ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್-2026)ಯ ಆನ್ಲೈನ್ ಅರ್ಜಿ ಸಲ್ಲಿಕೆಯ ಗಡುವನ್ನು ಸೆ.10ರವರೆಗೆ ವಿಸ್ತರಿಸಿದೆ.
ಪರೀಕ್ಷೆ ಯು ಒಟ್ಟು 37 ವಿಷಯಗಳಲ್ಲಿ ಅ.11ರಂದು ರಾಜ್ಯದ 11 ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿದ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳೂ ಸಹ ಕೆಇಎ ಅಧಿಕೃತ ಜಾಲತಾಣ https://kearecruitment.karnataka.gov.in/kset2026/Account/Loginಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ – ಆಗಸ್ಟ್ 10
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 10(ವಿಸ್ತರಣೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 11(ವಿಸ್ತರಣೆ)
- ಪ್ರವೇಶ ಪತ್ರ(Hall Ticket) ಬಿಡುಗಡೆ ದಿನಾಂಕ- ಅಕ್ಟೋಬರ್ 01
- ಪರೀಕ್ಷಾ ದಿನಾಂಕ- ಅಕ್ಟೋಬರ್ 11(ಭಾನುವಾರ)
ಶೈಕ್ಷಣಿಕ ಅರ್ಹತೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳೊಂದಿಗೆ ತೇರ್ಗಡೆ. {ಪರಿಶಿಷ್ಟ ಜಾತಿ(ಪ್ರವರ್ಗ-ಎ/ಬಿ/ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಹಿಂದುಳಿದ ವರ್ಗಗಳು(ಪ್ರವರ್ಗ-I, IIಎ, IIಬಿ, IIIಎ, IIIಬಿ), ವಿಶೇಷಚೇತನರು(ಪಿಡಬ್ಲ್ಯೂಡಿ) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50ರಷ್ಟು ಅಂಕಗಳು ಕಡ್ಡಾಯ.}
ಪ್ರಸ್ತುತ ಸ್ನಾತಕೋತ್ತರ ಪದವಿಯ ಅಂತಿಮ ಅಥವಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ತಾತ್ಕಾಲಿಕವಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಆದರೆ ಅವರು ಫಲಿತಾಂಶ ಪ್ರಕಟವಾದ ಎರಡು ವರ್ಷಗಳೊಳಗೆ ನಿಗದಿತ ಅಂಕಗಳೊಂದಿಗೆ ಉತ್ತೀರ್ಣರಾದ ಅಂಕಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ.
ವಯೋಮಿತಿ:
ಕೆಸೆಟ್-2026 ಪರೀಕ್ಷೆಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
ವಿಷಯದ ಆಯ್ಕೆ: ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಕೆಸೆಟ್ ಪರೀಕ್ಷೆ ಬರೆಯಬೇಕು. ಈಗಾಗಲೇ ಯಾವುದೇ ವಿಷಯದಲ್ಲಿ ಕೆಸೆಟ್ ಅರ್ಹತೆ ಪಡೆದಿದ್ದರೆ, ಪುನಃ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ ಅಂತಹವರ ಹಳೆಯ ಅರ್ಹತೆಯನ್ನೂ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಲಾಗದೆ.
ಪರೀಕ್ಷಾ ಶುಲ್ಕ:
- ಸಾಮಾನ್ಯ ವರ್ಗ, ಪ್ರವರ್ಗ II-ಎ, II-ಬಿ, III-ಎ, III-ಬಿ ಮತ್ತು ಇತರೆ ರಾಜ್ಯಗಳ ಅಭ್ಯರ್ಥಿಗಳಿಗೆ ರೂ.750/-
- ಪ್ರವರ್ಗ-I, ಪ.ಜಾತಿ(ಪ್ರವರ್ಗ-ಎ/ಬಿ/ಸಿ), ಎಸ್ಟಿ, ಪಿಡಬ್ಲ್ಯೂಡ್ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.500/-
ಪಾವತಿ ವಿಧಾನ: ಶುಲ್ಕವನ್ನು ಕೇವಲ ಆನ್ಲೈನ್ ಮೂಲಕವೇ ಪಾವತಿಸಬೇಕು.
ಪರೀಕ್ಷಾ ವಿಧಾನ:
ಪರೀಕ್ಷೆಯು ಆಫ್ಲೈನ್ ಓ.ಎಂ.ಆರ್(OMR) ಮಾದರಿಯಲ್ಲಿ ದಿನಾಂಕ ಅಕ್ಟೋಬರ್ 11, 2026 ರಂದು ಒಂದೇ ಅವಧಿಯಲ್ಲಿ (ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ – ಒಟ್ಟು 3 ಗಂಟೆಗಳು) ನಡೆಯಲಿದೆ. ಇದರಲ್ಲಿ ಎರಡು ಕಡ್ಡಾಯ ಪತ್ರಿಕೆಗಳಿರುತ್ತವೆ:
ಪತ್ರಿಕೆ-I (ಸಾಮಾನ್ಯ ಪತ್ರಿಕೆ): ಬೋಧನೆ, ಸಂಶೋಧನೆ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 50 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ (ಒಟ್ಟು 100 ಅಂಕಗಳು).
ಪತ್ರಿಕೆ-II (ವಿಷಯ ಪತ್ರಿಕೆ): ಅಭ್ಯರ್ಥಿ ಆಯ್ದುಕೊಂಡ ವಿಷಯಕ್ಕೆ ಸಂಬಂಧಿಸಿದ 100 ಕಡ್ಡಾಯ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ (ಒಟ್ಟು 200 ಅಂಕಗಳು).
ಋಣಾತ್ಮಕ ಮೌಲ್ಯಮಾಪನ: ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ.
ಪರೀಕ್ಷಾ ವಿಷಯಗಳು ಮತ್ತು ಕೇಂದ್ರಗಳು:
- ಒಟ್ಟು 37 ವಿಷಯಗಳಲ್ಲಿ ಕೆಸೆಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
- ಕರ್ನಾಟಕದಾದ್ಯಂತ ಒಟ್ಟು 11 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ (ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರು).
- ಭಾಗ-ಎ ನಲ್ಲಿರುವ 18 ಪ್ರಮುಖ ವಿಷಯಗಳಿಗೆ ಅಭ್ಯರ್ಥಿಗಳು ಈ 11 ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
- ಭಾಗ-ಬಿ ನಲ್ಲಿರುವ ಉಳಿದ 19 ವಿಷಯಗಳಿಗೆ (ಉದಾಹರಣೆಗೆ: ಭೂಗೋಳ ಶಾಸ್ತ್ರ, ಕಾನೂನು, ಸಂಸ್ಕೃತ, ಉರ್ದು, ಪರಿಸರ ವಿಜ್ಞಾನ ಇತ್ಯಾದಿ) ಕೇವಲ ಬೆಂಗಳೂರು ಕೇಂದ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/kset2026 ಅಥವಾ https://kearecruitment.karnataka.gov.in/kset2026/Account/Loginಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಪಠ್ಯಕ್ರಮವನ್ನು ಡೌನ್ಲೋಡ್ ಮಾಡಲು ಪ್ರಾಧಿಕಾರದ ವೆಬ್ಸೈಟ್ ವೀಕ್ಷಿಸಬಹುದು ಅಥವಾ ಸಹಾಯವಾಣಿ ಸಂಖ್ಯೆ: 080-23460460 ಹಾಗೂ ಇಮೇಲ್: kset2026kea@gmail.com ಅನ್ನು ಸಂಪರ್ಕಿಸಬಹುದು.
ಮುಖ್ಯ ಲಿಂಕ್ಗಳು:
| ಅರ್ಜಿ ಸಲ್ಲಿಕೆಕ ಕೊನೆ ದಿನಾಂಕ ವಿಸ್ತರಣೆಯ ಪ್ರಕಟಣೆ(05/09/2026) | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | KarnatakaHelp.in |
Hello
Kst
🙏
Kset
Kset