ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ವಿವಿಧ ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲಿ ಕೆಕೆ ಹಾಗೂ ಉಳಿಕೆ ಮೂಲಕ ವೃಂದದಡಿ ಖಾಲಿ ಇರುವ ವಿವಿಧ ಬೋಧನಾ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗಡುವನ್ನು ಮತ್ತೊಮ್ಮೆ ಅಕ್ಟೋಬರ್ 26ರವರೆಗೆ ವಿಸ್ತರಿಸಿದೆ.
ಕೆಕೆ ವೃಂದದಲ್ಲಿ 6,967 ಹುದ್ದೆ ಹಾಗೂ ಉಳಿಕೆ ಮೂಲಕ ವೃಂದದಲ್ಲಿ 8,033 ಹುದ್ದೆ ಸೇರಿದಂತೆ ಒಟ್ಟು 15000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ನಿಗದಿತ ಶೈಕ್ಷಣಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ https://schooleducation.kar.nic.in ದ ಮೂಲಕ ಅರ್ಜಿ ಸಲ್ಲಿಸಬಹುದು.
ಜಿಲ್ಲಾವಾರು ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್‌ಗಳನ್ನು ಈ ಸುದ್ದಿಯಲ್ಲಿ ಲಗತ್ತಿಸಲಾಗಿದ್ದು, ಕೊನೆವರೆಗೂ ಓದಿ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- ಆಗಸ್ಟ್ 19
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 26(ವಿಸ್ತರಣೆ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 28(ವಿಸ್ತರಣೆ)
- ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ದಿನಾಂಕಗಳು- ಶೀಘ್ರದಲ್ಲೇ ಪ್ರಕಟ
ಜಿಲ್ಲಾವಾರು ಮತ್ತು ವೃಂದವಾರು ಹುದ್ದೆಗಳ ಸಂಖ್ಯೆ:
ಈ ಕೆಳಗೆ ಕೆಲವು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳು ಇಂತಿವೆ;
| ಜಿಲ್ಲೆ | ವೃಂದ (ತರಗತಿ) | ಹುದ್ದೆಯ ವಿವರ | ಹುದ್ದೆಗಳ ಸಂಖ್ಯೆ |
|---|---|---|---|
| ಕೊಪ್ಪಳ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ (ಕಲ್ಯಾಣ ಕರ್ನಾಟಕ – ಶೇ. 80) | 78 |
| PST (1 ರಿಂದ 8) | ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II (ಕಲ್ಯಾಣ ಕರ್ನಾಟಕ – ಶೇ. 80) | 15 | |
| PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ (ಕಲ್ಯಾಣ ಕರ್ನಾಟಕೇತರ – ಶೇ. 20) | 19 | |
| PST (1 ರಿಂದ 8) | ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II (ಕಲ್ಯಾಣ ಕರ್ನಾಟಕೇತರ – ಶೇ. 20) | 3 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 164 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಆಂಗ್ಲ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 24 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (ಗಣಿತ ಮತ್ತು ವಿಜ್ಞಾನ) (ಕಲ್ಯಾಣ ಕರ್ನಾಟಕ – ಶೇ. 80) | 151 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕೇತರ – ಶೇ. 20) | 41 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಆಂಗ್ಲ ಭಾಷೆ) (ಕಲ್ಯಾಣ ಕರ್ನಾಟಕೇತರ – ಶೇ. 20) | 6 | |
| ಯಾದಗಿರಿ | GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 124 |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕೇತರ – ಶೇ. 20) | 31 | |
| PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ (ಕನ್ನಡ ಮಾಧ್ಯಮ) (ಕಲ್ಯಾಣ ಕರ್ನಾಟಕೇತರ – ಶೇ. 20) | 15 | |
| ಕಲಬುರಗಿ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ ಕನ್ನಡ (ಕಲ್ಯಾಣ ಕರ್ನಾಟಕೇತರ – ಶೇ. 20) | 36 |
| PST (1 ರಿಂದ 8) | ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II (ಕಲ್ಯಾಣ ಕರ್ನಾಟಕೇತರ – ಶೇ. 20) | 4 | |
| GPT (1 ರಿಂದ 8) | ಗಣಕ ವಿಜ್ಞಾನ ಶಿಕ್ಷಕರು (ಕಲ್ಯಾಣ ಕರ್ನಾಟಕ – ಶೇ. 80) | 11 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 88 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಆಂಗ್ಲ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 32 | |
| ಬೀದರ್ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ ಕನ್ನಡ (ಕಲ್ಯಾಣ ಕರ್ನಾಟಕೇತರ – ಶೇ. 20) | 24 |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಆಂಗ್ಲ ಭಾಷೆ) (ಕಲ್ಯಾಣ ಕರ್ನಾಟಕ – ಶೇ. 80) | 25 | |
| ಬೆಂಗಳೂರು ಉತ್ತರ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ ಕನ್ನಡ (ರಾಜ್ಯ ಮಟ್ಟದ ಸ್ಥಳೀಯ ವೃಂದ – ಶೇ. 8) | 1 |
| ಬೆಂಗಳೂರು ಕೇಂದ್ರ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ ಕನ್ನಡ (ಕಲ್ಯಾಣ ಕರ್ನಾಟಕ 371ಜೆ – ಶೇ. 8) | 1 |
| GPT (6 ರಿಂದ 8) | ಸಮಾಜ ವಿಜ್ಞಾನ ಕನ್ನಡ ಮಾಧ್ಯಮ (ಕಲ್ಯಾಣ ಕರ್ನಾಟಕ 371ಜೆ – ಶೇ. 8) | 14 | |
| GPT (6 ರಿಂದ 8) | ಗಣಕ ವಿಜ್ಞಾನ (ಕಲ್ಯಾಣ ಕರ್ನಾಟಕ 371ಜೆ – ಶೇ. 8) | 1 | |
| GPT (6 ರಿಂದ 8) | ಜೀವ ವಿಜ್ಞಾನ ಕನ್ನಡ ಮಾಧ್ಯಮ (ಕಲ್ಯಾಣ ಕರ್ನಾಟಕೇತರ – ಶೇ. 92) | 83 | |
| GPT (6 ರಿಂದ 8) | ಭಾಷಾ ಇಂಗ್ಲೀಷ್ (ಕಲ್ಯಾಣ ಕರ್ನಾಟಕೇತರ – ಶೇ. 92) | 117 | |
| GPT (6 ರಿಂದ 8) | ಸಮಾಜ ವಿಜ್ಞಾನ ಕನ್ನಡ ಮಾಧ್ಯಮ (ಕಲ್ಯಾಣ ಕರ್ನಾಟಕೇತರ – ಶೇ. 92) | 77 | |
| GPT (6 ರಿಂದ 8) | ಗಣಕ ವಿಜ್ಞಾನ (ಕಲ್ಯಾಣ ಕರ್ನಾಟಕೇತರ – ಶೇ. 92) | 6 | |
| GPT (6 ರಿಂದ 8) | ಗಣಿತ ವಿಜ್ಞಾನ ಕನ್ನಡ ಮಾಧ್ಯಮ (ಕಲ್ಯಾಣ ಕರ್ನಾಟಕೇತರ – ಶೇ. 92) | 25 | |
| ಚಿಕ್ಕೋಡಿ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ (ಕನ್ನಡ ಮಾಧ್ಯಮ) (ಕಲ್ಯಾಣ ಕರ್ನಾಟಕೇತರ) | 6 |
| PST (1 ರಿಂದ 8) | ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II (ಕಲ್ಯಾಣ ಕರ್ನಾಟಕೇತರ) | 2 | |
| ಹಾವೇರಿ | PST (1 ರಿಂದ 5) | ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ ಕನ್ನಡ (ಕನ್ನಡ ಮಾಧ್ಯಮ) | 3 |
| PST (1 ರಿಂದ 8) | ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II | 2 | |
| ಬಳ್ಳಾರಿ | GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಕನ್ನಡ ಭಾಷೆ) (ಕಲ್ಯಾಣ ಕರ್ನಾಟಕೇತರ – ಶೇ. 20) | 16 |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಆಂಗ್ಲ ಭಾಷೆ) (ಕಲ್ಯಾಣ ಕರ್ನಾಟಕೇತರ – ಶೇ. 20) | 4 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (ಗಣಿತ ಮತ್ತು ವಿಜ್ಞಾನ) (ಕಲ್ಯಾಣ ಕರ್ನಾಟಕೇತರ – ಶೇ. 20) | 29 | |
| GPT (6 ರಿಂದ 8) | ಪದವೀಧರ ಪ್ರಾಥಮಿಕ ಶಿಕ್ಷಕ (ಜೀವವಿಜ್ಞಾನ) (ಕಲ್ಯಾಣ ಕರ್ನಾಟಕೇತರ – ಶೇ. 20) | 8 |
| ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) | ಕೆಕೆ 800 + ಆರ್‌ಪಿಸಿ 100 = 900 |
| ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ II (1 ರಿಂದ 8ನೇ ತರಗತಿ) | ಕೆಕೆ 106 + ಆರ್‌ಪಿಸಿ 44 = 150 |
| ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್ I) | ಕೆಕೆ 319 + ಆರ್‌ಪಿಸಿ 131 = 450 |
| ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ) | ಕೆಕೆ 3228 + ಆರ್‌ಪಿಸಿ 5272 = 8500 |
| ಗಣಕ ವಿಜ್ಞಾನ ಶಿಕ್ಷಕ(1 ರಿಂದ 8ನೇ ತರಗತಿ) | ಕೆಕೆ 300 + ಆರ್‌ಪಿಸಿ 200 = 500 |
| ಪ್ರೌಢಶಾಲಾ ಸಹ ಶಿಕ್ಷಕರು | ಕೆಕೆ 2214 + ಆರ್‌ಪಿಸಿ 2286 = 4500 |
| ಒಟ್ಟು | ಕೆಕೆ 6967 + ಆರ್‌ಪಿಸಿ 8033 = 15000 |
ಹುದ್ದೆಗಳ ಆಧಾರಿತ ಶೈಕ್ಷಣಿಕ ಅರ್ಹತೆ:
| ಹುದ್ದೆಯ ಹೆಸರು | ಕನಿಷ್ಠ ಶೈಕ್ಷಣಿಕ ಅರ್ಹತೆಗಳು |
|---|---|
| ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) | 1. ಕನಿಷ್ಠ 50% ಅಂಕಗಳೊಂದಿಗೆ ಪಿಯುಸಿ (PUC) ಮತ್ತು 2 ವರ್ಷಗಳ ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಷನ್ (D.El.Ed). ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪಿಯುಸಿ ಮತ್ತು 4 ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಷನ್ (B.El.Ed). ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪಿಯುಸಿ ಮತ್ತು 2 ವರ್ಷಗಳ ಡಿಪ್ಲೋಮಾ ಇನ್ ಎಜುಕೇಷನ್ (ವಿಶೇಷ ಶಿಕ್ಷಣ). 2. ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (TET – ಪತ್ರಿಕೆ 1) ಯಲ್ಲಿ ಉತ್ತೀರ್ಣತೆ ಕಡ್ಡಾಯ. (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
| ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II (1 ರಿಂದ 8ನೇ ತರಗತಿ) | 1. ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (12ನೇ ತರಗತಿ/ಪಿಯುಸಿ ಅಥವಾ ತತ್ಸಮಾನ). ಅಥವಾ ಹಿರಿಯ ಮಾಧ್ಯಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, NCTE ನಿಯಮಾವಳಿಗಳು 2007ರ ಅನ್ವಯ ಶಾಲೆ/ಕಾಲೇಜು/ಜಿಲ್ಲಾ ಹಂತದ ಕ್ರೀಡೆಗಳು/ಆಟಗಳಲ್ಲಿ ಭಾಗವಹಿಸಿರಬೇಕು. ಅಥವಾ NCTE ನಿಯಮಾವಳಿಗಳು 2002ರ ಅನ್ವಯ ಕನಿಷ್ಠ 45% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (12ನೇ ತರಗತಿ ಅಥವಾ ತತ್ಸಮಾನ). 2. NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 1 ವರ್ಷದ ಅವಧಿಗಿಂತ ಕಡಿಮೆ ಇಲ್ಲದ ದೈಹಿಕ ಶಿಕ್ಷಣ ಸರ್ಟಿಫಿಕೇಟ್ / ಡಿಪ್ಲೋಮಾ (C.P.Ed / D.P.Ed ಅಥವಾ ತತ್ಸಮಾನ) ಹೊಂದಿರಬೇಕು. (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
| ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6 ರಿಂದ 8ನೇ ತರಗತಿ) | 1. ಕನಿಷ್ಠ 50% ಸರಾಸರಿ ಅಂಕಗಳೊಂದಿಗೆ ಪದವಿ ಮತ್ತು 2 ವರ್ಷಗಳ ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಷನ್ (D.El.Ed). ಅಥವಾ ಕನಿಷ್ಠ 50% ಸರಾಸರಿ ಅಂಕಗಳೊಂದಿಗೆ ಪದವಿ ಮತ್ತು ಬಿ.ಇಡಿ (B.Ed) ಅಥವಾ ಬಿ.ಇಡಿ (ವಿಶೇಷ ಶಿಕ್ಷಣ). ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪಿಯುಸಿ ಮತ್ತು 4 ವರ್ಷಗಳ B.El.Ed ಅಥವಾ 4 ವರ್ಷಗಳ B.A.Ed / B.Sc.Ed. 2. ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (TET – ಪತ್ರಿಕೆ 2) ಯಲ್ಲಿ ಉತ್ತೀರ್ಣತೆ ಕಡ್ಡಾಯ. (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪದವಿ ಅಥವಾ ಪಿಯುಸಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
| ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ಶಿಕ್ಷಕರು (1 ರಿಂದ 8ನೇ ತರಗತಿ) | 1. ಕನಿಷ್ಠ 50% ಸರಾಸರಿ ಅಂಕಗಳೊಂದಿಗೆ ಕೆಳಗಿನ ಯಾವುದಾದರೊಂದು ಪದವಿ ಹೊಂದಿರಬೇಕು: – ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) – ಬಿಸಿಎ (BCA) – ಬಿ.ಇ / ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಷನ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್). 2. ವಿಶೇಷ ಷರತ್ತು: ನೇಮಕಾತಿ ಹೊಂದಿದ 5 ವರ್ಷಗಳ ಒಳಗಾಗಿ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಶಿಕ್ಷಣದಲ್ಲಿ ಪದವಿ (B.Ed) ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪದವಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
| ಪ್ರೌಢಶಾಲಾ ಸಹ ಶಿಕ್ಷಕರು (Assistant Master) | 1. ಕನಿಷ್ಠ 50% ಸರಾಸರಿ ಅಂಕಗಳೊಂದಿಗೆ ಪದವಿ ಮತ್ತು ಶಿಕ್ಷಣದಲ್ಲಿ ಪದವಿ (B.Ed) ಹೊಂದಿರಬೇಕು. 2. ವಿಷಯವಾರು ಅರ್ಹತೆಗಳು: – ಸಹ ಶಿಕ್ಷಕರು (ಕಲಾ): ಕಲಾ ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕವಾಗಿ ಓದಿರಬೇಕು ಮತ್ತು ಬಿ.ಇಡಿ ಹೊಂದಿರಬೇಕು. – ಸಹ ಶಿಕ್ಷಕರು (ಜೀವಶಾಸ್ತ್ರ): ವಿಜ್ಞಾನ ಪದವಿಯಲ್ಲಿ ರಸಾಯನಶಾಸ್ತ್ರವನ್ನು ಕಡ್ಡಾಯ ಐಚ್ಛಿಕ ವಿಷಯವಾಗಿ ಮತ್ತು ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೈವಿಕ ತಂತ್ರಜ್ಞಾನ / ತಳಿಶಾಸ್ತ್ರ / ಆಹಾರ ವಿಜ್ಞಾನ ಮತ್ತು ಪೋಷಣೆ / ಮೀನುಗಾರಿಕೆ / ಜೀವರಸಾಯನ ಶಾಸ್ತ್ರ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿರಬೇಕು ಮತ್ತು ಬಿ.ಇಡಿ ಹೊಂದಿರಬೇಕು. – ಭಾಷಾ ಸಹ ಶಿಕ್ಷಕರು: ಕಲಾ ಪದವಿಯಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಐಚ್ಛಿಕ ವಿಷಯವಾಗಿ ಓದಿರಬೇಕು ಮತ್ತು ಬಿ.ಇಡಿ ಹೊಂದಿರಬೇಕು. (ಐಚ್ಛಿಕವಾಗಿ ಓದದಿದ್ದಲ್ಲಿ, ಆಯಾ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಹೊಂದಿರಬೇಕು). (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪದವಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
| ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-I (ಪ್ರೌಢಶಾಲೆ) | 1. ದೈಹಿಕ ಶಿಕ್ಷಣವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವ ಪದವಿಯಲ್ಲಿ ಕನಿಷ್ಠ 50% ಅಂಕಗಳು (ಅಥವಾ ಕ್ರೀಡಾ ಸಾಧನೆಯೊಂದಿಗೆ 45% ಅಂಕಗಳು). ಅಥವಾ ಕನಿಷ್ಠ 40% ಅಂಕಗಳೊಂದಿಗೆ ದೈಹಿಕ ಶಿಕ್ಷಣದಲ್ಲಿ ಪದವಿ ಅಥವಾ ದೈಹಿಕ ಶಿಕ್ಷಣವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಾಸಿಸಿರುವ ಪದವಿ. ಅಥವಾ 3 ವರ್ಷಗಳ ಅವಧಿಯ ದೈಹಿಕ ಶಿಕ್ಷಣ ಪದವಿ (B.P.Ed ಅಥವಾ ತತ್ಸಮಾನ). ಅಥವಾ ಪದವಿ ಹೊಂದಿದ್ದು, ರಾಜ್ಯ/ವಿಶ್ವವಿದ್ಯಾಲಯವನ್ನು ಕ್ರೀಡೆಗಳಲ್ಲಿ ಪ್ರತಿನಿಧಿಸಿರಬೇಕು ಅಥವಾ ಎನ್.ಸಿ.ಸಿ. ‘ಸಿ’ ಸರ್ಟಿಫಿಕೇಟ್ ಹೊಂದಿರಬೇಕು. 2. NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 1 ವರ್ಷದ ಅವಧಿಯ ದೈಹಿಕ ಶಿಕ್ಷಣ ಪದವಿ (B.P.Ed ಅಥವಾ ತತ್ಸಮಾನ) ಹೊಂದಿರಬೇಕು. (ಗಮನಿಸಿ: SC/ST/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪದವಿಯಲ್ಲಿ ಕನಿಷ್ಠ 45% ಅಂಕಗಳು ಸಾಕು). |
ವಯೋಮಿತಿ:
*ಅರ್ಜಿ ಸಲ್ಲಿಕೆಗೆ ನಿಗದಿ ಪಡಿಸಿದ ಕೊನೆದಿನಾಂಕಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರತಕ್ಕದ್ದು.
ಕನಿಷ್ಠ 21 ವರ್ಷ
- ಸಾಮಾನ್ಯ ವರ್ಗದ ಅಭ್ಯರ್ತಿಗಳಿಗೆ : 40 ವರ್ಷಗಳು
- ಪ್ರವರ್ಗ IIಎ, IIಬಿ, IIIಎ, IIIಬಿ ವರ್ಗದ ಅಭ್ಯರ್ಥಿಗಳಿಗೆ 43 ವರ್ಷಗಳು
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-I ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 45 ವರ್ಷಗಳು
ಆಯ್ಕೆ ವಿಧಾನ:
- ಸ್ಪರ್ಧಾತ್ಮಕ ಪರೀಕ್ಷೆ
- ನಿಗದಿತ ವೇಟೇಜ್ ಮೂಲಕ ಮೆರಿಟ್ ಲೆಕ್ಕಾಚಾರ(Derived Percentage)ದ ಮೂಲಕ ಆಯ್ಕೆ
- ದಾಖಲಾತಿ ಪರಿಶೀಲನೆ
ವೇತನ ಶ್ರೇಣಿ:
| ಹುದ್ದೆಗಳ ಹೆಸರು | ಸಂಬಳ(ಪ್ರ.ತಿಂ) |
|---|---|
| ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ II (1 ರಿಂದ 8ನೇ ತರಗತಿ) | ರೂ.41300-81800/- |
| ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ), ಗಣಕ ವಿಜ್ಞಾನ ಶಿಕ್ಷಕ(1 ರಿಂದ 8ನೇ ತರಗತಿ) | ರೂ..44425-83700/- |
| ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್ I) | ರೂ.54175-99400/- |
ಅರ್ಜಿ ಶುಲ್ಕದ ವಿವರ:
- ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳು (IIಎ, IIಬಿ, IIIಎ, IIIಬಿ) ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ರೂ.750/-, ಒಂದೇ ವೃಂದದ ಎರಡು ಹುದ್ದೆಗಳಿಗೆ: ರೂ.1125/- (ಪ್ರತಿ ಹೆಚ್ಚುವರಿ ಹುದ್ದೆಗೆ ರೂ.375/- ಹೆಚ್ಚುವರಿ ಪಾವತಿ)
- SC, ST, ಪ್ರವರ್ಗ-1, ಮಾಜಿ ಸೈನಿಕ, ವಿಶೇಷ ಚೇತನ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ರೂ.500/-, ಒಂದೇ ವೃಂದದ ಎರಡು ಹುದ್ದೆಗಳಿಗೆ ರೂ.750/- (ಪ್ರತಿ ಹೆಚ್ಚುವರಿ ಹುದ್ದೆಗೆ ರೂ.250/- ಹೆಚ್ಚುವರಿ ಪಾವತಿ)
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://schooleducation.kar.nic.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಭೌತಿಕ ಅರ್ಜಿಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಕೃತ ದಾಖಲಾತಿ ಘಟಕದ ಸಹಾಯವಾಣಿ ಸಂಖ್ಯೆಗಳಾದ 22483145, 22483140, 9483024723 ಅನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾವಾರು ಅಧಿಸೂಚನೆಗಳ ಪಿಡಿಎಫ್ ಲಿಂಕ್ಸ್
| ಜಿಲ್ಲೆಗಳು, ತರತಿಗಳ ಹೆಸರು | ಅಧಿಕೃತ ಅಧಿಸೂಚನೆ ಲಿಂಕ್ಸ್ |
| ಯಾದಗಿರಿ- 1 ರಿಂದ 5 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಯಾದಗಿರಿ- 1 ರಿಂದ 5 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಯಾದಗಿರಿ- 6 ರಿಂದ 8 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಯಾದಗಿರಿ- 6 ರಿಂದ 8 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಕಲಬುರಗಿ- 1 ರಿಂದ 5 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಕಲಬುರಗಿ- 1 ರಿಂದ 5 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಕಲಬುರಗಿ- 6 ರಿಂದ 8 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಕಲಬುರಗಿ-6 ರಿಂದ 8 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಬೀದರ್ – 1 ರಿಂದ 5 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಬೀದರ್ – 1 ರಿಂದ 5 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಬೀದರ್ – 6 ರಿಂದ 8 ಶೇ.80 ಕೆಕೆ | ಡೌನ್ಲೋಡ್ ಮಾಡಿ |
| ಬೀದರ್ – 6 ರಿಂದ 8 ಶೇ.20 ಎನ್‌ಕೆಕೆ | ಡೌನ್ಲೋಡ್ ಮಾಡಿ |
| ವಿಜಯಪುರ ಜಿಲ್ಲೆ 1 ರಿಂದ 5 | ಡೌನ್ಲೋಡ್ ಮಾಡಿ |
| ಕೊಪ್ಪಳ ಜಿಲ್ಲೆ 1 ರಿಂದ 5 ಶೇ.80 ಕೆಕೆ | ಡೌನ್ಲೋಡ್ ಮಾಡಿ |
| ಕೊಪ್ಪಳ ಜಿಲ್ಲೆ 1 ರಿಂದ 5 ಶೇ.20 ಎನ್‌ಕೆಕೆ | ಡೌನ್ಲೋಡ್ ಮಾಡಿ |
| ಕೊಪ್ಪಳ ಜಿಲ್ಲೆ 6 ರಿಂದ 8 ಶೇ.80 ಕೆಕೆ | ಡೌನ್ಲೋಡ್ ಮಾಡಿ |
| ಕೊಪ್ಪಳ ಜಿಲ್ಲೆ 6 ರಿಂದ 8 ಶೇ.20 ಎನ್‌ಕೆಕೆ | ಡೌನ್ಲೋಡ್ ಮಾಡಿ |
| ಬೆಂಗಳೂರು ಕೇಂದ್ರ ಜಿಲ್ಲೆ ಜಿಲ್ಲೆ 1 ರಿಂದ 5 ಕೆಕೆ ಶೇ.08 | ಡೌನ್ಲೋಡ್ ಮಾಡಿ |
| ಬೆಂಗಳೂರು ಕೇಂದ್ರ ಜಿಲ್ಲೆ ಜಿಲ್ಲೆ 1 ರಿಂದ 5 ಎನ್‌ಕೆಕೆ ಶೇ.92 | ಡೌನ್ಲೋಡ್ ಮಾಡಿ |
| ಬೆಂಗಳೂರು ಕೇಂದ್ರ ಜಿಲ್ಲೆ ಜಿಲ್ಲೆ 6 ರಿಂದ 8 ಕೆಕೆ ಶೇ.08 | ಡೌನ್ಲೋಡ್ ಮಾಡಿ |
| ಬೆಂಗಳೂರು ಕೇಂದ್ರ ಜಿಲ್ಲೆ ಜಿಲ್ಲೆ 6 ರಿಂದ 8 ಎನ್‌ಕೆಕೆ ಶೇ.92 | ಡೌನ್ಲೋಡ್ ಮಾಡಿ |
| ಬೆಂಗಳೂರು ಉತ್ತರ ಜಿಲ್ಲೆ 1 ರಿಂದ 5 ಶೇ.08 | ಡೌನ್ಲೋಡ್ ಮಾಡಿ |
| ಬೆಂಗಳೂರು ಉತ್ತರ ಜಿಲ್ಲೆ 1 ರಿಂದ 5 ಎನ್‌ಕೆಕೆ ಶೇ.92 | ಡೌನ್ಲೋಡ್ ಮಾಡಿ |
| ಬೆಂಗಳೂರು ಉತ್ತರ ಜಿಲ್ಲೆ 6 ರಿಂದ 8 ಶೇ.08 | ಡೌನ್ಲೋಡ್ ಮಾಡಿ |
| ಬಳ್ಳಾರಿ ಜಿಲ್ಲೆ 1 ರಿಂದ 5 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಬಳ್ಳಾರಿ ಜಿಲ್ಲೆ 1 ರಿಂದ 5 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಬಳ್ಳಾರಿ ಜಿಲ್ಲೆ 6 ರಿಂದ 8 ಕೆಕೆ ಶೇ.80 | ಡೌನ್ಲೋಡ್ ಮಾಡಿ |
| ಬಳ್ಳಾರಿ ಜಿಲ್ಲೆ 6 ರಿಂದ 8 ಎನ್‌ಕೆಕೆ ಶೇ.20 | ಡೌನ್ಲೋಡ್ ಮಾಡಿ |
| ಹಾವೇರಿ ಜಿಲ್ಲೆ ಪ್ರಾಥಮಿಕ ಶಾಲಾ ಶಿಕ್ಷಕ 1 ರಿಂದ 5 ಮತ್ತು 1 ರಿಂದ 8 ಶೇ.08 | ಡೌನ್ಲೋಡ್ ಮಾಡಿ |
| ಇನ್ನುಳಿದ ಅಧಿಕೃತ ಅಧಿಸೂಚನೆಗಳಿಗಾಗಿ | ಇಲ್ಲಿ ಕ್ಲಿಕ್ಕಿಸಿ |
Important Direct Links:
| ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ ಪ್ರಕಟಣೆ(dated on 24/09/2026) | ಡೌನ್ಲೋಡ್ ಮಾಡಿ |
| ಅರ್ಜಿ ಸಲ್ಲಿಕೆ ಅವಧಿ ನೋಟಿಸ್(dated on 04/09/2026) | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| Official Website | schooleducation.karnataka.gov.in |
| More Updates | KarnatakaHelp.in |
Physics education mastr
I am interested in applying for the teaching position. I am a dedicated and enthusiastic graduate with good communication skills, a positive attitude, and a willingness to learn. I would be grateful for the opportunity to contribute to your institution and support students in their learning.
Nanu B. A Degree 1st sami hodhuthidene nanu shikshakara nemakathige applications hakidhini
Hi iam Deepika
I also applied for the teacher posting
Nanage teacher aaguva dream ide
September 05.09.2026