ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 319 ಹುದ್ದೆಗಳ ನೇಮಕಾತಿ ಸಂಬಂಧ ನ.15ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ.
ಪತ್ರಿಕೆ-1, ಪತ್ರಿಕೆ-2 ಕೀ ಉತ್ತರಗಳನ್ನು ಅಧಿಕೃತ ಜಾಲತಾಣ https://kpsc.karnataka.gov.in/knದಲ್ಲಿ ಅಪ್ಲೋಡ್ ಮಾಡಲಾಗಿದೆ.
ಪ್ರಕಟಿತ ಕೀ ಉತ್ತರಗಳಿಗೆ ಅಭ್ಯರ್ಥಿಗಳು ನ.19 ಬೆಳಿಗ್ಗೆ 10:30ರೊಳಗೆ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್ https://cetonline.karnataka.gov.in/kpscobjection/forms/login.aspx ಮೂಲಕ ಪ್ರತಿ ಆಕ್ಷೇಪಣೆಗೆ ₹50 ಪಾವತಿಸಿ ಆಕ್ಷೇಪಣೆ ಮಾಡಬಹುದು.
ಪತ್ರಿಕೆಯ ವಿವರ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸದೆಯೇ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಕೆಪಿಎಸ್‌ಸಿ ಪ್ರಕಟಣೆ ತಿಳಿಸಿದೆ.
| ಕೆಎಎಸ್ ಪೇಪರ್-1 ತಾತ್ಕಾಲಿಕ ಕೀ ಉತ್ತರಗಳು ಪಿಡಿಎಫ್ | ಡೌನ್ಲೋಡ್ ಮಾಡಿ |
| ಕೆಎಎಸ್ ಪೇಪರ್-2 ತಾತ್ಕಾಲಿಕ ಕೀ ಉತ್ತರಗಳು ಪಿಡಿಎಫ್ | ಡೌನ್ಲೋಡ್ ಮಾಡಿ |