ಕಪುರ್ತಲಾ: ಇಲ್ಲಿನ ರೈಲ್ವೆಯ ರೈಲ್ ಕೋಚ್ ಫ್ಯಾಕ್ಟರಿಯ ತಾಂತ್ರಿಕ ತರಬೇತಿ ಕೇಂದ್ರದ ವತಿಯಿಂದ 1961ರ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ತರಬೇತಿ ನೀಡಲು ಒಟ್ಟು 734 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 734 ಸೀಟುಗಳು ಲಭ್ಯವಿದ್ದು, ಆಯಾ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ ಕೋಚ್ ಫ್ಯಾಕ್ಟರಿಯ ಅಧಿಕೃತ ವೆಬ್‌ಸೈಟ್ www.rcf.indianrailways.gov.in ಅಥವಾ ಮೂಲಕ ಸೆ.05ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
- ಅಧಿಕೃತ ಅಧಿಸೂಚನೆಯ ದಿನಾಂಕ – ಆಗಸ್ಟ್ 07
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಸೆಪ್ಟೆಂಬರ್ 05
ಹುದ್ದೆಗಳ ವಿವರ
- ಫಿಟ್ಟರ್ (Fitter) – 180
- ವೆಲ್ಡರ್ (Welder – G&E) – 220
- ಮೆಷಿನಿಸ್ಟ್ (Machinist) – 60
- ಪೇಂಟರ್ (Painter – G) – 40
- ಕಾರ್ಪೆಂಟರ್ (Carpenter) – 40
- ಎಲೆಕ್ಟ್ರೀಷಿಯನ್ (Electrician) – 110
- ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ (AC&Ref. Mechanic) – 44
- ಮೆಕ್ಯಾನಿಕ್ – ಮೋಟಾರ್ ವೆಹಿಕಲ್ (Mechanic – Motor Vehicle) – 20
- ಎಲೆಕ್ಟ್ರಾನಿಕ್ ಮೆಕ್ಯಾನಿಕ್ (Electronic Mechanic) – 20
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ 10ನೇ ತರಗತಿ(ಅಥವಾ ತತ್ಸಮಾನ ವಿದ್ಯಾರ್ಹತೆ) ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
05-09-2026ರಂತೆ;
ಕನಿಷ್ಠ 15 ವರ್ಷ ತುಂಬಿರಬೇಕು ಮತ್ತು 24 ವರ್ಷ ಮೀರಿರಬಾರದು.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ(PWD) 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರಿಗೂ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್(ಕನಿಷ್ಠ ಶೇ.50 ಅಂಕಗಳು) ಮತ್ತು ಐಟಿಐ (ITI) ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿ ಶೇಕಡಾವಾರು ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು(Merit List) ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ. 100/- ಅರ್ಜಿ ಶುಲ್ಕವಿದ್ದು, ಇದನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
- ಎಸ್‌ಸಿ (SC), ಎಸ್‌ಟಿ (ST), ವಿಕಲಚೇತನರು (PWD) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ..?
ಅಭ್ಯರ್ಈಗಳು ಅಧಿಕೃತ ಜಾಲತಾಣ https://pardarsy.railnet.gov.in/apprentice-2026/loginಕ್ಕೆ ಭೇಟಿ ನೀಡಿ. ಹೊಸ ಬಳಕೆದಾರರಾಗಿ ನೋಂದಣಿಯಾಗುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ತೊಂದರೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 01822-285095, 285096ಗೆ ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10:00 ರಿಂದ ಸಂಜೆ 17:00ರವರೆಗೆ ಸಂಪರ್ಕಿಸಬಹುದಾಗಿದೆ.
Important Direct Links:
| Official Notification PDF | Download |
| Online Application Form Link | Apply Now |
| Official Website | rcf.indianrailways.gov.in |
| More Updates | KarnatakaHelp.in |