ಹುಬ್ಬಳ್ಳಿ ರೈಲ್ಚೆ ನೇಮಕಾತಿ ಕೋಶವು ವಿವಿಧ ಇಲಾಖೆಯ ಹುದ್ದೆಗಳ ಭರ್ತಿಗಾಗಿ ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ(ಜಿಡಿಸಿಇ)ಗೆ ದಕ್ಷಿಣ ಪಶ್ಚಿಮ ರೈಲ್ವೆ(ಎಸ್‌ಡಬ್ಲ್ಯೂಆರ್) ಮತ್ತು ರೈಲ್ ವೀಲ್ ಫ್ಯಾಕ್ಟರಿ(ಆರ್‌ಡಬ್ಲ್ಯೂಎಫ್/ವೈಎನ್‌ಎಕೆ)ಯ ಹಾಲಿ ನಿಯಮಿತ ರೈಲ್ವೆ ನೌಕರರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಗೂಡ್ಸ್ ಟ್ರೈನ್ ಮ್ಯಾನೇಜರ್ 247, ಜೂ.ಇಂಜಿನಿಯರ್/ಬ್ರಿಡ್ಜ್ 2, ಜೂ.ಇಂಜಿನಿಯರ್/ಪಿ.ವೇ(P.Way) 2, ಜೂ.ಇಂಜಿನಿಯರ್/ ಮೆಕ್ಯಾನಿಕಲ್ ವರ್ಕ್‌ಶಾಪ್ 5, ಜೂ.ಇಂಜಿನಿಯರ್/ಎಸ್&ಟಿ/ಸಿಗ್ನಲ್ 2 ಹುದ್ದೆ ಸೇರಿದಂತೆ ಒಟ್ಟು 258 ಹುದ್ದೆಗಳುಗೆ ನೇಮಕ ಪ್ರಕ್ರಿಯೆ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ನವೆಂಬರ್ 09
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ- ಡಿಸೆಂಬರ್ 08ರ ರಾತ್ರಿ 23:59 ಗಂಟೆಯವರೆಗೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
ಗೂಡ್ಸ್ ಟ್ರೈನ್ ಮ್ಯಾನೇಜರ್(ಜಿಟಿಎಂ) ಹುದ್ದೆಗೆ; ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಅಥವಾ ತತ್ಸಮಾನ ತೇರ್ಗಡೆ.
ಜೂನಿಯರ್ ಇಂಜಿನಿಯರ್ (JE -Bridge/P.Way) ಹುದ್ದೆಗೆ; ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಬಿ.ಎಸ್ಸಿ(B.Sc. Civil Engineering) ಅಥವಾ ಸಿವಿಲ್ ಇಂಜಿನಿಯರಿಂಗ್‌ನ ಯಾವುದೇ ಉಪ-ವಿಭಾಗಗಳ ಸಂಯೋಜಿತ ಕೋರ್ಸ್.
ಜೂನಿಯರ್ ಇಂಜಿನಿಯರ್ (JE-Mechanical Workshop) ಹುದ್ದೆಗೆ; ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮ್ಯಾನುಫ್ಯಾಕ್ಚರಿಂಗ್/ಮೆಕಾಟ್ರಾನಿಕ್ಸ್/ಆಟೋಮೊಬೈಲ್/ಪ್ರೊಡಕ್ಷನ್ ಇಂಜಿನಿಯರಿಂಗ್ ಇತ್ಯಾದಿ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ.
ಜೂನಿಯರ್ ಇಂಜಿನಿಯರ್(JE-S&T/Signal) ಹುದ್ದೆಗೆ; ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮಾಹಿತಿ ತಂತ್ರಜ್ಞಾನ (IT)/ ಕಮ್ಯುನಿಕೇಷನ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್ ಇತ್ಯಾದಿ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸನ್ನು 01-01-2027ಕ್ಕೆ ಅನ್ವಯಿಸುವಂತೆ;
ಗರಿಷ್ಠ ವಯೋಮಿತಿ: ಸಾಮಾನ್ಯ ವರ್ಗ(ಯುಆರ್) ಗರಿಷ್ಠ 42 ವರ್ಷ(ಜನನ ದಿನಾಂಕ 01.01.1985 ರ ನಂತರ ಇರಬೇಕು), ಇತರ ಹಿಂದುಳಿದ ವರ್ಗ(ಒಬಿಸಿ) ಗರಿಷ್ಠ 45 ವರ್ಷಗಳು (ಜನನ ದಿನಾಂಕ 01.01.1982 ರ ನಂತರ ಇರಬೇಕು), ಪ.ಜಾತಿ/ಪ.ಪಂಗಡ(ಎಸ್‌ಸಿ/ಎಸ್‌ಟಿ) ಗರಿಷ್ಠ 47 ವರ್ಷಗಳು (ಜನನ ದಿನಾಂಕ 01.01.1980 ರ ನಂತರ ಇರಬೇಕು).
ಆಯ್ಕೆ ವಿಧಾನ:
ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ): ಇದು ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳನ್ನು(MCQs) ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ 1/3 ರಷ್ಟು ಋಣಾತ್ಮಕ ಮೌಲ್ಯಮಾಪನ(Negative Marking) ಇರುತ್ತದೆ.
- ದಾಖಲೆಗಳ ಪರಿಶೀಲನೆ(ಡಿವಿ): ಸಿಬಿಟಿ(CBT)ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ (ಎಂಇ): ಹುದ್ದೆಗೆ ನಿಗದಿಪಡಿಸಿದ ವೈದ್ಯಕೀಯ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ವೈದ್ಯಕೀಯ ತಪಾಸಣೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.
ಸಂಬಳ:
ನೇಮಕಾತಿ ನಿಯಮಗಳ ಪ್ರಕಾರ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ .
ಅರ್ಜಿ ಸಲ್ಲಿಕೆ ಹೇಗೆ?:
- ಆರ್‌ಆರ್‌ಸಿ ಹುಬ್ಬಳ್ಳಿಯ ಅಧಿಕೃತ ವೆಬ್‌ಸೈಟ್ www.rrchubli.in ಗೆ ಭೇಟಿ ನೀಡಿ.
- ನಂತರ ಮುಖಪುಟದಲ್ಲಿ “Important Notice” ವಿಭಾಗದಡಿ “Employment Notification No.01/2026 (GDCE) for filling up of 25% of Direct Recruitment Quota vacancies viz., Goods Train Manager (erstwhile Goods Guard) and Junior Engineers in various departments over South Western Railway.” ಎಂಬ ಶೀರ್ಷಿಕೆಯಡಿ “Click here to Apply” ಲಿಂಕ್ ಮೇಲೆ ಒತ್ತಿ.
- ಈಗ ಹೊಸಪುಟ ತೆರೆಯುತ್ತದೆ. ಅಲ್ಲಿ ಹೊಸ ಬಳಕೆದಾರರಾಗಿ ನೋಂದಣಿಯಾಗಿ, ಲಾಗಿನ್ ಮಾಡಿಕೊಳ್ಳಿ. ಮುಂದೆ ಅರ್ಜಿ ನಮೂನೆ ಕೇಳಲಾದ ಸಂಪೂರ್ಣ ಮಾಹಿತಿಯನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಕೊನೆಗೆ ಅರ್ಜಿ ಸಲ್ಲಿಸಿ.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.rrchubli.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |