ನವದೆಹಲಿ: ಉತ್ತರ ರೈಲ್ವೆಯ(ಎನ್‌ಆರ್) ನೇಮಕಾತಿ ಕೋಶವು ಅಪ್ರೆಂಟಿಸ್ ಕಾಯ್ದೆಯಡಿ 2026-27ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ 11ರಿಂದ ಪ್ರಾರಂಭವಾಗಲಿದೆ.
ರೈಲ್ವೆ ವ್ಯಾಪ್ತಿಯ ವಿಭಾಗ,ಘಟಕ ಹಾಗೂ ಕಾರ್ಯಗಾರಗಳಿಗೆ ಒಟ್ಟು 4651 ನಾನಾ ಟ್ರೇಡ್‌ನ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗುತ್ತಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ನವೆಂಬರ್ 11
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್ 11 (ರಾತ್ರಿ 11:59 ಗಂಟೆಯವರೆಗೆ)
- ಮೆರಿಟ್ ಪಟ್ಟಿ ಪ್ರಕಟಣೆಯ ನಿರೀಕ್ಷಿತ ದಿನಾಂಕ- ಫೆಬ್ರವರಿ 2027
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಎಸ್‌ಎಸ್‌ಸಿ/10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ಎನ್‌ಸಿವಿಟಿ/ಎಸ್‌ಸಿವಿಟಿ ಮಾನ್ಯತೆ ಪಡೆದ ಐಟಿಐ(ITI) ಪ್ರಮಾಣಪತ್ರವನ್ನು ಹೊಂದಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು(11/12/2026) ಅಭ್ಯರ್ಥಿಯು ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲರಿಗೆ(PwBD) 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
10ನೇ ತರಗತಿ ಮತ್ತು ಐಟಿಐ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಸರಾಸರಿಯ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ, ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಶಿಷ್ಯವೇತನ(ಸ್ಟೈಫಂಡ್):
ಅಪ್ರೆಂಟಿಸ್ ಕಾಯ್ದೆಯ ನಿಯಮಗಳ ಪ್ರಕಾರ ತರಬೇತಿಯ ಅವಧಿಯಲ್ಲಿ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ 100 ರೂಪಾಯಿಗಳಾಗಿದ್ದು, ಇದನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
- ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://rrcnr.org/ಗೆ ಭೇಟಿ ನೀಡಬೇಕು.
- “Engagement of Act Apprentice” ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು.
- ನೋಂದಣಿಯ ನಂತರ ಲಾಗಿನ್ ಆಗಿ, ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ, ಫೋಟೋ, ಸಹಿ, ಹೆಬ್ಬೆರಳಿನ ಗುರುತು ಮತ್ತು ಅಗತ್ಯ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಅಂತಿಮವಾಗಿ ಶುಲ್ಕ ಪಾವತಿಸಿ, ಅರ್ಜಿಯ ಪ್ರಿಂಟ್ ಔಟ್ ಅನ್ನು ಭವಿಷ್ಯದ ಉಲ್ಲೇಖಕ್ಕಾಗಿ ಇಟ್ಟುಕೊಳ್ಳಬೇಕು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ನ.11ರಿಂದ ಆರಂಭ) | —- |
| ಅಧಿಕೃತ ಜಾಲತಾಣ | https://rrcnr.org/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |