ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(ಸಿಎಆರ್/ಡಿಎಆರ್) ಹುದ್ದೆಗಳ ಭರ್ತಿಗಾಗಿ ಸೆ.06ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ(ಆ.31) ಬಿಡುಗಡೆಗೊಳಿಸಿದೆ.
ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಪತ್ರಿಕೆ(ಜಿಕೆ) ವಿಷಯವನ್ನೊಳಗೊಂಡ ಪರೀಕ್ಷೆಯು ಆರ್ಪಿಸಿ ವೃಂದ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಕೆಕೆ ವೃಂದ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4:30ರವರೆಗೆ ಜರುಗಲಿದೆ.
ಸದರಿ ನೇಮಕಾತಿ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಲಿಂಕ್ https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ತಮ್ಮ ಅರ್ಜಿ ಸಂಖ್ಯೆ ಹಾಗೂ ಹೆಸರು ನಮೂದಿಸಿ ಪರೀಕ್ಷಾ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
It’s ok
CAR/DAR police constable
SSLC