ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ 70 ಪದವೀಧರ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ತಾಂತ್ರಿಕೇತರ ವಿಭಾಗಕ್ಕೆ ಆಯ್ಕೆ ಮಾಡಿಕೊಂಡು, 03 ವರ್ಷದ ಅವಧಿಯವರೆಗೆ ತರಬೇತಿ ನೀಡಲಿದೆ. ಪದವೀಧರ ಅಭ್ಯರ್ಥಿಗಳು ಅಧಿಕೃತ ಲಿಂಕ್ (https://docs.google.com/forms/d/e/1FAIpQLSfZcDbmuZjSHthVrRJufJK-_8n1_V34Ol3XvaBpaJPfbHAEow/viewform?usp=header)ನ ಮೂಲಕ ಫೆ.28ರೊಳಗೆ ನೋಂದಣಿಯಾಗಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ
- ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 28, 2026
- ದಾಖಲೆ ಪರಿಶೀಲನೆಯ ತಾತ್ಕಾಲಿಕ ದಿನಾಂಕ – ಮಾರ್ಚ್ 03, 2026 (ದಾಖಲೆ ಪರಿಶೀಲನೆಯ ಸ್ಥಳವನ್ನು ನಂತರ ತಿಳಿಸಲಾಗುವುದು)
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 2023 ನಂತರದಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ಆಡಳಿತ, ಕಂಪ್ಯೂಟರ್ ಅಪ್ಲಿಕೇಶನ್, ಹೋಟೆಲ್ ನಿರ್ವಹಣೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ನಿರ್ವಹಣಾ ವಿಜ್ಞಾನ, ವ್ಯವಹಾರ ಅಧ್ಯಯನ ವಿಷಯಗಳಲ್ಲಿ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
• ಈಗಾಗಲೇ ಬೇರೆಡೆ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿಯಲ್ಲಿ ನೋಂದಾಯಿಸಿಕೊಂಡಿರುವ/ಪಡೆದಿರುವ/ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ವಯೋಮಿತಿ:
28-02-2026 ರಂತೆ;
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 25 ವರ್ಷಗಳು
ವಯೋಮಿತಿ ಸಡಿಲಿಕೆ; ಪ.ಜಾತಿ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ (NCL) ಅಭ್ಯರ್ಥಿಗಳಿಗೆ – 03 ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ದಾಖಲೆ ಪರಿಶೀಲನೆ
ಸ್ಟೈಫಂಡ್:
ಮಾಹೆಯಾನ ₹12,300 ಸ್ಟೈಫಂಡ್ ಮೊತ್ತವನ್ನು ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ಪ್ರಕ್ರಿಯೆ..
• ಗೂಗಲ್ ಫಾರ್ಮ್ ಲಿಂಕ್ https://docs.google.com/forms/d/e/1FAIpQLSfZcDbmuZjSHthVrRJufJK-_8n1_V34Ol3XvaBpaJPfbHAEow/viewform ಗೆ ಭೇಟಿ ನೀಡಿ.
• ಬಳಿಕ ಅಭ್ಯರ್ಥಿಗಳ ಮಾನ್ಯವಾದ ಇಮೇಲ್ ಐಡಿ ನಮೂದಿಸಿ.
• ಫಾರ್ಮ್ ನಲ್ಲಿ ಕೇಳಲಾಗುವ ಸ್ವ ವಿವರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಕೊನೆಯಲ್ಲಿ ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.iitb.ac.in |
| More Updates | KarnatakaHelp.in |
I am interested