ನವದೆಹಲಿ: ಎನ್‌ಟಿಪಿಸಿ ಲಿಮಿಟೆಡ್‌ನ ಅಂಗಸಂಸ್ಥೆಯಾದ ಎನ್‌ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್(ಎನ್‌ಜಿಇಎಲ್)ನ ನವೀಕರಿಸಬಹುದಾದ ಇಂಧನ ಕ್ಷೇತ್ರ(ರಿನಿವೆಬಲ್ ಎನರ್ಜಿ ಏರಿಯಾ)ದಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅನುಭವಿ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಎಸ್‌ಡಬ್ಲ್ಯು ಅಥವಾ ಎಂಬಿಎ ಅರ್ಹತೆ ಜೊತೆಗೆ ನಿಗದಿತ ಕ್ಷೇತ್ರದಲ್ಲಿ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಎನ್‌ಜಿಇಎಲ್ ಅಧಿಕೃತ ಜಾಲತಾಣ ಅಥವಾ https://careers.ngel.inಕ್ಕೆ ಭೇಟಿ ನೀಡಿ, ಆ.31 ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಆಗಸ್ಟ್ 11(ಬೆಳಿಗ್ಗೆ 10:00 ಗಂಟೆಯಿಂದ)
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31 (ಸಂಜೆ 18:00 ಗಂಟೆಯವರೆಗೆ)
ಹುದ್ದೆಗಳ ವಿವರ:
ಮ್ಯಾನೇಜರ್ – ಆರ್‌ಇ (ಇ-4 ಗ್ರೇಡ್) 28 (ಸಾಮಾನ್ಯ-13, ಎಸ್‌ಸಿ-04, ಎಸ್‌ಟಿ-02, ಒಬಿಸಿ-07, ಇಡಬ್ಲ್ಯೂಎಸ್-02)
ಮ್ಯಾನೇಜರ್-ಫೈನಾನ್ಸ್ (ಇ-4 ಗ್ರೇಡ್) 05 (ಸಾಮಾನ್ಯ-04, ಒಬಿಸಿ-01)
ಮ್ಯಾನೇಜರ್ – ಲ್ಯಾಂಡ್ (ಇ-4 ಗ್ರೇಡ್) 01 (ಸಾಮಾನ್ಯ-01)
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಮ್ಯಾನೇಜರ್ – ಆರ್‌ಇ (Manager – RE: E-4 Grade) ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ (ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಕಂಟ್ರೋಲ್ ಮತ್ತು ಇನ್ಸ್ಟ್ರುಮೆಂಟೇಶನ್/ ಸಿವಿಲ್/ ಮೆಕ್ಯಾನಿಕಲ್) ಪೂರ್ಣಾವಧಿ ಪದವಿ ಪಡೆದಿರಬೇಕು.
ಅನುಭವ: ವಿದ್ಯುತ್ ವಲಯದಲ್ಲಿ ಕನಿಷ್ಠ 10 ವರ್ಷಗಳ ಕಾರ್ಯನಿರ್ವಾಹಕ ಅನುಭವ ಹೊಂದಿರಬೇಕು. ಇದರಲ್ಲಿ ಕನಿಷ್ಠ 4 ವರ್ಷಗಳ ಅನುಭವವು 50 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಗ್ರಿಡ್ ಸಂಪರ್ಕಿತ ಸೋಲಾರ್, ವಿಂಡ್ ಅಥವಾ ಬಿಇಎಸ್ಎಸ್ ಯೋಜನೆಗಳ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಗಳ ಬಿಸಿನೆಸ್ ಡೆವಲಪ್‌ಮೆಂಟ್/ ಎಂಜಿನಿಯರಿಂಗ್/ ಕಾಂಟ್ರಾಕ್ಟ್ಸ್ ಮತ್ತು ಪ್ರೊಕ್ಯೂರ್‌ಮೆಂಟ್/ ಕಮರ್ಷಿಯಲ್/ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್/ ಕಾರ್ಪೊರೇಟ್ ಪ್ಲಾನಿಂಗ್/ ಸ್ಟ್ರಾಟಜಿ ವಿಭಾಗಗಳಲ್ಲಿ ಇರಬೇಕು.
ಮ್ಯಾನೇಜರ್-ಫೈನಾನ್ಸ್ (Manager – Finance: E-4 Grade)ಹುದ್ದೆಗೆ; ಮಾನ್ಯತೆ ಪಡೆದ ಸಂಸ್ಥೆಯಿಂದ ಸಿಎ(CA) ಅಥವಾ ಸಿಎಂಎ(CMA) ಅರ್ಹತೆ ಹೊಂದಿರಬೇಕು.
ಅನುಭವ: ಹಣಕಾಸು/ಖಾತೆಗಳ(Finance/Accounts) ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಕಾರ್ಯನಿರ್ವಾಹಕ ಅನುಭವ ಹೊಂದಿರಬೇಕು (ಆರ್ಟಿಕಲ್‌ಶಿಪ್ ಅವಧಿಯನ್ನು ಹೊರತುಪಡಿಸಿ). ಎಸ್‌ಎಪಿ (SAP), ಎಂಎಸ್ ಆಫೀಸ್ ಮತ್ತು ಡೇಟಾ ಅನಾಲಿಟಿಕ್ಸ್ ಜ್ಞಾನ ಹೊಂದಿರುವ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕಂಪನಿಗಳಲ್ಲಿ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಮ್ಯಾನೇಜರ್ – ಲ್ಯಾಂಡ್ (Manager – Land: E-4 Grade) ಹುದ್ದೆಗೆ; ಕನಿಷ್ಠ 60% ಅಂಕಗಳೊಂದಿಗೆ ರೂರಲ್ ಮ್ಯಾನೇಜ್‌ಮೆಂಟ್/ ರೂರಲ್ ಡೆವಲಪ್‌ಮೆಂಟ್/ಡಿಸ್‌ಪ್ಲೇಸ್‌ಮೆಂಟ್/ರಿಸೆಟಲ್‌ಮೆಂಟ್/ರಿಹ್ಯಾಬಿಲಿಟೇಶನ್/ಕಮ್ಯುನಿಟಿ ಡೆವಲಪ್‌ಮೆಂಟ್/ಲೋಕಲ್ ಗವರ್ನೆನ್ಸ್/ಲೋಕಲ್ ಡೆವಲಪ್‌ಮೆಂಟ್/ಲೈವ್ಲಿಹುಡ್ಸ್/ಸೋಶಿಯಲ್ ಆಂಟ್ರಪ್ರೆನರ್‌ಶಿಪ್/ಸೋಶಿಯಲ್ ಡೆವಲಪ್‌ಮೆಂಟ್/ಸೋಶಿಯಲ್ ಅಡ್ಮಿನಿಸ್ಟ್ರೇಷನ್/ಸಸ್ಟೈನಬಲ್ ಡೆವಲಪ್‌ಮೆಂಟ್/ಡೆವಲಪ್‌ಮೆಂಟ್ ಪಾಲಿಸಿ ಮತ್ತು ಪ್ರಾಕ್ಟೀಸ್/ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ ಪೂರ್ಣಾವಧಿ ಪಿಜಿ ಪದವಿ/ಪಿಜಿ ಡಿಪ್ಲೊಮಾ ಅಥವಾ ಎಂಎಸ್‌ಡಬ್ಲ್ಯೂ(MSW) ಅಥವಾ ಎಂಬಿಎ(MBA) ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ಅನುಭವ: ಭೂಸ್ವಾಧೀನ/ಭೂ ನಿರ್ವಹಣೆಯಲ್ಲಿ ಕನಿಷ್ಠ 10 ವರ್ಷಗಳ ಕಾರ್ಯನಿರ್ವಾಹಕ ಅನುಭವ ಹೊಂದಿರಬೇಕು. ಇದರಲ್ಲಿ ಕನಿಷ್ಠ 4 ವರ್ಷಗಳ ಅನುಭವವು 50 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಗ್ರಿಡ್ ಸಂಪರ್ಕಿತ ಸೋಲಾರ್, ವಿಂಡ್ ಅಥವಾ ಬಿಇಎಸ್ಎಸ್ ಯೋಜನೆಗಳ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಗಳಲ್ಲಿ ಇರಬೇಕು.
ವಯೋಮಿತಿ:
ಗರಿಷ್ಠ ವಯೋಮಿತಿ 40 ವರ್ಷಗಳು (ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ).
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.70,000 ರಿಂದ 2,00,000/-ರವೆರೆಗೆ ಸಂಬಳ ಇರಲಿದೆ.
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು (XSM) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಜಿಇಎಲ್ ಅಧಿಕೃತ ವೆಬ್‌ಸೈಟ್ https://careers.ngel.in/ಗೆ ಭೇಟಿ ನೀಡಿ, ಹೊಸ ಬಳಕೆದಾರರಾಗಿ ನೋಂದಣಿಯಾಗಿ.
ನಂತರ ಅರ್ಜಿ ನಮೂನೆಯಲ್ಲಿ ಕೆಳಲಾದ ಸಂಪೂರ್ಣ ವಿವರ ತುಂಬಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ. ಮುಂದೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF | Download |
| Online Application Form Link | Apply Now |
| Official Website | ngel.in |
| More Updates | KarnatakaHelp.in |