ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ನವರತ್ನ ಪಿಎಸ್‌ಯು ಸಂಸ್ಥೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ಸಂಸ್ಥೆಯು ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 200 ಹುದ್ದೆ, ಮೆಕ್ಯಾನಿಕಲ್ ವಿಭಾಗದಲ್ಲಿ 150 ಹುದ್ದೆಗಳು ಜತೆಗೆ ಬ್ಯಾಕ್‌ಲಾಗ್ ಸೇರಿದಂತೆ ಒಟ್ಟು 350 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಪ್ರಾರಂಭದ ದಿನಾಂಕ- ಅಕ್ಟೋಬರ್ 28
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ- ನವೆಂಬರ್ 18(ರಾತ್ರಿ 11:59 ಗಂಟೆಯವರೆಗೆ).
- ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ) ನಡೆಯುವ ತಾತ್ಕಾಲಿಕ ದಿನಾಂಕ- ಡಿಸೆಂಬರ್ 22
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಎಐಸಿಟಿಇ ಅನುಮೋದಿತ ಕಾಲೇಜುಗಳಿಂದ ಸಂಬಂಧಪಟ್ಟ ವಿಭಾಗಗಳಲ್ಲಿ (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಮತ್ತು ಅವುಗಳ ಸಂಬಂಧಿತ ಶಾಖೆಗಳು) 4 ವರ್ಷದ ಬಿ.ಇ/ಬಿ.ಟೆಕ್/ಬಿ.ಎಸ್ಸಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಎಎಂಐಇ/ಎಎಂಐಇಟಿಇ/ಜಿಐಇಟಿಇ ಉತ್ತೀರ್ಣರಾದವರೂ ಸಹ ಅರ್ಹರಾಗಿರುತ್ತಾರೆ.
ಅಂಕಗಳ ಮಿತಿ: ಸಾಮಾನ್ಯ(ಯುಆರ್), ಒಬಿಸಿ(ಎನ್‌ಸಿಎಲ್) ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಪ್ರಥಮ ದರ್ಜೆ(First Class) ಯಲ್ಲಿ ತೇರ್ಗಡೆಯಾಗಿರಬೇಕು. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕೇವಲ ತೇರ್ಗಡೆ(Pass Class) ಸಾಕು.
ವಯೋಮಿತಿ:
01.10.2026ಕ್ಕೆ ಅನ್ವಯಿಸುವಂತೆ;
ಸಾಮಾನ್ಯ(ಯುಆರ್) ವರ್ಗ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 25 ವರ್ಷಗಳು.
ವಯೋಮಿತಿ ಸಡಿಲಿಕೆ: ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷಗಳು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು(ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗದ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಡಿಲಿಕೆ ಅನ್ವಯಿಸುತ್ತದೆ), ಮಾಜಿ ಸೈನಿಕರಿಗೆ(Ex-Servicemen) 5 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಆಯ್ಕೆಯು ಎರಡು ಹಂತಗಳನ್ನು ಒಳಗೊಂಡಿರುತ್ತದೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಇದು 120 ನಿಮಿಷಗಳ ಅವಧಿಯದ್ದಾಗಿದ್ದು, ಒಟ್ಟು 125 ಪ್ರಶ್ನೆಗಳನ್ನು (100 ತಾಂತ್ರಿಕ ಮತ್ತು 25 ಸಾಮಾನ್ಯ ಆಪ್ಟಿಟ್ಯೂಡ್ ಹಾಗೂ ರೀಸನಿಂಗ್) ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಋಣಾತ್ಮಕ (Negative) ಅಂಕಗಳ ಕಡಿತವಿರುತ್ತದೆ.
- ಸಂದರ್ಶನ (Interview): ಲಿಖಿತ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ವೇಟೇಜ್: ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ 85 ಅಂಕಗಳು ಮತ್ತು ಸಂದರ್ಶನಕ್ಕೆ 15 ಅಂಕಗಳ ವೇಟೇಜ್ ಇರುತ್ತದೆ.
ಕನಿಷ್ಠ ಅರ್ಹತಾ ಅಂಕಗಳು: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎರಡರಲ್ಲೂ ಪ್ರತ್ಯೇಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಶೇ.35 ಹಾಗೂ ಎಸ್‌ಸಿ/ಎಸ್‌ಟಿ/ಪಿಡಬ್ಲೂಬಿಡಿ ಅಭ್ಯರ್ಥಿಗಳಿಗೆ ಶೇ.30 ರಷ್ಟು ಕನಿಷ್ಠ ಅಂಕಗಳು ಕಡ್ಡಾಯವಾಗಿರುತ್ತದೆ.
ಸಂಬಳ ಮತ್ತು ಇತರ ಸೌಲಭ್ಯಗಳು:
ವೇತನ ಶ್ರೇಣಿಯು ರೂ.40,000-3%-ರೂ.1,40,000 (E-II ಗ್ರೇಡ್) ಇರಲಿದೆ. ಜತೆಗೆ ಡಿಎ(DA), ಹೆಚ್‌ಆರ್‌ಎ(HRA), ಸಾರಿಗೆ ಭತ್ಯೆ, ವೈದ್ಯಕೀಯ ಮರುಪಾವತಿ ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PRP) ಮುಂತಾದ ಸೌಲಭ್ಯಗಳು ದೊರೆಯಲಿವೆ.
ವಾರ್ಷಿಕ ಪ್ಯಾಕೇಜ್ (CTC): ಅಂದಾಜು ರೂ.13 ಲಕ್ಷಗಳು.
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ, ಒಬಿಸಿ(ಎನ್‌ಸಿಎಲ್) ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.1180/- (ಶೇ.18 ಜಿಎಸ್‌ಟಿ ಸೇರಿದೆ).
- ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ ಮತ್ತು ಮಾಜಿ ಸೈನಿಕ(ಇಎಸ್‌ಎಂ) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?:
ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ www.bel-india.in ನ “Careers” ವಿಭಾಗಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಹಂತ 1(ನೋಂದಣಿ): ಮೊದಲು ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಳ್ಳಬೇಕು. ಆಗ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಲಭ್ಯವಾಗುತ್ತದೆ.
ಹಂತ 2(ಅರ್ಜಿ ಭರ್ತಿ): ಲಾಗಿನ್ ಆದ ನಂತರ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿಗಳನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು.
ಶುಲ್ಕ ಪಾವತಿ: ಅರ್ಜಿ ಸಲ್ಲಿಕೆಯ ನಂತರ ಅರ್ಹ ಅಭ್ಯರ್ಥಿಗಳನ್ನು ಸ್ವಯಂಚಾಲಿತವಾಗಿ ‘SBI e-Pay Lite’ ಪಾವತಿ ಗೇಟ್‌ವೇಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಆನ್‌ಲೈನ್ ಮೂಲಕ ತಮಗೆ ಅನ್ವಯವಾಗುವ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.bel-india.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |