ಯುಜಿಸಿ-ನೆಟ್(ಡಿಸೆಂಬರ್) 2026ರ ನೋಂದಣಿ ಆರಂಭ

Published on:

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್‌ಟಿಎ) 2026ನೇ ಸಾಲಿನ ಯುಜಿಸಿ-ನೆಟ್ ಡಿಸೆಂಬರ್ ಮಾಹೆಯ ಪರೀಕ್ಷೆ ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ‘ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ’, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮತ್ತು ಪಿಎಚ್.ಡಿ ಪ್ರವೇಶ’ ಹಾಗೂ ‘ಕೇವಲ ಪಿಎಚ್.ಡಿ ಪ್ರವೇಶ’ಕ್ಕಾಗಿ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಅಕ್ಟೋಬರ್ 08
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 28 (ರಾತ್ರಿ 11:50 ರವರೆಗೆ).
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಅಕ್ಟೋಬರ್ 28
  • ವಿಳಂಬ ಶುಲ್ಕದೊಂದಿಗೆ (ರೂ. 500/-) ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಅಕ್ಟೋಬರ್ 29
  • ವಿಳಂಬ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆದಿನಾಂಕ- ಅಕ್ಟೋಬರ್ 31
  • ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ದಿನಾಂಕ- ನವೆಂಬರ್ 02 ರಿಂದ ನವೆಂಬರ್ 04ರವರೆಗೆ.
  • ಪರೀಕ್ಷಾ ದಿನಾಂಕಗಳು: ಡಿಸೆಂಬರ್ 14 ರಿಂದ ಡಿಸೆಂಬರ್ 19 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಅರ್ಹತಾ ಮಾನದಂಡಗಳು

ಸ್ನಾತಕೋತ್ತರ ಪದವಿ ಅಂಕಗಳು: ಸಾಮಾನ್ಯ ಮತ್ತು ಸಾಮಾನ್ಯಿಡಬ್ಲೂಎಸ್ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಪಡೆದಿರಬೇಕು. ಒಬಿಸಿ-NCL, ಎಸ್‌ಸಿ, ಎಸ್‌ಟಿ, ವಿಕಲಚೇತನರು ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 50 ರಷ್ಟು ಅಂಕಗಳು ಕಡ್ಡಾಯ.

4 ವರ್ಷದ ಬ್ಯಾಚುಲರ್ ಪದವಿ: 4 ವರ್ಷಗಳ/8 ಸೆಮಿಸ್ಟರ್‌ಗಳ ಬ್ಯಾಚುಲರ್ ಪದವಿ ಪಡೆದ ಅಭ್ಯರ್ಥಿಗಳು ಕನಿಷ್ಠ ಶೇ. 75 ರಷ್ಟು ಅಂಕಗಳನ್ನು ಹೊಂದಿರಬೇಕು (ಮೀಸಲಾತಿ ವರ್ಗಗಳಿಗೆ ಶೇ. 5 ರಷ್ಟು ಸಡಿಲಿಕೆ ಇರುತ್ತದೆ). ಇವರು ಜೆಆರ್‌ಎಫ್ ಮತ್ತು ಪಿಎಚ್.ಡಿ ಪ್ರವೇಶಕ್ಕೆ ಮಾತ್ರ ಅರ್ಹರಾಗಿರುತ್ತಾರೆ.

ವಯೋಮಿತಿ:

ಜೆಆರ್‌ಎಫ್ ಅರ್ಹತೆಗಾಗಿ ಅಭ್ಯರ್ಥಿಗಳಿಗೆ 01.12.2026 ಕ್ಕೆ ಅನ್ವಯಿಸುವಂತೆ, ಗರಿಷ್ಠ 30 ವರ್ಷ ಮೀರಿರಬಾರದು. ಒಬಿಸಿ-NCL, ಎಸ್‌ಸಿ, ಎಸ್‌ಟಿ, ವಿಕಲಚೇತನರು, ತೃತೀಯ ಲಿಂಗಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ಮತ್ತು ಪಿಎಚ್.ಡಿ ಪ್ರವೇಶಕ್ಕೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.

ಪರೀಕ್ಷಾ ವಿಧಾನ ಮತ್ತು ಮಾದರಿ:

  • ಪರೀಕ್ಷಾ ವಿಧಾನ: ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಆಗಿರುತ್ತದೆ.
  • ಪರೀಕ್ಷಾ ಅವಧಿ: ಒಟ್ಟು 3 ಗಂಟೆಗಳು (180 ನಿಮಿಷಗಳು). ಪತ್ರಿಕೆ-1 ಮತ್ತು ಪತ್ರಿಕೆ-2ರ ನಡುವೆ ಯಾವುದೇ ವಿರಾಮ ಇರುವುದಿಲ್ಲ.
  • ಪ್ರಶ್ನೆ ಪತ್ರಿಕೆಯ ಸ್ವರೂಪ: ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ.
    • ಭಾಗ-1 (ಪತ್ರಿಕೆ 1): 100 ಅಂಕಗಳು (50 ಪ್ರಶ್ನೆಗಳು) – ಬೋಧನೆ ಮತ್ತು ಸಂಶೋಧನಾ ಅಭಿಕ್ಷಮತೆಯನ್ನು ಪರೀಕ್ಷಿಸಲು.
    • ಭಾಗ-2 (ಪತ್ರಿಕೆ 2): 200 ಅಂಕಗಳು (100 ಪ್ರಶ್ನೆಗಳು) – ಅಭ್ಯರ್ಥಿ ಆಯ್ದುಕೊಂಡ ವಿಷಯಕ್ಕೆ ಸಂಬಂಧಿಸಿದ್ದು.
  • ಅಂಕಗಳ ಯೋಜನೆ: ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಯಾವುದೇ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ.

ಅರ್ಜಿ ಶುಲ್ಕದ ವಿವರಗಳು:

  • ಸಾಮಾನ್ಯ/ಅನಾರಕ್ಷಿತ ವರ್ಗದ ಅಭ್ಯರ್ಥಿಗಳಿಗೆ- ರೂ.1150/-
  • ಸಾಮಾನ್ಯ-ಇಡಬ್ಲ್ಯೂಎಸ್/ಒಬಿಸಿ-NCL(ಸಾಮಾನ್ಯ-ಇಡಬ್ಲ್ಯೂಡಿ/ಒಬಿಸಿ-NCL) ವರ್ಗದ ಅಭ್ಯರ್ಥಿಗಳಿಗೆ ರೂ.600/-
  • ಪರಿಶಿಷ್ಟ ಜಾತಿ (SC)/ಪರಿಶಿಷ್ಟ ಪಂಗಡ(ST)/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ- ರೂ.325/-
  • ವಿಕಲಚೇತನರು(ಪಿಡಬ್ಲ್ಯೂಡಿ/ಪಿಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ- ರೂ.325/-

(ಬ್ಯಾಂಕ್ ಸೇವಾ ಶುಲ್ಕಗಳು ಮತ್ತು ಜಿಎಸ್‌ಟಿ ಹೆಚ್ಚುವರಿಯಾಗಿ ಅನ್ವಯಿಸುತ್ತವೆ).

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕವೇ ಅಧಿಕೃತ ವೆಬ್‌ಸೈಟ್ https://ugcnet.nta.nic.in/ ನಲ್ಲಿ “Candidate Activity” ವಿಭಾಗಡಿ “UGC-NET Dec 2026 Application form” ಎಂಬ ಶೀರ್ಷಿಕೆಯ ಲಿಂಕ್‌ ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:

ಅಧಿಕೃತ ಬುಲೆಟಿನ್‌(ಅಧಿಸೂಚನೆ) ಪಿಡಿಎಫ್‌ ಲಿಂಕ್ ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://ugcnet.nta.nic.in/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment