ಹಾಸನ: ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಜವಾನ (ಸೇವಕ) ಹುದ್ದೆಗಳ ಭರ್ತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 48 ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿದ್ದು, ನೇಮಕ ಪ್ರಕ್ರಿಯೆಯು ಮೆರಿಟ್ ಆಧಾರದ ಮೇಲಿದೆ. 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://hassan.dcourts.gov.in/notice-category/recruitments/ದ ಮೂಲಕ ಸೆ.17ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- ಆಗಸ್ಟ್ 19
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 17(ರಾತ್ರಿ 11.59 ರವರೆಗೆ)
- ಚಲನ್ ಮುಖಾಂತರ ಬ್ಯಾಂಕಿನಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 19
ಹುದ್ದೆವಾರು ಸಂಖ್ಯೆ ಮಾಹಿತಿ:
- ಒಟ್ಟು ಹುದ್ದೆಗಳು: 48
- ವರ್ಗೀಕರಣ:
- ಸಾಮಾನ್ಯ ವರ್ಗ: 24
- ಪರಿಶಿಷ್ಟ ಜಾತಿ: 03
- ಪರಿಶಿಷ್ಟ ಜಾತಿ (ಪ್ರವರ್ಗ-ಎ): 02
- ಪರಿಶಿಷ್ಟ ಜಾತಿ (ಪ್ರವರ್ಗ-ಸಿ): 02
- ಪರಿಶಿಷ್ಟ ಪಂಗಡ: 02
- ಪ್ರವರ್ಗ-1: 02
- ಪ್ರವರ್ಗ-2ಎ: 07
- ಪ್ರವರ್ಗ-2ಬಿ: 01
- ಪ್ರವರ್ಗ-3ಎ: 02
- ಪ್ರವರ್ಗ-3ಬಿ: 03
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ (ಒಂದು ಬಾರಿಯ ಕ್ರಮವಾಗಿ ನೀಡಲಾದ 5 ವರ್ಷಗಳ ಸಡಿಲಿಕೆ ಸೇರಿದಂತೆ) ಈ ಕೆಳಗಿನಂತಿದೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ (35 + 5)
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ (38 + 5)
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ (40 + 5)
ಗಮನಿಸಿ: ಅಂಗವಿಕಲರು, ವಿಧವೆಯರು, ಮಾಜಿ ಸೈನಿಕರು ಹಾಗೂ ಜೀತ ಕಾರ್ಮಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಲಿಸ್ಟ್
- ಸಂದರ್ಶನ
ಸಂಬಳ:
ವೇತನ ಶ್ರೇಣಿ: ರೂ.27,000-650-29,600-725-32,500-800-35,700-900-39,300-1000-43,300-1125-46,675 ಮತ್ತು ಲಭ್ಯವಿರುವ ಇತರೆ ಭತ್ಯೆಗಳು.
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ, ಮಾಜಿ ಸೈನಿಕ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ.200/-
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಪಾವತಿ ವಿಧಾನ: ಆನ್ಲೈನ್ನಲ್ಲಿ ಎಸ್ಬಿಐ ಇ-ಪೇ (SBI e-pay) ಮೂಲಕ ಅಥವಾ ಎಸ್ಬಿಐ ಶಾಖೆಯಲ್ಲಿ ಚಲನ್ ಮುಖಾಂತರ ಪಾವತಿಸಬಹುದು. ಡಿಮ್ಯಾಂಡ್ ಡ್ರಾಫ್ಟ್, ಪೋಸ್ಟಲ್ ಆರ್ಡರ್ ಅಥವಾ ಮನಿ ಆರ್ಡರ್ಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?
ಹಂತ-1 ಅಧಿಕೃತ ಜಾಲತಾಣ https://hassan.dcourts.gov.in/ಕ್ಕೆ ಭೇಟಿ ನೀಡಿ
ಹಂತ-2 ನಂತರ ಮೆನುವಿನಲ್ಲಿ “Notice” ವಿಭಾಗದಡಿ “Recruitment” ಎಂಬ ಉಪವಿಭಾಗಕ್ಕೆ ಭೇಟಿ ನೀಡಿ.
ಹಂತ-3 ತದನಂತರ “Recruitment for the Post of Peon Notification No. ADMN/1/2026 dated:18.08.2026” ಶೀರ್ಷಿಕೆಯಡಿ ಒದಗಿಸಲಾಗಿರುವ “Click here to Apply Online” ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-4 ಮುಂದೆ ಹೊಸಪುಟ ತೆರೆಯುತ್ತದೆ. ಅಲ್ಲಿ ಕೇಳಲಾದ ಸಂಪೂರ್ಣವಿವರವನ್ನು ತುಂಬಿ ಹಾಗೂ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | hassan.dcourts.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |
Huchesh hosur