ಕೆಸೆಟ್‌ 2026: ತಾತ್ಕಾಲಿಕ ಅಂಕಪಟ್ಟಿ ಪ್ರಕಟ

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್)‌ಯ ತಾತ್ಕಾಲಿಕ ಅಂಕಪಟ್ಟಿಯನ್ನು ಶುಕ್ರವಾರ(ನ.06) ಬಿಡುಗಡೆ ಮಾಡಿದೆ.

ಅ.11ರಂದು ಒಟ್ಟು 37 ವಿಷಯಗಳಿಗೆ ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆ ಪತ್ರಿಕೆ-1, ಪತ್ರಿಕೆ-2ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಫಲಿತಾಂಶವನ್ನು ಅ.24ಕ್ಕೆ ಪ್ರಕಟಿಸಲಾಗಿತ್ತು. ಇದೀಗ ವಿಷಯವಾರು ಅಭ್ಯರ್ಥಿಗಲು ಗಳಿಸಿದ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರ ಅಧಿಕೃತ ಜಾಲತಾಣ https://cetonline.karnataka.gov.in/kea/kset2026ದಲ್ಲಿ ಪ್ರಚುರಪಡಿಸಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಸಿದೆ.

ಕೆಸೆಟ್‌ 2026 ತಾತ್ಕಾಲಿಕ ಅಂಕಪಟ್ಟಿ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment