ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ)ಯು ತನ್ನ ಪ್ಲಾನಿಂಗ್ ಪಾಲಿಸಿ ಅಂಡ್ ಡೇಟಾ ಅನಾಲಿಸಿಸ್ ವಿಂಗ್(ಪಿಪಿಡಿಎಡಬ್ಲ್ಯೂ)ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಡೇಟಾ ಅನಲಿಸ್ಟ್ ಜನರಲ್ 1, ಡೇಟಾ ಅನಲಿಸ್ಟ್ ಜಿಐಎಸ್ 1, ನಾಲೆಡ್ಜ್ ಅಂಡ್ ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್ 1, ಡೇಟಾ ಸೈಂಟಿಸ್ಟ್ 1, ಐಟಿ ಸ್ಪೆಷಲಿಸ್ಟ್ 1 ಹುದ್ದೆ ಸೇರಿದಂತೆ ಒಟ್ಟು 05 ಹುದ್ದೆಗೆ ಒಂದು ವರ್ಷ ಗುತ್ತಿಗೆ ಆಧಾರದಡಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯ ಉಪ ಕಾರ್ಯದರ್ಶಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ದಿನಾಂಕ – ನವೆಂಬರ್ 02
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 23, ಸಂಜೆ 6 ಗಂಟೆಯವರೆಗೆ.
ಶೈಕ್ಷಣಿಕ ಅರ್ಹತೆ:
ಆಯಾ ಹುದ್ದೆಗೆ ಅನುಗುಣವಾಗಿ ಅರ್ಥಶಾಸ್ತ್ರ, ಸಾರ್ವಜನಿಕ ನೀತಿ, ಎಂಜಿನಿಯರಿಂಗ್, ಜಿಯೋಗ್ರಫಿ, ಜಿಐಎಸ್(GIS), ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್ ಅಥವಾ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಅಥವಾ ಪದವಿ ಪಡೆದಿರಬೇಕು.
ಅಭ್ಯರ್ಥಿಗಳು ತಮ್ಮ ಪದವಿ ಪರೀಕ್ಷೆಯಲ್ಲಿ ಕನಿಷ್ಠ 8.0 CGPA (10-ಪಾಯಿಂಟ್ ಸ್ಕೇಲ್‌ನಲ್ಲಿ) ಅಥವಾ 80% ಅಂಕಗಳನ್ನು ಗಳಿಸಿರಬೇಕು.
ಎಲ್ಲಾ ಹುದ್ದೆಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳತೆ ಮತ್ತು ಕನ್ನಡ ಭಾಷೆಯ ಜ್ಞಾನ ಕಡ್ಡಾಯವಾಗಿದೆ.
ವಯೋಮಿತಿ:
ಅಧಿಸೂಚನೆಯ ದಿನಾಂಕದಂತೆ, ಅಭ್ಯರ್ಥಿಯ ವಯಸ್ಸು 40 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಕೆಳಗಿನ ಪ್ರಕ್ರಿಯೆಯನ್ನೊಳಗೊಂಡ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
- ಅಭ್ಯರ್ಥಿಗಳ ಅರ್ಹತೆ
- ಮೆರಿಟ್
- ಲಿಖಿತ ಪರೀಕ್ಷೆ
- ಅನುಭವ
- ಸಂದರ್ಶನ
ಸಂಬಳ (ಮಾಸಿಕ):
- ಡೇಟಾ ಅನಾಲಿಸ್ಟ್(ಜನರಲ್) ಹುದ್ದೆಗೆ ರೂ.70,000/-
- ಡೇಟಾ ಅನಾಲಿಸ್ಟ್(GIS) ಹುದ್ದೆಗೆ ರೂ.70,000/-
- ನಾಲೆಡ್ಜ್ ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್ ಹುದ್ದೆಗೆ ರೂ.1,00,000/-
- ಡೇಟಾ ಸೈಂಟಿಸ್ಟ್ ಹುದ್ದೆಗೆ ರೂ.1,20,000/-
- ಐಟಿ ಸ್ಪೆಷಲಿಸ್ಟ್ ಹುದ್ದೆಗೆ ರೂ.80,000/-
(ಗಮನಿಸಿ: ಅಧಿಕೃತ ಕೆಲಸದ ನಿಮಿತ್ತ ಪ್ರಯಾಣಿಸಿದರೆ ಪ್ರತ್ಯೇಕವಾಗಿ ಟಿಎ/ಡಿಎ ಸೌಲಭ್ಯ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ).
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ವೆಬ್‌ಸೈಟ್ (https://kkrdb.karnataka.gov.in/) ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಭರ್ತಿ ಮಾಡಿದ ಅರ್ಜಿಯನ್ನು ಸಿವಿ (CV) ಮತ್ತು ಅಗತ್ಯ ದಾಖಲೆಗಳೊಂದಿಗೆ ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ, ಅಭಿವೃದ್ಧಿ ಭವನ, ಐವಾನ-ಎ-ಶಾಹಿ, ಕಲಬುರಗಿ- 585102’ ವಿಳಾಸಕ್ಕೆ ವೇಗ ಅಂಚೆ(ಸ್ಪೀಡ್ ಪೋಸ್ಟ್) ಅಥವಾ ನೋಂದಾಯಿತ ಅಂಚೆ ಮೂಲಕವು ಹಾಗೂ ಇಮೇಲ್ ವಿಳಾಸ hkadbgulb@gmail.comಕ್ಕೂ ಕಳುಹಿಸಬೇಕು. ಇಮೇಲ್ ವಿಷಯದಲ್ಲಿ “Application for the <ಹುದ್ದೆಯ ಹೆಸರು> at KKRDB- PPDAW” ಎಂದು ನಮೂದಿಸಬೇಕು.
ಒಬ್ಬ ಅಭ್ಯರ್ಥಿ ಗರಿಷ್ಠ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು, ಆದರೆ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್‌ಲೋಡ್ ಮಾಡಿ |
| ಇ-ಮೇಲ್ ವಿಳಾಸದ ಲಿಂಕ್ | hkadbgulb@gmail.com |
| ಅಧಿಕೃತ ಜಾಲತಾಣ | kkrdb.karnataka.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |