SBIನಲ್ಲಿ ಬೃಹತ್ ಕ್ಲರ್ಕ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕಕ್ಕೆ 760 ಸ್ಥಾನ ಮೀಸಲು | ಪದವಿ ಅರ್ಹತೆ

Published on:

ಮುಂಬೈ: ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕ್ಲೆರಿಕಲ್ ಕೇಡರ್‌ನಲ್ಲಿ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಆ.31ರ ಗಡುವು ನೀಡಿದೆ.

ಬೆಂಗಳೂರು ವೃತ್ತದ(ಕರ್ನಾಟಕ) 760 ಸ್ಥಾನಗಳು ಸೇರಿದಂತೆ ಒಟ್ಟು 7680 ಸ್ಥಾನಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಯಾವುದೇ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ಜಾಲತಾಣ https://sbi.bank.in/web/careers/current-openingsದಲ್ಲಿ ಲಭ್ಯವಿರುವ https://ibpsreg.ibps.in/sbijajul26/ಲಿಂಕ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ ದಿನಾಂಕ ಆಗಸ್ಟ್‌ 11
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31
  • ಪ್ರಿಲಿಮಿನರಿ ಪರೀಕ್ಷೆ ದಿನಾಂಕ (ತಾತ್ಕಾಲಿಕ)- ಸೆಪ್ಟೆಂಬರ್ 2026
  • ಮುಖ್ಯ ಪರೀಕ್ಷೆ ದಿನಾಂಕ(ತಾತ್ಕಾಲಿಕ)- ನವೆಂಬರ್ 2026

ಶೈಕ್ಷಣಿಕ ಅರ್ಹತೆ:

31-12-2026ಕ್ಕೆ ಅನ್ವಯ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Any Graduation) ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ಪದವಿ ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವ ಅಭ್ಯರ್ಥಿಗಳೂ ಸಹ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಆಯ್ಕೆಯಾದಲ್ಲಿ 31.12.2026 ರಂದು ಅಥವಾ ಅದಕ್ಕೂ ಮುನ್ನ ಪದವಿ ಪರೀಕ್ಷೆ ಉತ್ತೀರ್ಣರಾಗಿರುವ ಬಗ್ಗೆ ಪುರಾವೆ/ದಾಖಲೆ ಒದಗಿಸಬೇಕಾಗುತ್ತದೆ.

ವಯೋಮಿತಿ:

01-04-2026ರಂತೆ;

ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ಒಳಗಿರಬೇಕು.

ಅಂದರೆ, ಅಭ್ಯರ್ಥಿಗಳು 02.04.1998 ಕ್ಕಿಂತ ಮುಂಚಿತವಾಗಿ ಮತ್ತು 01.04.2006 ಕ್ಕಿಂತ ತಡವಾಗಿ ಜನಿಸಿರಬಾರದು (ಎರಡೂ ದಿನಗಳು ಸೇರಿವೆ).

ನಿಯಮಾವಳಿಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಆಯ್ಕೆ ವಿಧಾನ:

  • ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆ (Phase-I)
  • ಆನ್‌ಲೈನ್ ಮುಖ್ಯ ಪರೀಕ್ಷೆ (Phase-II)
  • ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)
  • ದಾಖಲೆ ಪರಿಶೀಲನೆ

ವೇತನ ಮತ್ತು ಭತ್ಯೆಗಳು:

ಆರಂಭಿಕ ಮೂಲ ವೇತನ ರೂ.26,730/- ಆಗಿರುತ್ತದೆ (ರೂ. 24,050/- ಜೊತೆಗೆ ಪದವೀಧರರಿಗೆ ನೀಡಲಾಗುವ ಎರಡು ಮುಂಗಡ ಇನ್ಕ್ರಿಮೆಂಟ್‌ಗಳು ಸೇರಿ).

ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಹೊಸದಾಗಿ ನೇಮಕಗೊಳ್ಳುವ ಪದವೀಧರ ಜೂನಿಯರ್ ಅಸೋಸಿಯೇಟ್‌ಗಳಿಗೆ ಪ್ರಸ್ತುತ ದರದಲ್ಲಿ ಭತ್ಯೆಗಳು ಸೇರಿದಂತೆ ಒಟ್ಟು ಆರಂಭಿಕ ವೇತನವು ತಿಂಗಳಿಗೆ ಸುಮಾರು ರೂ.46,000/- ಇರಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.750/-
ಪ.ಜಾತಿ, ಪ.ಪಂಗಡ, ವಿಕಲಚೇತನ (ಪಿಡಬ್ಲ್ಯೂಡಿ) ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?

ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಆದ https://sbi.bank.in/web/careers/current-openings ವಿಭಾಗದಡಿ “RECRUITMENT OF JUNIOR ASSOCIATES (CUSTOMER SUPPORT & SALES) (Apply Online from 11.08.2026 to 31.08.2026)” ಎಂಬ ಶೀರ್ಷಿಕೆಯಡಿ ಲಭ್ಯವಿರುವ “APPLY ONLINE (11.08.2026 to 31.08.2026)(NEW)” ಅರ್ಜಿ ನಮೂನೆಯ ಲಿಂಕ್‌ ಕ್ಲಿಕ್ಕಿಸಿ.

ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ – (https://ibpsreg.ibps.in/sbijajul26/), ಅಲ್ಲಿ ಹೊಸ ಬಳಕೆದಾರರಾಗಿ ನೋಂದಣಿಯಾಗಿ, ಅರ್ಜಿ ನಮೂನೆ ಭರ್ತಿ ಮಾಡಿ ಹಾಗೂ ಕೇಳಲಾದ ಮುಖ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ. ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಭರಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Sbi Ja Online Form 2026
ಎಸ್‌ಬಿಐ ಕ್ಲರ್ಕ್‌ 2026ರ ಆನ್‌ಲೈನ್‌ ಅರ್ಜಿ ನಮೂನೆ

Important Direct Links:

Official Notification PDFDownload
Online Application Form LinkApply Now
Official Websitesbi.bank.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment