2nd PUC Results 2024 Direct Link: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ನಡೆಸಿದ್ದ ದ್ವಿತೀಯ PUC ಪರೀಕ್ಷೆಯು ಅಂತಿಮಗೊಂಡಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಹಾಗಾದರೆ ಫಲಿತಾಂಶ ಯಾವಾಗ ಹೇಗೆ ಪ್ರಕಟವಾಗುತ್ತದೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
2nd PUC ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 22, 2024 ರವರೆಗೆ ಪರೀಕ್ಷಾ ಮಂಡಳಿಯು ನಡೆಸಿದ್ದು, ಈಗಾಗಲೇ ಫಲಿತಾಂಶ ಪ್ರಕಟಣೆಯ ಬಗ್ಗೆ ಅಧಿಕೃತವಾಗಿ ಇಲಾಖೆಯು ತಿಳಿಸಿದ್ದು. ಏಪ್ರಿಲ್ 10, 2024 ರಂದು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ ಆದ karnataka.gov.in, pue.kar.nic.in, karresults.nic.in, ಮತ್ತು kseeb.kar.nic.in. ಗಳಲ್ಲಿ ಪ್ರಕಟಿಸಲಿದೆ.
2nd PUC ಫಲಿತಾಂಶವನ್ನು ನೋಡುವುದಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ
ಮೊದಲಿಗೆ ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಿಗೆ karnataka.gov.in, pue.kar.nic.in, karresults.nic.in, ಮತ್ತು kseeb.kar.nic.in. ಭೇಟಿ ನೀಡಿ.
ನಂತರ ‘Results‘ ಲಿಂಕ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ.
ಫಲಿತಾಂಶವು ನಿಮ್ಮ ಪರದೆ ಮೇಲೆ ಕಾಣಿಸಿಕೊಳ್ಳುತ್ತದ ಡೌನ್‌ಲೋಡ್ ಮಾಡಿಕೊಳ್ಳಿ.
How to Check 2nd PUC Results 2024 Via SMS
ಪಿಯುಸಿ ಫಲಿತಾಂಶ 2024 SMS ಮೂಲಕ ಪರಿಶೀಲಿಸುವುದು ಹೇಗೆ
ನಿಮ್ಮ ಫೋನ್‌ನ SMS ಅಪ್ಲಿಕೇಶನ್‌ಗೆ ತೆರೆಯಿರಿ.
ನಂತರ ಅಲ್ಲಿ ‘KAR12‘ ಎಂದು ಟೈಪ್ ಮಾಡಿ ಸ್ಪೇಸ್ ನೀಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ.
ಈಗ ಆ ಸಂದೇಶವನ್ನು ಸಂದೇಶವನ್ನು ‘56263‘ ಸಂಖ್ಯೆಗೆ ಕಳುಹಿಸಿ.
ಈ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಫಲಿತಾಂಶವನ್ನು SMS ಮೂಲಕ ಮಾಹಿತಿಯನ್ನು ಪಡೆಯಬಹುದು. ಇದು ವಿಷಯಗಳ ಅಂಕಗಳು ಮತ್ತು ತರಗತಿಯಲ್ಲಿ ಪಡೆದ ಒಟ್ಟಾರೆ ಅಂಕಗಳ ಮಾಹಿತಿಯನ್ನು ಸಂದೇಶದ ಮೂಲಕ ಕಳುಹಿಸುತ್ತದೆ