ಕೊಲ್ಕತ್ತಾ: ಭಾರತದ ಅತ್ಯಂತ ಹಳೆಯ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿ, ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್(ಎನ್‌ಐಸಿಎಲ್)ನಲ್ಲಿ 321 ಆಡಳಿತಾತ್ಮಕ ಅಧಿಕಾರಿ(ಎಒ-ಸ್ಕೇಲ್ I) ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಶೇಷ ತಜ್ಞರು 121 ಹುದ್ದೆ ಹಾಗೂ ಸಾಮಾನ್ಯ ತಜ್ಞರು 200 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಆರಂಭ- ಅಕ್ಟೋಬರ್ 08
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 28
- ಅರ್ಜಿ ಶುಲ್ಕ ಪಾವತಿಸುವ ಅವಧಿ- ಅಕ್ಟೋಬರ್ 08 ರಿಂದ ಅಕ್ಟೋಬರ್ 28
- ಹಂತ-1ರ ಆನ್‌ಲೈನ್ ಪರೀಕ್ಷೆ (Preliminary)- ನವೆಂಬರ್ 17, 2026
- ಹಂತ-2ರ ಆನ್‌ಲೈನ್ ಪರೀಕ್ಷೆ (Main)- ಡಿಸೆಂಬರ್ 22, 2026
ಶೈಕ್ಷಣಿಕ ಅರ್ಹತೆ:
01.10.2026 ರಂತೆ;
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.60 ರಷ್ಟು ಅಂಕಗಳೊಂದಿಗೆ (ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ.55) ವಿದ್ಯಾರ್ಹತೆ ಹೊಂದಿರಬೇಕು.
ಜನರಲಿಸ್ಟ್ ಆಫೀಸರ್ಸ್(Generalist) ಹುದ್ದೆಗೆ; ಯಾವುದೇ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
ಫೈನಾನ್ಸ್(Finance – CA & CMA) ಹುದ್ದೆಗೆ; ಚಾರ್ಟರ್ಡ್ ಅಕೌಂಟೆಂಟ್(ಐಸಿಎಐ) ಅಥವಾ ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್(ಐಸಿಎಂಎಐ) ಜೊತೆಗೆ ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ.
ಲೀಗಲ್(Legal) ಹುದ್ದೆಗೆ; ಕಾನೂನು(Law) ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
ಮಾಹಿತಿ ತಂತ್ರಜ್ಞಾನ(IT) ಹುದ್ದೆಗೆ; ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ/ಬಿ.ಟೆಕ್/ಎಂ.ಇ/ಎಂ.ಟೆಕ್ ಅಥವಾ ಎಂಸಿಎ.
ಆಟೋಮೊಬೈಲ್ ಇಂಜಿನಿಯರ್ಸ್ ಹುದ್ದೆಗೆ; ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್/ಎಂ.ಇ/ಎಂ.ಟೆಕ್ ಅಥವಾ ಯಾವುದೇ ಇಂಜಿನಿಯರಿಂಗ್ ಪದವಿ ಜೊತೆಗೆ ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಕನಿಷ್ಠ 1 ವರ್ಷದ ಡಿಪ್ಲೊಮಾ.
ರಿಸ್ಕ್ ಇಂಜಿನಿಯರ್ಸ್ ಹುದ್ದೆಗೆ; ಐಟಿ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ಹೊರತುಪಡಿಸಿ ಇತರ ಯಾವುದೇ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಸ್ನಾತಕೋತ್ತರ ಪದವಿ.
ಕಂಪನಿ ಸೆಕ್ರೆಟರಿ ಹುದ್ದೆಗೆ; ಐಸಿಎಸ್‌ಐನಿಂದ ಎಸಿಎಸ್(ACS)/ಎಫ್ಸಿಎಸ್(FCS) ಜೊತೆಗೆ ಯಾವುದೇ ವಿಭಾಗದಲ್ಲಿ ಪದವಿ/ ಸ್ನಾತಕೋತ್ತರ ಪದವಿ.
ಕೃಷಿ(Agriculture) ಹುದ್ದೆಗೆ; ಕೃಷಿ/ಕೃಷಿ ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್‌ನಲ್ಲಿ 4 ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿ.
ವಯೋಮಿತಿ:
01-10-2026ರಂತೆ;
- ಕನಿಷ್ಠ ವಯಸ್ಸು 21 ವರ್ಷಗಳು
- ಗರಿಷ್ಠ ವಯಸ್ಸು 30 ವರ್ಷಗಳು
(ಅಭ್ಯರ್ಥಿಯು 02.10.1996 ಕ್ಕಿಂತ ಮುಂಚಿತವಾಗಿ ಮತ್ತು 01.10.2005 ಕ್ಕಿಂತ ತಡವಾಗಿ ಜನಿಸಿರಬಾರದು).
ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ(ಎನ್ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಪಿಡಬ್ಲ್ಯೂಡಿ(ಸಾಮಾನ್ಯ/ಇಡಬ್ಲ್ಯೂಡಿಎಸ್) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ:
- ಹಂತ-1 ಪೂರ್ವಭಾವಿ ಪರೀಕ್ಷೆ: ಇದು 100 ಅಂಕಗಳ ವಸ್ತುನಿಷ್ಠ(Objective) ಪರೀಕ್ಷೆಯಾಗಿದ್ದು, ಇಂಗ್ಲಿಷ್ ಭಾಷೆ, ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯಗಳನ್ನು ಒಳಗೊಂಡಿರುತ್ತದೆ.
- ಹಂತ-2 ಮುಖ್ಯ ಪರೀಕ್ಷೆ: ಇದು 250 ಅಂಕಗಳ ವಸ್ತುನಿಷ್ಠ ಪರೀಕ್ಷೆ ಮತ್ತು 30 ಅಂಕಗಳ ವಿವರಣಾತ್ಮಕ(Descriptive-ಇಂಗ್ಲಿಷ್ ಪ್ರಬಂಧ, ಸಂಕ್ಷಿಪ್ತ ಲೇಖನ ಮತ್ತು ಗ್ರಹಿಕೆ) ಪರೀಕ್ಷೆಯನ್ನು ಒಳಗೊಂಡಿರುತ್ತದೆ.
- ಸಂದರ್ಶನ(Interview): ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
- ಅಂತಿಮ ಆಯ್ಕೆ: ಮುಖ್ಯ ಪರೀಕ್ಷೆ(ವಸ್ತುನಿಷ್ಠ) ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ 80:20ರ ಅನುಪಾತದ ವೇಟೇಜ್ ನೀಡಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 1/4ರಷ್ಟು ಋಣಾತ್ಮಕ (Negative) ಅಂಕಗಳ ಕಡಿತವಿರುತ್ತದೆ.
ಸಂಬಳ ಮತ್ತು ಸೌಲಭ್ಯಗಳು:
ಆರಂಭಿಕ ಮೂಲ ವೇತನ: ರೂ.82,485/- (ವೇತನ ಶ್ರೇಣಿ: 82485-4050(14)-139185-4390(4)-156745).
ಒಟ್ಟು ವೇತನ: ಮೆಟ್ರೋಪಾಲಿಟನ್ ನಗರಗಳಲ್ಲಿ ಮಾಸಿಕ ಒಟ್ಟು ವೇತನವು ಸರಿಸುಮಾರು ರೂ.1,14,000/- ಇರುತ್ತದೆ.
ಇತರ ಸೌಲಭ್ಯಗಳು: ನಿಯಮಾವಳಿಗಳ ಪ್ರಕಾರ ಪೆನ್ಷನ್(ಎನ್‌ಪಿಎಸ್), ಗ್ರಾಚ್ಯುಟಿ, ಎಲ್ಟಿಎಸ್, ವೈದ್ಯಕೀಯ ಸೌಲಭ್ಯಗಳು, ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಮತ್ತು ಕಂಪನಿ ವಸತಿ ಸೌಲಭ್ಯಗಳು ದೊರೆಯಲಿವೆ.
ಅರ್ಜಿ ಶುಲ್ಕ:
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ- ರೂ.250/-
- ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.1000/-
ಅರ್ಜಿ ಸಲ್ಲಿಕೆ ಹೇಗೆ..?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://nationalinsurance.nic.co.inನ “ನೇಮಕಾತಿ(Recruitment)” ವಿಭಾಗದಡಿ “RECRUITMENT OF 321 ADMINISTRATIVE OFFICERS (SCALE – I)(GENERALISTS & SPECIALISTS) 2026-27” ಶೀರ್ಷಿಕೆಯಡಿ ಲಭ್ಯವಿರುವ “CLICK HERE TO APPLY ONLINE” ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ಅ.08ರಿಂದ) | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | https://nationalinsurance.nic.co.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |