ಸ.ತೋಟಗಾರಿಕೆ ನಿರ್ದೇಶಕರ ನೇಮಕ ಪರೀಕ್ಷೆಯ ಕೀ ಉತ್ತರ ಬಿಡುಗಡೆ

ಬೆಂಗಳೂರು ಅ.06: ತೋಟಗಾರಿಕೆ ಇಲಾಖೆಯ ಕಲ್ಯಾಣ ಕರ್ನಾಟಕ(ಕೆಕೆ) ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕ(ಎಹೆಚ್‌ಡಿ) ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ.06ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಂದೇ ಪತ್ರಿಕೆ-1 ಮತ್ತು ಪತ್ರಿಕೆ-2ರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿದೆ. ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಅ.08 ಬೆಳಗ್ಗೆ 10:30ರೊಳಗೆ ನಿಗದಿತ ಪೂರಕ ದಾಖಲೆಗಳನ್ನು ಸಲ್ಲಿಸಿ ಹಾಗೂ ಪತ್ರಿ ಆಕ್ಷೇಪಣೆಗೆ ರೂ.25ರಂತೆ ಪಾವತಿಸುವ … More

ಗ್ರಾಮ ಆಡಳಿತಾಧಿಕಾರಿ(ವಿಎಒ) ಪರೀಕ್ಷೆಯ ಕೀ ಉತ್ತರಗಳು ಪ್ರಕಟ

ಬೆಂಗಳೂರು ಅ.06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ಇಲಾಖೆಯ 505 ಉಳಿಕೆ ಮೂಲ ವೃಂದ(ಆರ್‌ಪಿಸಿ)ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.04ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮಂಗಳವಾರ ಪ್ರಕಟಿಸಿದೆ. ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ ಅಪ್ಲೋಡ್‌ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು. ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲಿಚ್ಛಿಸುವವರು ಪ್ರತಿ ಆಕ್ಷೇಪಣೆಗೆ ರೂ.25ರಂತೆ ಪಾವತಿಸಿ, ಅಗತ್ಯ ಪೂರಕ ದಾಖಲೆಗಳನ್ನು ಲಗತ್ತಿಸಿ … More

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆ; ಪ್ರವೇಶ ಪತ್ರ ಪ್ರಕಟ

ಬೆಂಗಳೂರು ಸೆ.28: ರಾಜ್ಯ ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದದಡಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ.04ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ ಬಿಡುಗಡೆಗೊಳಿಸಿದೆ. ಅಂದು ಬೆಳಗ್ಗೆ 10:30 ರಿಂದ 12:30ರವೆರೆಗೆ ಸಾಮಾನ್ಯ ಜ್ಞಾನ(ಜಿಕೆ) ಪತ್ರಿಕೆ -1 ಹಾಗೂ ಮಧ್ಯಾಹ್ನ 2:30 ರಿಂದ 4:30ರವರೆಗೆ ಕನ್ನಡ, ಇಂಗ್ಲೀಷ್‌ ಹಾಗೂ ಕಂಪ್ಯೂಟರ್‌ ಜ್ಞಾನ ವಿಷಯಗಳನ್ನೊಳಗೊಂಡ ಪತ್ರಿಕೆ-2 ಪರೀಕ್ಷೆಗಳು ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ಆಫ್‌ಲೈನ್‌ ಮೋಡ್‌ನಲ್ಲಿ … More

ಕೆಎಸ್‌ಆರ್‌ಪಿ ಕಾನ್ಸ್ಟೇಬಲ್‌ ಕೀ ಉತ್ತರ ಪ್ರಕಟ

ಬೆಂಗಳೂರು ಸೆ.21: ರಾಜ್ಯ ಪೊಲೀಸ್‌ ಇಲಾಖೆಯ ವಿಶೇಷ ಮೀಸಲು ಪೊಲೀಸ್‌ ಕಾನ್ಸ್ಟೇಬಲ್‌(ಕೆಎಸ್‌ಆರ್‌ಪಿ, ಐಆರ್ಬಿ, ಕೆಎಸ್‌ಐಎಸ್‌ಎಫ್)ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.20ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ. ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದವಾರು ಕೀ ಉತ್ತರಗಳನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspx ದ ಮೂಲಕ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಸಿ… ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸೆ.23ರ ಬೆಳಗ್ಗೆ 10.30ರೊಳಗೆ ಪತ್ರಿಕೆ ವಿವರ, ವರ್ಷನ್‌ ಕೋಡ್‌, … More

ಕೆಇಎ: ಪೌರಾಡಳಿತ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಡಿ ಖಾಲಿಯಿರುವ 210 ವಿವಿಧ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ನೀರು ಸರಬರಾಜು ಆಪರೇಟರ್ 80 ಹುದ್ದೆ, ಸಹಾಯಕ ನೀರು ಸರಬರಾಜು ಆಪರೇಟರ್ 122 ಹುದ್ದೆ, ಎಲೆಕ್ನಿಷಿಯನ್ ಗ್ರೇಡ್-1 03 ಹುದ್ದೆ ಮತ್ತು ಎಲೆಕ್ನಿಷಿಯನ್ ಗ್ರೇಡ್-2 05 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಜೊತೆಗೆ … More

ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌: ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು ಸೆ.11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ಹುದ್ದೆಗಳ ನೇಮಕಾತಿಗಾಗಿ ಸೆ.06ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಸದರಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೆ.07ರಂದು ಬಿಡುಗಡೆಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೆ.09ರವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅವಧಿಯಲ್ಲಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಸಿ ಸೆ.10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಇದರನ್ವಯ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ … More

ಪಿಯು ಕಾಲೇಜು ಪ್ರಾಂಶುಪಾಲರ ನೇಮಕಾತಿ; ಕೆಇಎ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಾಲಾ ಶಿಕ್ಷಣ ಇಲಾಖೆಯ ಅಧೀನದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಗ್ರೂಪ್-ಎ ವೃಂದದ ಒಟ್ಟು 247 ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಉಪನ್ಯಾಸಕರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಉಳಿಕೆ ಮೂಲ ವೃಂದ 216 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವಲಯ ಸ್ಥಳೀಯ ವೃಂದದ 31 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ನಡೆಯಲಿದೆ. ನಿಗದಿತ ಶೈಕ್ಷಣಿಕ ಅರ್ಹತೆ ಹಾಗೂ ಉಪನ್ಯಾಸಕ ವೃತ್ತಿ ಕನಿಷ್ಠ ಹತ್ತು ವರ್ಷಗಳ ಸೇವೆ … More

ಕಾನ್ಸ್ಟೇಬಲ್ ಸಿಎಆರ್‌/ಡಿಎಆರ್‌ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್‌/ಡಿಎಆರ್‌) ಹುದ್ದೆಗಳ ಭರ್ತಿಗಾಗಿ ಸೆ.06ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ(ಆ.31) ಬಿಡುಗಡೆಗೊಳಿಸಿದೆ. ‌ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಪತ್ರಿಕೆ(ಜಿಕೆ) ವಿಷಯವನ್ನೊಳಗೊಂಡ ಪರೀಕ್ಷೆಯು ಆರ್‌ಪಿಸಿ ವೃಂದ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಕೆಕೆ ವೃಂದ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4:30ರವರೆಗೆ ಜರುಗಲಿದೆ. ಸದರಿ ನೇಮಕಾತಿ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ … More

ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲಾ ಶಿಕ್ಷಕರ ನೇಮಕಾತಿ; ಕೆಇಎ ಅರ್ಜಿ ಆಹ್ವಾನ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಉಳಿಕೆ ಮೂಲ ವೃಂದದ 100 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 40 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ಡಿ.ಇಎಲ್.ಎಡ್‌, ಡಿ.ಎಡ್‌, ಬಿ.ಎಡ್‌ ಜೊತೆಗೆ ಟಿಇಟಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ https://kearecruitment.karnataka.gov.in/SWRT_2026/Account/Login ಮೂಲಕ ಸೆ.18ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖ ದಿನಾಂಕಗಳು: … More

ಕೆಇಎ ಮುಂಬರುವ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಇಲಾಖೆಗಳ ಮುಂಬರುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಕೆಳಗಿನ ದಿನಾಂಕಗಳಂದು ಪರೀಕ್ಷೆಗಳು ನಡೆಯಲಿವೆ: ಕಡ್ಡಾಯ ಕನ್ನಡ ಪರೀಕ್ಷೆ(ವಿವಿಧ ಇಲಾಖೆಗಳು): 22.08.2026 ರಂದು (ಆರ್‌ಪಿಸಿ) ಮತ್ತು (ಕೆಕೆ) ಮಧ್ಯಾಹ್ನ 03.00 ರಿಂದ 05.00 ರವರೆಗೆ ನಡೆಯಲಿದೆ. ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(CAR/DAR): 06.09.2026 ರಂದು ಪರೀಕ್ಷೆ ನಡೆಯಲಿದ್ದು, ಆರ್‌ಪಿಸಿ ಅಭ್ಯರ್ಥಿಗಳಿಗೆ ಬೆಳಿಗ್ಗೆ 10.30 ರಿಂದ 12.00 ರವರೆಗೆ … More