ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ!

Published on:

ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಕೆಕೆ ಹಾಗೂ ಆರ್‌ಪಿಸಿ ವೃಂದದ 15000 ನಾನಾ ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗಳ(ಪಿಎಸ್‌ಟಿ/ಜಿಪಿಟಿ/ಸಿಎಸ್‌ಟಿ/ಹೆಚ್‌ಎಸ್‌ಟಿ/ಪಿಇ-ಗ್ರೇಡ್-I/ಪಿಇ-ಗ್ರೇಡ್-II) ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ನ.16ರವರೆಗೆ ಮತ್ತೊಮ್ಮೆ ವಿಸ್ತರಿಸಿದೆ.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆಗಳಾದ 080- 22483145/22483140/9449588020ಗೆ ಕರೆಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ಲಿಂಕ್‌:  http://schooleducation.karnataka.gov.in/cacell ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೇ ಈ ಕೂಡಲೇ ಅರ್ಜಿಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಇಲಾಖೆಯು ಕೋರಿಕೊಂಡಿದೆ.

ಈ ಹಿಂದೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅ.26ರವರೆಗೆ ಮತ್ತು ಅರ್ಜಿ ಶುಲ್ಕ ಪಾವತಿಗೆ ಅ.28ರವರೆಗೆ ಅವಕಾಶ ನೀಡಲಾಗಿತ್ತು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

1 thought on “ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ!”

  1. ಬೆವೆಂಡಗ್ಸ್ಬೇಬ್ಸ್ಕ್ರೈಸ್ಬಜ್ಗ್ಮ್ಸ್ಬ್ದಮ್ಸ್ಗ್ಫ್ಬ್ಚ್ಡ್ನ್ದಸವ್ಸ್ಮ್ದ್ಬ್ದ್
    ಬೀವ್ಸ್ನ್ವದ್ವಸ್ಬಕ್ಸ್ಬ್ಸಸ್ನ್ಸ್ಬ್ಜೆಸ್ ಸಜ್ಯೋಶ್ವ್ಸ್
    ಬಜೆಸ್ಜ್ಸ್ಬವ್ದ್ದದ್ವಫಂಡ್ಮಫ್ಹ್ತ್ಡ್

    Reply

Leave a Comment