ತುಮಕೂರು: ಜಿಲ್ಲೆಯ ಮಹಾನಗರಪಾಲಿಕೆ ಸೇರಿದಂತೆ ತಿಪಟೂರು, ಶಿರಾ ನಗರಸಭೆಗಳಿಗೆ ಪೌರಕಾರ್ಮಿಕ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಕೆಗೆ ಏ.09ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶವಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಆಯಾ ಸಂಬಂಧಿತ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಜೊತೆಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 25, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 09, 2026
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ತಿಳಿದಿರಬೇಕು.
• ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಆಯಾ ಸಂಬಂಧಿತ ಸ್ಥಳೀಯ ಸಂಸ್ಥೆಯಲ್ಲಿ ಪ್ರಸ್ತುತ ಪೌರಕಾರ್ಮಿಕರಾಗಿ ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಕನಿಷ್ಠ 01 ವರ್ಷ ಪೌರಕಾರ್ಮಿಕರಾಗಿ, ಲೋಡರ್ಸ್/ಯುಜಿಡಿ ಹೆಲ್ಪರ್ಸ್, ಕ್ಲೀನರ್, ಹೆಲ್ಪರ್ಸ್, ತ್ಯಾಜ್ಯ ಸಂಸ್ಕರಣ ಘಟಕ, ಸಾರ್ವಜನಿಕ ನಿರ್ವಹಣೆ ಶೌಚಾಲಯ, ಶೂನ್ಯ ತ್ಯಾಜ್ಯ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರಬೇಕು ಹಾಗೂ ಇ.ಎಸ್.ಐ, ಪಿ.ಎಫ್ ಸೌಲಭ್ಯವನ್ನು ಹೊಂದಿರಬೇಕು.
• ಅರ್ಜಿ ಸಲ್ಲಿಸುವ ಅಭ್ಯರ್ಥಿಯು “ಪೌರಕಾರ್ಮಿಕರಾಗಿ ಹೊರಗುತ್ತಿಗೆ/ ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವಾಗ ಕೋವಿಡ್-19ರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅಥವಾ ಇತರೆ ಕಾರಣಗಳಿಂದಾಗಿ ಮರಣ ಹೊಂದಿರುವ” ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಬಹುದು.
• ಮ್ಯಾನ್ಯುಯಲ್ ಸ್ಯಾವೆಂಜರ್ ಅಧಿನಿಯಮದಡಿ ಗುರುತಿಸಲ್ಪಟ್ಟ ಸಂತ್ರಸ್ಥರುಗಳು ಅಥವಾ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಕನಿಷ್ಠ ಮಿತಿ 18 ವರ್ಷಗಳು
ಗರಿಷ್ಠ ಮಿತಿ 50 ವರ್ಷಗಳು
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
• ಅಭ್ಯರ್ಥಿಗಳ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಜನ್ಮ ದಿನಾಂಕದ ದೃಢೀಕರಣಕ್ಕಾಗಿ ವರ್ಗಾವಣೆ ಪ್ರಮಾಣ ಪತ್ರ/ಜನನ ಪ್ರಮಾಣ ಪತ್ರ/ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ (EPIC)/ಗುರುತಿನ ಚೀಟಿ
• ವೈದ್ಯಕೀಯ ದೃಢೀಕರಣ ಪತ್ರ
• ಸೇವಾ ಪ್ರಮಾಣ ಪತ್ರ, ಇತ್ಯಾದಿ ಅಗತ್ಯ ದಾಖಲಾತಿಗಳು…
ಆಯ್ಕೆ ವಿಧಾನ:
ಪೌರಾಡಳಿತ ನಿರ್ದೇಶನಾಲಯದ ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ನೇರ ಪಾವತಿಯಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯನ್ವಯ ವೇತನ ಹಾಗೂ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ಪರಿಷ್ಕರಿಸುವ ವೇತನದೊಂದಿಗೆ ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
• ಮೇಲಿನ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಮ್ಮ ಸಂಬಂಧಿತ ತುಮಕೂರು ಮಹಾನಗರ ಪಾಲಿಕೆ/ನಗರಸಭೆ, ತಿಪಟೂರು/ಶಿರಾ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಅರ್ಜಿ ಲಕೋಟೆಯ ಮೇಲೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ನಮೂದಿಸಿ.
• ಅರ್ಜಿಯನ್ನು *ತುಮಕೂರು ಮಹಾನಗರ ಪಾಲಿಕೆ/ನಗರಸಭೆ, ತಿಪಟೂರು/ಶಿರಾ ನಗರಸಭೆ* ಕಚೇರಿಗೆ ಏಪ್ರಿಲ್ 09 ಸಂಜೆ 5 ರೊಳಗೆ ತಲುಪುವಂತೆ ಸಲ್ಲಿಸಬಹುದು.
Important Direct Links:
| Official Notification PDF | Download |
| Official Website | tumakurududc.mrc.gov.in |
| More Updates | KarnatakaHelp.in |



