ಸೈನಿಕ ಶಾಲೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

Published on:

ನವದೆಹಲಿ: ಸೈನಿಕ ಶಾಲೆಗಳ ಸೊಸೈಟಿಯ 2027–28ನೇ ಶೈಕ್ಷಣಿಕ ಸಾಲಿನ 6ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ‘ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ’ಗೆ ಅರ್ಜಿ ಆಹ್ವಾನಿಸಿದೆ.

ಮುಖ್ಯ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ನವೆಂಬರ್ 03
  • ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಿಲು ಕೊನೆ ದಿನಾಂಕ- ಡಿಸೆಂಬರ್ 02, (ರಾತ್ರಿ 11:50)
  • ವಿಳಂಬ ಶುಲ್ಕದೊಂದಿಗೆ(ರೂ.500/-) ಅರ್ಜಿ ಸಲ್ಲಿಕೆ ಅವಧಿ- ಡಿಸೆಂಬರ್ 03 ರಿಂದ 06ರವರೆಗೆ.
  • ಅರ್ಜಿಯಲ್ಲಿ ತಿದ್ದುಪಡಿ ಕಾಲಾವಕಾಶ ದಿನಾಂಕ- ಡಿಸೆಂಬರ್ 07 ರಿಂದ 09, (ರಾತ್ರಿ 11:50)
  • ಪ್ರವೇಶ ಪತ್ರ (Admit Card) ಡೌನ್‌ಲೋಡ್- 2027ರ ಜನವರಿ 25ರಿಂದ.
  • ಪರೀಕ್ಷಾ ದಿನಾಂಕ- 2027ರ ಜನವರಿ 31(ಭಾನುವಾರ).
  • ಪರೀಕ್ಷಾ ಸಮಯ:
    • 6ನೇ ತರಗತಿ: ಮಧ್ಯಾಹ್ನ 02:00 ರಿಂದ ಸಂಜೆ 04:30 ತನಕ (150 ನಿಮಿಷಗಳು).
    • 9ನೇ ತರಗತಿ: ಮಧ್ಯಾಹ್ನ 02:00 ರಿಂದ ಸಂಜೆ 05:00 ತನಕ (180 ನಿಮಿಷಗಳು).

ಶೈಕ್ಷಣಿಕ ಅರ್ಹತೆ:

6ನೇ ತರಗತಿ ಪ್ರವೇಶಕ್ಕೆ: ಅನುಮೋದಿತ ಹೊಸ ಸೈನಿಕ ಶಾಲೆಗಳ 60% ಕೋಟಾದಡಿ (Category ‘B’) ಪ್ರವೇಶ ಬಯಸುವ ವಿದ್ಯಾರ್ಥಿಗಳು ಪ್ರಸ್ತುತ ಅದೇ ಶಾಲೆಯಲ್ಲಿ 5ನೇ ತರಗತಿ ಓದುತ್ತಿರಬೇಕು ಮತ್ತು ಉತ್ತೀರ್ಣರಾಗಿರಬೇಕು. ಸಾಮಾನ್ಯ ಪ್ರವೇಶಕ್ಕೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ತರಗತಿ ಉತ್ತೀರ್ಣತೆಯ ಕಡ್ಡಾಯ ನಿಯಮವನ್ನು ಉಲ್ಲೇಖಿಸಿಲ್ಲ.

9ನೇ ತರಗತಿ ಪ್ರವೇಶಕ್ಕೆ: ಅಭ್ಯರ್ಥಿಯು ಪ್ರವೇಶ ಪಡೆಯುವ ಸಮಯದಲ್ಲಿ ಮಾನ್ಯತೆ ಪಡೆದ ಶಾಲೆಯಿಂದ 8ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹೊಸ ಸೈನಿಕ ಶಾಲೆಗಳ 60% ಕೋಟಾದಡಿ ಪ್ರವೇಶ ಬಯಸುವವರು ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿರಬೇಕು.

ವಯೋಮಿತಿ:

31-03-2027ರಂತೆ, ಬಾಲಕ ಮತ್ತು ಬಾಲಕಿಯರಿಬ್ಬಗೂ ಅನ್ವಯಿಸುವಂತೆ;

6ನೇ ತರಗತಿ: ಅಭ್ಯರ್ಥಿಯ ವಯಸ್ಸು 10 ರಿಂದ 12 ವರ್ಷಗಳ ನಡುವೆ ಇರಬೇಕು. ಅಂದರೆ, 01 ಏಪ್ರಿಲ್ 2015 ಮತ್ತು 31 ಮಾರ್ಚ್ 2017 ರ ನಡುವೆ ಜನಿಸಿರಬೇಕು (ಎರಡೂ ದಿನಗಳು ಸೇರಿ).

9ನೇ ತರಗತಿ: ಅಭ್ಯರ್ಥಿಯ ವಯಸ್ಸು 13 ರಿಂದ 15 ವರ್ಷಗಳ ನಡುವೆ ಇರಬೇಕು. ಅಂದರೆ, 01 ಏಪ್ರಿಲ್ 2012 ಮತ್ತು 31 ಮಾರ್ಚ್ 2014 ರ ನಡುವೆ ಜನಿಸಿರಬೇಕು (ಎರಡೂ ದಿನಗಳು ಸೇರಿ).

ಆಯ್ಕೆ ಪ್ರಕ್ರಿಯೆ:

  1. ಲಿಖಿತ ಪರೀಕ್ಷೆ: ಒಎಂಆರ್ (OMR) ಶೀಟ್ ಆಧಾರಿತ ಪೆನ್-ಪೆನ್ಸಿಲ್ ಪರೀಕ್ಷೆ ಇದಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ. ಇದರಲ್ಲಿ ಯಾವುದೇ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ.
  2. ಅರ್ಹತಾ ಅಂಕಗಳು: ಪ್ರವೇಶ ಪಡೆಯಲು ಪ್ರತಿ ವಿಷಯದಲ್ಲಿ ಕನಿಷ್ಠ 25% ಮತ್ತು ಒಟ್ಟಾರೆ 40% ಅಂಕಗಳನ್ನು ಪಡೆಯುವುದು ಕಡ್ಡಾಯ. (ಸೈನಿಕ ಶಾಲೆಗಳಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳ ಮಿತಿ ಇರುವುದಿಲ್ಲ, ಆದರೆ ಹೊಸ ಸೈನಿಕ ಶಾಲೆಗಳಲ್ಲಿ ಎಸ್‌ಸಿ/ಎಸ್‌ಟಿ ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯಿಸುತ್ತದೆ).
  3. ಇ-ಕೌನ್ಸೆಲಿಂಗ್ ಮತ್ತು ದಾಖಲಾತಿ ಪರಿಶೀಲನೆ: ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಇ-ಕೌನ್ಸೆಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಮೆರಿಟ್ ಪಟ್ಟಿ, ವೈದ್ಯಕೀಯ ಫಿಟ್‌ನೆಸ್ ಮತ್ತು ಮೂಲ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಅಂತಿಮ ಪ್ರವೇಶ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ (ಎನ್‌ಸಿಎಲ್)/ರಕ್ಷಣಾ ಸಿಬ್ಬಂದಿ ಮತ್ತು ಮಾಜಿ ಸೈನಿಕರ ಮಕ್ಕಳಿಗೆ ರೂ.850/-.
  • ಪ.ಜಾತಿ(ಎಸ್‌ಸಿ)/ಪ.ಪಂಗಡ(ಎಸ್‌ಟಿ) ಅಭ್ಯರ್ಥಿಗಳಿಗೆ ರೂ.700/-.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಹಂತಗಳು ಹೀಗಿವೆ:

  • ಹಂತ 1: ನೋಂದಣಿ(Registration); ಅಧಿಕೃತ ವೆಬ್‌ಸೈಟ್ https://exams.nta.nic.in/sainik-school-society/ ಗೆ ಭೇಟಿ ನೀಡಿ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿಕೊಳ್ಳಿ ಮತ್ತು ಪಾಸ್‌ವರ್ಡ್ ರಚಿಸಿಕೊಳ್ಳಿ.
  • ಹಂತ 2: ಅರ್ಜಿ ಭರ್ತಿ ಮತ್ತು ದಾಖಲೆಗಳ ಅಪ್‌ಲೋಡ್; ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ, ಸಿಸ್ಟಮ್ ಜನರೇಟ್ ಮಾಡಿದ ಅರ್ಜಿ ಸಂಖ್ಯೆಯನ್ನು ಪಡೆದುಕೊಳ್ಳಿ.
  • ಹಂತ 3: ಶುಲ್ಕ ಪಾವತಿ; ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿ. ಶುಲ್ಕ ಯಶಸ್ವಿಯಾಗಿ ಪಾವತಿಯಾದ ನಂತರ ‘ಕನ್ಫರ್ಮೇಷನ್ ಪೇಜ್’ ಅನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಸುರಕ್ಷಿತವಾಗಿರಿಸಿಕೊಳ್ಳಿ.

ಮುಖ್ಯ ಲಿಂಕ್‌ಗಳು:

‌ಅಧಿಕೃತ ಅಧಿಸೂಚನೆ(ಮಾಹಿತಿ ಬುಲೆಟಿನ್) ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://exams.nta.nic.in/sainik-school-society/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment