪೆಕ್ಟರ್(ಎಸ್‌ಐ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಪುರುಷ 205, ಮಹಿಳೆ 112 ಹುದ್ದೆಗಳು. ಸಿಎಪಿಎಫ್‌ಸ್‌ನ 1320 ಹುದ್ದೆ ಹಾಗೂ ಸಿಐಎಸ್‌ಎಫ್‌ ಫೈರ್‌ 234 ಹುದ್ದೆ ಸೇರಿದಂತೆ ಒಟ್ಟು 1771 ಹುದ್ದೆಗಳಿಗೆ ಸದರಿ ಪರೀಕ್ಷೆಯ ಮೂಲಕ ಭರ್ತಿ ಪ್ರಕ್ರಿಯೆ ನಡೆಯಲಿದೆ. ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ, ಬಿ,ಎಸ್ಸಿ, ಡಿಪ್ಲೊಮಾ ಹೊಂದಿರುವವರು ಆಯೋಗದ ಅಧಿಕೃತ ಜಾಲತಾಣ https://ssc.gov.in/loginದ ಮೂಲಕ ಆನ್‌ಲೈನ್‌ ಮೂಲಕ … More

ಎಸ್‌ಎಸ್‌ಸಿ: ಕ್ಲರ್ಕ್, ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನ

ನವದೆಹಲಿ ಸೆ.07: ಸಿಬ್ಬಂದಿ ನೇಮಕಾತಿ ಆಯೋಗವು(ಎಸ್‌ಎಸ್‌ಸಿ) ವಿವಿಧ ಹುದ್ದೆಗಳ ಭರ್ತಿಗಾಗಿ 2026ನೇ ಸಾಲಿನ ‘ಕಂಬೈನ್ಡ್ ಹೈಯರ್ ಸೆಕೆಂಡರಿ(10+2) ಲೆವೆಲ್ ಎಕ್ಸಾಮಿನೇಷನ್'(ಸಿಹೆಚ್‌ಎಸ್‌ಎಲ್‌) ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪರೀಕ್ಷೆಯ ಮೂಲಕ ಲೋವರ್‌ ಡಿವಿಷನ್‌ ಕ್ಲರ್ಕ್/ಜೂನಿಯರ್‌ ಸೆಕ್ರೆಟಿಯೇಟ್ ಮತ್ತು ಇತರ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸುಮಾರು 2,536 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಯಾ ಹುದ್ದೆಗೆ ಅನುಗುಣವಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಳ್ಳಲು ಅರ್ಹರು. ಆಸಕ್ತ … More

ಸಿಬ್ಬಂದಿ ಆಯ್ಕೆ ಆಯೋಗ: 12,256 ಹುದ್ದೆಗಳ ಬೃಹತ್ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನ

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನ ಸಂಯೋಜಿತ ಪದವಿ ಹಂತದ ಪರೀಕ್ಷೆಯ ಮುಖೇನ ಸುಮಾರು 12,256 ಗ್ರೂಪ್ “ಬಿ” ಹಾಗೂ ಗ್ರೂಪ್ “ಸಿ” ನಾನಾ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿ, ಸಹಾಯಕ ವಿಭಾಗಾಧಿಕಾರಿ, ಇನ್ಸ್ಪೆಕ್ಟರ್, ಆಡಿಟರ್, ಅಕೌಂಟೆಂಟ್ ಹಾಗೂ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಇತರೆ ಹುದ್ದೆಗಳ ನೇಮಕಾತಿಗಾಗಿ ಸದರಿ ಪರೀಕ್ಷೆಯ ಮೂಲಕ … More

SSC ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸದರಿ ಪರೀಕ್ಷೆಯಲ್ಲಿ ಒಟ್ಟು 731 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲಿದೆ. 12ನೇ ತರಗತಿ ಉತ್ತೀರ್ಣರಾದ ಉದ್ಯೋಗಾಕಾಂಕ್ಷಿಗಳು ಎಸ್‌ಎಸ್‌ಸಿ ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಮೇ 15ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ (12ನೇ … More

SSC JHT 2026: ಎಸ್‌ಎಸ್‌ಸಿ ಹಿಂದಿ ಅನುವಾದಕ ಹುದ್ದೆಗಳ ನೇಮಕಾತಿ

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ)ವು 2026ನೇ ಸಾಲಿನ ಸಂಯೋಜಿತ ಹಿಂದಿ ಅನುವಾದಕರ ಪರೀಕ್ಷೆಯ ಮೂಲಕ ಗ್ರೂಪ್ ‘ಬಿ’ ನಾನ್ ಗೆಜೆಟೆಡ್ ಹಿಂದಿ ಅನುವಾದಕ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಜೂನಿಯರ್ ಹಿಂದಿ ಅನುವಾದಕ, ಜೂನಿಯರ್ ಅನುವಾದ ಅಧಿಕಾರಿ, ಜೂನಿಯರ್ ಅನುವಾದಕ, ಹಿರಿಯ ಹಿಂದಿ ಅನುವಾದಕ ಮತ್ತು ಹಿರಿಯ ಅನುವಾದ ಅಧಿಕಾರಿ ಸೇರಿದಂತೆ ಒಟ್ಟು 84 ಹುದ್ದೆಗಳ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 14 ಕೊನೆಯದಿನವಾಗಿದೆ. ಹಿಂದಿ/ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನಿಗದಿತ ಅರ್ಹತಾಮಾನದಂಡಗಳನ್ನು … More

SSC ಆಯ್ಕೆ ಹಂತ-14ರಡಿ ವಿವಿಧ ಹುದ್ದೆಗಳ ಬೃಹತ್‌ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗವು ಆಯ್ಕೆ ಹಂತ-XIVರಡಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಈಗಾಗಲೇ ಪ್ರಾರಂಭವಾಗಿದೆ. ಸ್ಟೆನೋಗ್ರಾಫರ್, ಲ್ಯಾಬೋರೇಟರಿ ಅಟೆಂಡೆಂಟ್, ಜೂನಿಯರ್ ಎಂಜಿನಿಯರ್, ಸೈಂಟಿಫಿಕ್ ಅಸಿಸ್ಟೆಂಟ್, ಅಕೌಂಟೆಂಟ್ ಹಾಗೂ ಮೆಕಾನಿಕ್ ಸೇರಿದಂತೆ ಇತರೆ ಒಟ್ಟು 3003 ಸ್ಥಾನಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಮೇ 04 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು SSC ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ … More

SSC ಜೂ.ಎಂಜಿನಿಯರ್ 2025: ಪತ್ರಿಕೆ-Iರ ಫಲಿತಾಂಶ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು ಜೂನಿಯರ್ ಎಂಜಿನಿಯರ್(ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ 2025ರ ಡಿ.03 ರಿಂದ 06 ರವರೆಗೆ ಹಾಗೂ 13ರಂದು ನಡೆಸಲಾದ ಪತ್ರಿಕೆ-I(ಕಂಪ್ಯೂಟರ್‌ ಆಧಾರಿತ ಪರೀಕ್ಷೆ)ರ ಫಲಿತಾಂಶವನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಸದರಿ ಪತ್ರಿಕೆಯಲ್ಲಿ ಸಿವಿಲ್ ಎಂಜಿನಿಯರ್‌ ಹುದ್ದೆಗೆ 11593 ಅಭ್ಯರ್ಥಿಗಳು, ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆಗೆ 4014 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ ಆಗಿದ್ದು, ಮುಂದಿನ ಹಂತದ ಪತ್ರಿಕೆ-IIಕ್ಕೆ ಅರ್ಹತೆ ಹೊಂದಿದ್ದಾರೆ. ಎಸ್‌ಎಸ್‌ಸಿ ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ ಆಫ್‌ ವಿವರಗಳನ್ನು ಪರಿಶೀಲಿಸಬಹುದು. … More

SSC: ತಾತ್ಕಾಲಿಕ ಪರೀಕ್ಷಾ ಕ್ಯಾಲೆಂಡರ್‌ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗ(SSC) 2026-27ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದೆ. 2026ರಲ್ಲಿ ಅಧಿಸೂಚಿತ ಪರೀಕ್ಷೆಗಳಾದ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಸಂಯೋಜಿತ ಪದವಿ ಹಂತದ ಪರೀಕ್ಷೆ, ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ, ಆಯ್ಕೆ ನಂತರದ ಪರೀಕ್ಷೆ, ಹಂತ-XIV, ಸಂಯೋಜಿತ ಹೈಯರ್ ಸೆಕೆಂಡರಿ (10+2) ಮಟ್ಟದ ಪರೀಕ್ಷೆ, ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಪರೀಕ್ಷೆ, ಸಂಯೋಜಿತ ಹಿಂದಿ ಅನುವಾದಕರ ಪರೀಕ್ಷೆ, ಬಹು-ಕಾರ್ಯ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ … More

SSC ದೆಹಲಿ ಪೊಲೀಸ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು 2025-26ನೇ ಸಾಲಿನ ದೆಹಲಿ ಪೊಲೀಸ್ ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪ್ರತಿ ವರ್ಷ ಸಿಬ್ಬಂದಿ ಆಯ್ಕೆ ಆಯೋಗವು ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಲಕ್ಷಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ವರ್ಷದ 2025ರ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಯ ದಿನಾಂಕಗಳನ್ನು ನಿಗದಿ ಪಡಿಸಿಲಾಗಿದ್ದು ಅಧಿಕೃತ ವೇಳಾಪಟ್ಟಿಯನ್ನು SSC ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆಯಾಗಿದೆ. ಸದರಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು. 2025ರ ದೆಹಲಿ … More

SSC JE 2025 Exam Date: ಜೂನಿಯರ್ ಎಂಜಿನಿಯರ್ ಪತ್ರಿಕೆ-I ಪರೀಕ್ಷಾ ದಿನಾಂಕ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು 2025ರ ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ (ಪತ್ರಿಕೆ-I) ರ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳಿಂದ ಸ್ವಯಂ-ಸ್ಲಾಟ್ ಆಯ್ಕೆಗಾಗಿ ಕಾಲಾವಕಾಶ ನೀಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್‌ (JE) (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟಿಕಲ್) ಒಟ್ಟು 1731 ಹುದ್ದೆಗಳ ನೇಮಕಾತಿಗಾಗಿ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸದರಿ ನೇಮಕಾತಿಗಾಗಿ … More