ಕೆಕೆಆರ್‌ಡಿಬಿಯಲ್ಲಿ ಇಂಟರ್ನ್‌ಶಿಪ್: ಅರ್ಜಿ ಆಹ್ವಾನ

6 ರಿಂದ 12 ತಿಂಗಳ ತರಬೇತಿ

Published on:

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ)ಯ “ಯೋಜನೆ, ನೀತಿ ಮತ್ತು ದತ್ತಾಂಶ ವಿಶ್ಲೇಷಣೆ ವಿಭಾಗ(ಪಿಪಿಡಿಎಡಬ್ಲ್ಯೂ)’ದಲ್ಲಿ ಒಂದು ಇಂಟರ್ನ್ ಹುದ್ದೆಯ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಹಿಂದೆ ಹೊರಡಿಸಲಾಗಿದ್ದ ಪ್ರಕಟಣೆಯಲ್ಲಿ ಭರ್ತಿಯಾಗದೆ ಉಳಿದಿರುವ 01 ಜ್ಞಾನ ನಿರ್ವಹಣೆ ಇಂಟರ್ನ್ ಹುದ್ದೆಗೆ ಇದೀಗ ಮರು ಪ್ರಕಟಣೆ ಹೊರಡಿಸಿ ಅರ್ಜಿ ಕರೆಯಲಾಗಿದೆ ಎಂದು ಮಂಡಳಿಯ ಉಪಕಾರ್ಯದರ್ಶಿ ತಿಳಿಸಿದ್ದಾರೆ.

ಹುದ್ದೆಯ ವಿವರಗಳು:

ಹುದ್ದೆಯ ಹೆಸರು: ಜ್ಞಾನ ನಿರ್ವಹಣೆ ಇಂಟರ್ನ್ (Knowledge Management Intern).

ಶೈಕ್ಷಣಿಕ ಅರ್ಹತೆ: ಬಿಸಿನೆಸ್ ಅಡ್ಮಿನಿಸ್ಟ್ರೇಷನ್(MBA), ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ(JMC), ಅಭಿವೃದ್ಧಿ ಅಧ್ಯಯನಗಳು, ಸಾರ್ವಜನಿಕ ನೀತಿ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ(Master Degree) ಹೊಂದಿರಬೇಕು. ವರದಿ ಬರವಣಿಗೆ, ದಾಖಲೀಕರಣ ಮತ್ತು ಜ್ಞಾನ ನಿರ್ವಹಣೆ ಕುರಿತು ಅರಿವು ಹೊಂದಿರುವುದು ಅಪೇಕ್ಷಣೀಯ.

ವಯೋಮಿತಿ: ಅಧಿಸೂಚನೆ ದಿನಾಂಕದಂದು ಅಭ್ಯರ್ಥಿಯ ವಯಸ್ಸು 28 ವರ್ಷಗಳನ್ನು ಮೀರಿರಬಾರದು.

ಕನಿಷ್ಠ ಅಂಕಗಳು: ಅರ್ಹತಾ ಪದವಿ ಅಥವಾ ಕೊನೆಯ ಸೆಮಿಸ್ಟರ್/ವರ್ಷದಲ್ಲಿ ಕನಿಷ್ಠ 7.0 CGPA (10-ಪಾಯಿಂಟ್ ಸ್ಕೇಲ್‌ನಲ್ಲಿ) ಅಥವಾ ಶೇಕಡಾ 70% ರಷ್ಟು ಅಂಕಗಳನ್ನು ಪಡೆದಿರಬೇಕು.

ಭಾಷಾ ಜ್ಞಾನ: ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳತೆ ಮತ್ತು ಕನ್ನಡದ ಕಾರ್ಯಾಚರಣೆಯ ಜ್ಞಾನ (Working Knowledge) ಕಡ್ಡಾಯವಾಗಿದೆ.

ತರಬೇತಿ ಅವಧಿ ಮತ್ತು ಸಂಭಾವನೆ:

  • ಅವಧಿ: 06 ತಿಂಗಳಿಂದ 12 ತಿಂಗಳು (ಅಗತ್ಯತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಿಸಬಹುದಾಗಿದೆ).
  • ಸ್ಥಳ: ಪಿಪಿಡಿಎಡಬ್ಲ್ಯೂ ಕಚೇರಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ.
  • ಮಾಸಿಕ ಭತ್ಯೆ: ತಿಂಗಳಿಗೆ ಗರಿಷ್ಠ 8,000/- ರೂ.ಗಳ ಮಾಸಿಕ ಸಂಭಾವನೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ನ.13ರೊಳಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕೃತ ವೆಬ್‌ಸೈಟ್ https://kkrdb.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಖುದ್ದಾಗಿ, ಇ-ಮೇಲ್ ಅಥವಾ ಹಾರ್ಡ್ ಕಾಪಿ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment