ಆರ್‌ಆರ್‌ಸಿ ಪೂರ್ವ ರೈಲ್ವೆ(RRC ER) ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಡಿ ನೇಮಕಾತಿ

ಅರ್ಜಿ ಸಲ್ಲಿಸಲು ಸೆ.06 ಕೊನೆದಿನ

Published on:

ಕೋಲ್ಕತ್ತಾ: ರೈಲ್ವೆಯ ಪೂರ್ವ ರೈಲ್ವೆ (ಈಸ್ಟರ್ನ್‌ ರೈಲ್ವೆ)ಯ ರೈಲ್ವೆ ನೇಮಕಾತಿ ಮಂಡಳಿಯು 2026-27ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಡಿ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ಮತ್ತು ಮೆಟ್ರೋ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಲೆವೆಲ್-2 (ಗ್ರೂಪ್ ‘ಸಿ’) ವಿಭಾಗದಲ್ಲಿ 5 ಹುದ್ದೆಗಳು ಹಾಗೂ ಲೆವೆಲ್-1 (ಹಳೆಯ ಗ್ರೂಪ್ ‘ಡಿ’) ವಿಭಾಗದಲ್ಲಿ 10 ಹುದ್ದೆಗಳು ಸೇರಿದಂತೆ ಒಟ್ಟು 15 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಅರ್ಹತೆ ಹೊಂದಿಲ್ಲದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಆಸಕ್ತರು ಅಧಿಕೃತ ಜಾಲತಾಣ https://www.rrcer.org/notice_board.html ಅಥವಾ https://rrceronline.co.in/SnG26v02LvalmDM/ಕ್ಕೆ ಭೇಟಿ ನೀಡಿ, ಸೆ.06ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- ಆಗಸ್ಟ್ 07
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್‌ 06 (ಸಂಜೆ 18:00 ಗಂಟೆಯವರೆಗೆ)
  • ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ- 2026ರ ನವೆಂಬರ್ ಎರಡನೇ ವಾರ

ಹುದ್ದೆಗಳ ವಿವರ:

    ಶೈಕ್ಷಣಿಕ ಅರ್ಹತೆಗಳು:

    ಲೆವೆಲ್-2 ಹುದ್ದೆಗಳಿಗೆ; ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು (SC, ST, ಮಾಜಿ ಸೈನಿಕರು, ವಿಕಲಚೇತನರು ಮತ್ತು ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆದವರಿಗೆ ಶೇ.50ರ ಅಂಕಗಳ ಮಿತಿ ಅನ್ವಯಿಸುವುದಿಲ್ಲ). ಅಥವಾ 10ನೇ ತರಗತಿ ತೇರ್ಗಡೆಯೊಂದಿಗೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ(NAC) ಅಥವಾ NCVT ಅಂಗೀಕೃತ ಐಟಿಐ(ITI) ಹೊಂದಿರಬೇಕು.

    ಲೆವೆಲ್-1 ಹುದ್ದೆಗಳಿಗೆ; 10ನೇ ತರಗತಿ ಪಾಸ್ ಅಥವಾ ಐಟಿಐ (ITI) ಅಥವಾ ತತ್ಸಮಾನ ಅಥವಾ NCVT ನೀಡಿದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರಬೇಕು.

    ಸ್ಕೌಟಿಂಗ್/ಗೈಡಿಂಗ್ ಅರ್ಹತೆಗಳು (ಎರಡೂ ಲೆವೆಲ್‌ಗಳಿಗೆ):

    ಅಭ್ಯರ್ಥಿಯು ರಾಷ್ಟ್ರಪತಿ ಸ್ಕೌಟ್/ಗೈಡ್/ರೋವರ್/ರೇಂಜರ್ ಆಗಿರಬೇಕು ಅಥವಾ ಯಾವುದೇ ವಿಭಾಗದಲ್ಲಿ ಹಿಮಾಲಯನ್ ವುಡ್ ಬ್ಯಾಡ್ಜ್ (HWB) ಹೊಂದಿರಬೇಕು.

    ಕಳೆದ 5 ವರ್ಷಗಳಿಂದ ಸ್ಕೌಟ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿರಬೇಕು (ಸಕ್ರಿಯತೆಯ ಪ್ರಮಾಣಪತ್ರ ಸಲ್ಲಿಸಬೇಕು).

    ರಾಷ್ಟ್ರೀಯ ಮಟ್ಟದಲ್ಲಿ ಅಥವಾ ಅಖಿಲ ಭಾರತ ರೈಲ್ವೆ ಮಟ್ಟದಲ್ಲಿ ಕನಿಷ್ಠ 2 ಕಾರ್ಯಕ್ರಮಗಳು ಹಾಗೂ ರಾಜ್ಯ ಮಟ್ಟದಲ್ಲಿ ಕನಿಷ್ಠ 2 ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬೇಕು.

    ವಯೋಮಿತಿ:

    01-01-2027ರಂತೆ;

    • ಲೆವೆಲ್-2 ಹುದ್ದೆಗಳಿಗೆ: 18 ರಿಂದ 30 ವರ್ಷಗಳು.
    • ಲೆವೆಲ್-1 ಹುದ್ದೆಗಳಿಗೆ: 18 ರಿಂದ 33 ವರ್ಷಗಳು.

    ನಿಯಮಾನುಸಾರ ಒಬಿಸಿ(OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ. ರೈಲ್ವೆ ನೌಕರರು, ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ನಿಯಮಾವಳಿಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

    ಆಯ್ಕೆ ಪ್ರಕ್ರಿಯೆ:

    • ಹಂತ-1 ಲಿಖಿತ ಪರೀಕ್ಷೆ (60 ಅಂಕಗಳು)
    • ಹಂತ-2 ದಾಖಲಾತಿ ಪರಿಶೀಲನೆ (40 ಅಂಕಗಳು)
    • ವೈದ್ಯಕೀಯ ತಪಾಸಣೆ

    ಪರೀಕ್ಷಾ ಶುಲ್ಕ:

    ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/- (ಪರೀಕ್ಷೆಗೆ ಹಾಜರಾದಲ್ಲಿ ರೂ.400/- ಮರುಪಾವತಿ ಮಾಡಲಾಗುತ್ತದೆ).
    ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ವಿಕಲಚೇತನರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EBC) ಅಭ್ಯರ್ಥಿಗಳಿಗೆ ರೂ.250/- (ಪರೀಕ್ಷೆಗೆ ಹಾಜರಾದಲ್ಲಿ ಸಂಪೂರ್ಣ ಶುಲ್ಕ ಮರುಪಾವತಿಯಾಗಲಿದೆ).

    ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ(UPI) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು.

    ಅರ್ಜಿ ಸಲ್ಲಿಸುವುದು ಹೇಗೆ.?

    ಹಂತ-1 ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.rrcer.org/ದಲ್ಲಿ “Notice Board(ನೋಟಿಸ್ ಬೋರ್ಡ್)” ವಿಭಾಗಕ್ಕೆ ಭೇಟಿ ನೀಡಿ.

    ಹಂತ-2 ನಂತರ ಅಲ್ಲಿ “Link for Online Application against Scouts & Guides Quota (Open Advt.) for the year 2026-27.” ಶೀರ್ಷಿಕೆಯ ಲಿಂಕ್ ಮೇಲೆ ಕ್ಲಿಕ್ಕಿಸಿ.

    ಹಂತ-3 ತದನಂತರ, ಹೊಸ ಅಭ್ಯರ್ಥಿಗಳಾಗಿ ನೋಂದಣಿಯಾಗುವ ಮೂಲಕ ಅರ್ಜಿ ನಮೂನೆಯನ್ನು ತುಂಬಿ, ತಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಭರಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

    Important Direct Links:

    Official Notification PDFDownload
    Online Application Form LinkApply Now
    Official Websitewww.rrcer.org
    More UpdatesKarnatakaHelp.in
    About the Author

    ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

    1 thought on “ಆರ್‌ಆರ್‌ಸಿ ಪೂರ್ವ ರೈಲ್ವೆ(RRC ER) ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಡಿ ನೇಮಕಾತಿ”

    Leave a Comment