ಸುಪ್ರೀಂ ಕೋರ್ಟ್‌ನಲ್ಲಿ ‘ಕೋರ್ಟ್ ಅಸಿಸ್ಟೆಂಟ್’ ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಸಲು ನ.24ರ ಗಡುವು

Published on:

ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಗ್ರೂಪ್-ಬಿ ನಾನ್-ಗೆಜೆಟೆಡ್ ಕೋರ್ಟ್ ಅಸಿಸ್ಟೆಂಟ್(ಟೆಕ್ನಿಕಲ್ ಅಸಿಸ್ಟೆಂಟ್-ಕಮ್-ಪ್ರೋಗ್ರಾಮರ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ.03ರಿಂದ ಪ್ರಾರಂಭವಾಗಲಿದೆ.

ಸದರಿ ನೇಮಕಾತಿ ಮೂಲಕ ಒಟ್ಟು 15(ತಾತ್ಕಾಲಿಕ) ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ನೋಂದಣಿ ಆರಂಭ- ನವೆಂಬರ್‌ 03
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್‌ 24(ರಾತ್ರಿ 11:55 ರವರೆಗೆ)
  • ಪರೀಕ್ಷೆಯ ದಿನಾಂಕ (ತಾತ್ಕಾಲಿಕ)- ಡಿಸೆಂಬರ್ 22

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿರಬೇಕು:

-> ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ./ಬಿ.ಟೆಕ್ ಪದವಿ ಮತ್ತು 3 ವರ್ಷಗಳ ಸಾಫ್ಟ್‌ವೇರ್ ಅಭಿವೃದ್ಧಿ ಅನುಭವ.

-> ಅಥವಾ, ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ (MCA) ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಎಸ್ಸಿ ಪದವಿ ಮತ್ತು 3 ವರ್ಷಗಳ ಸಾಫ್ಟ್‌ವೇರ್ ಅಭಿವೃದ್ಧಿ ಅನುಭವ.

-> ಅಥವಾ, ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಬಿ.ಸಿ.ಎ ಪದವಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು 4 ವರ್ಷಗಳ ಸಾಫ್ಟ್‌ವೇರ್ ಅಭಿವೃದ್ಧಿ ಅನುಭವ ಹೊಂದಿರಬೇಕು.

ಗಮನಿಸಿ: ಕಾನೂನು ಪದವಿ(Law Degree) ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು 01-10-2026 ರಂತೆ, ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳಾಗಿರಬೇಕು.

ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು(ಎನ್‌ಸಿಎಲ್), ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

ನೇಮಕಾತಿಯು ನಾಲ್ಕು ಹಂತಗಳನ್ನು ಒಳಗೊಂಡಿದೆ:

  1. ವಸ್ತುನಿಷ್ಠ ಬೆರಳಚ್ಚು ಪರೀಕ್ಷೆ(100 ಅಂಕಗಳು)
  2. ವಸ್ತುನಿಷ್ಠ ಬೆರಳಚ್ಚು ತಾಂತ್ರಿಕ ಸಾಮರ್ಥ್ಯ ಪರೀಕ್ಷೆ(50 ಅಂಕಗಳು)
  3. ಪ್ರಾಯೋಗಿಕ ಸಾಮರ್ಥ್ಯ ಪರೀಕ್ಷೆ (50 ಅಂಕಗಳು)
  4. ಸಂದರ್ಶನ(25 ಅಂಕಗಳು)

ವಸ್ತುನಿಷ್ಠ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.

ಸಂಬಳ:

ಪೇ ಮ್ಯಾಟ್ರಿಕ್ಸ್‌ನ ಲೆವೆಲ್ 7 ರ ಅಡಿಯಲ್ಲಿ, ಆರಂಭಿಕ ಮೂಲ ವೇತನ ರೂ.44,900/- ಮತ್ತು ನಿಯಮಾನುಸಾರ ಭತ್ಯೆಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಅನಾರಕ್ಷಿತ ವರ್ಗದ ಅಭ್ಯರ್ಥಿಗಳಿಗೆ-ರೂ.1,500/-
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ಮಾಜಿ ಸೈನಿಕರು/ಅಂಗವಿಕ ಅಭ್ಯರ್ಥಿಗಳಿಗೆ- ರೂ.750/-

ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

  • ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ www.sci.gov.inನ “ನೇಮಕಾತಿ” ವಿಭಾಗದಲ್ಲಿ ನಿಗದಿತ ದಿನಾಂದಿಂದ ಲಭ್ಯವಾಗುವ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವಾಗ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್–ನ.03 ರಿಂದ ಲಭ್ಯ–
ಅಧಿಕೃತ ಜಾಲತಾಣwww.sci.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment