ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ (ಸುಪ್ರೀಂ ಕೋರ್ಟ್) ಖಾಲಿ ಇರುವ ಕೋರ್ಟ್ ಮಾಸ್ಟರ್(ಶಾರ್ಟ್ಹ್ಯಾಂಡ್) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿ ಸಮಾನವಾದ ಹುದ್ದೆಯನ್ನು ನಿಯಮಿತವಾಗಿ ಹೊಂದಿವ ಅಥವಾ ಪ್ರೈವೇಟ್ ಸೆಕ್ರೆಟರಿ/ಸೀನಿಯರ್ ಪಿಎ/ಪಿಎ/ಸೀನಿಯರ್ ಸ್ಟೆನೋಗ್ರಾಫರ್ ಕೇಡರ್ನಲ್ಲಿ ಕನಿಷ್ಠ 5 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ದಿನಾಂಕ- ಅಕ್ಟೋಬರ್ 12
- ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 27
- ಹೈಕೋರ್ಟ್ಗಳು ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಕಳುಹಿಸಲು ಕೊನೆಯ ದಿನಾಂಕ- ಅಕ್ಟೋಬರ್ 31, 2026.
ಶೈಕ್ಷಣಿಕ ಮತ್ತು ಇತರ ಅರ್ಹತೆಗಳು:
ಅಭ್ಯರ್ಥಿಯು ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Degree) ಹೊಂದಿರಬೇಕು.
ಇಂಗ್ಲಿಷ್ ಶಾರ್ಟ್ಹ್ಯಾಂಡ್ನಲ್ಲಿ ನಿಮಿಷಕ್ಕೆ 120 ಪದಗಳ ವೇಗವನ್ನು (120 w.p.m.) ಹೊಂದಿರಬೇಕು.
ಕಂಪ್ಯೂಟರ್ ಜ್ಞಾನದೊಂದಿಗೆ ಕಂಪ್ಯೂಟರ್ನಲ್ಲಿ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗವನ್ನು(40 w.p.m.) ಹೊಂದಿರಬೇಕು.
ವಯೋಮಿತಿ:
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕದ ಅನ್ವಯ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಬಾರದು.
ಆಯ್ಕೆ ಪ್ರಕ್ರಿಯೆ:
- ಅರ್ಜಿಗಳ ಪರಿಶೀಲನೆ(ಶಾರ್ಟ್ ಲಿಸ್ಟ್)
- ಶಾರ್ಟ್ಹ್ಯಾಂಡ್ ಕೌಶಲ್ಯ ಪರೀಕ್ಷೆ (Shorthand Skill Test): ಈ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಗುತ್ತಿದ್ದು, ಶೇ.5ರಷ್ಟು ತಪ್ಪುಗಳಿಗೆ ಮಾತ್ರ ವಿನಾಯಿತಿ ಇರುತ್ತದೆ. ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿದ್ದು, ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮುಖಾಮುಖಿ ಸಂವಾದಕ್ಕೆ(Interaction) ಕರೆಯಲಾಗುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳ ಕಳೆದ 5 ವರ್ಷಗಳ ಎಸಿಆರ್/ಎಪಿಎಆರ್(ACRs/APARs) ಮತ್ತು ವಿಜಿಲೆನ್ಸ್ ಕ್ಲಿಯರೆನ್ಸ್ ವರದಿಗಳನ್ನು ಪರಿಶೀಲಿಸಲಾಗುತ್ತದೆ.
ಸಂಬಳ:
- ಈ ಹುದ್ದೆಯು ಪೇ ಮ್ಯಾಟ್ರಿಕ್ಸ್ನ ಹಂತ 11 ರಲ್ಲಿದ್ದು (Level 11), ವೇತನ ಶ್ರೇಣಿ ರೂ.67,700 ರಿಂದ ರೂ.2,08,700/- ಇರುತ್ತದೆ.
- ಆರಂಭಿಕ ಮೂಲ ವೇತನ ರೂ.67,700/- ರೊಂದಿಗೆ ನಿಯಮಾವಳಿಗಳ ಪ್ರಕಾರ ಇತರೆ ಭತ್ಯೆಗಳು ಲಭ್ಯವಿರುತ್ತವೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅಧಿಕೃತ ಜಾಲತಾಣ ಮೂಲಕ ಪ್ರೊಫಾರ್ಮಾ(ಅರ್ಜಿ ನಮೂನೆ) ಡೌನ್ಲೋಡ್ ಮಾಡಿಕೊಂಡು, ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಜಿಲ್ಲಾ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ಹೈಕೋರ್ಟ್ ಮೂಲಕವೇ ಕಳುಹಿಸಬೇಕು.
ಭರ್ತಿ ಮಾಡಿದ ಅರ್ಜಿ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಕಳೆದ 5 ವರ್ಷಗಳ ಎಸಿಆರ್/ಎಪಿಎಆರ್ ಮತ್ತು ವಿಜಿಲೆನ್ಸ್ ಕ್ಲಿಯರೆನ್ಸ್ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Recruitment Cell, Supreme Court of India, Tilak Marg, New Delhi 110001.
ಶೀಘ್ರ ಪರಿಶೀಲನೆಗಾಗಿ, ಭರ್ತಿ ಮಾಡಿದ ಅರ್ಜಿಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಇಮೇಲ್ ಐಡಿ: recruitment.cell@sci.nic.in ಗೆ ಕಳುಹಿಸಬಹುದು. ತದನಂತರ ಮೂಲ ಅರ್ಜಿ ಮತ್ತು ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸಬೇಕಾಗುತ್ತದೆ.
ಸಹಿ ಇಲ್ಲದ, ಅಪೂರ್ಣವಾದ ಅಥವಾ ಸೂಕ್ತ ದಾಖಲೆಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಮುಖ್ಯ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | www.sci.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |