ಮುಂಬೈ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಡೆಟ್(ಐಒಸಿಎಲ್) ಸಂಸ್ಥೆಯ ಪಶ್ಚಿಮ ವಲಯದಡಿ ಬರುವ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಟೆಕ್ನಿಷಿಯನ್ ಅಪ್ರೆಂಟಿಸ್ 103, ಟ್ರೇಡ್ ಅಪ್ರೆಂಟಿಸ್(ಐಟಿಐ) 40, ಗ್ರಾಜುಯೇಟ್ ಅಪ್ರೆಂಟಿಸ್ 174 ಮತ್ತು ಡೇಟಾ ಎಂಟ್ರಿ ಆಪರೇಟರ್ 28 ಸೀಟುಗಳು ಸೇರಿದಂತೆ ಒಟ್ಟು 345 ಸೀಟುಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಟ್ರೇಡ್, ಹುದ್ದೆಗೆ ಸಂಬಂಧಿಸಿದಂತೆ 12 ತಿಂಗಳ ತರಬೇತಿಯನ್ನು ಐಒಸಿಎಲ್ ಸಂಸ್ಥೆ ಒದಗಿಸಲಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 05
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 04ರ ಸಂಜೆ 5:00 ಗಂಟೆಯವರೆಗೆ.
ರಾಜ್ಯವಾರು ಹುದ್ದೆಗಳ ಸಂಖ್ಯೆಗಳು:
ಮಹಾರಾಷ್ಟ್ರ: ಟೆಕ್ನಿಷಿಯನ್ ಅಪ್ರೆಂಟಿಸ್-33, ಟ್ರೇಡ್ ಅಪ್ರೆಂಟಿಸ್-8, ಗ್ರಾಜುಯೇಟ್ ಅಪ್ರೆಂಟಿಸ್-100, ಡೇಟಾ ಎಂಟ್ರಿ ಆಪರೇಟರ್-8, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-4.
ಗುಜರಾತ್: ಟೆಕ್ನಿಷಿಯನ್ ಅಪ್ರೆಂಟಿಸ್-17, ಟ್ರೇಡ್ ಅಪ್ರೆಂಟಿಸ್-8, ಗ್ರಾಜುಯೇಟ್ ಅಪ್ರೆಂಟಿಸ್-29, ಡೇಟಾ ಎಂಟ್ರಿ ಆಪರೇಟರ್-1, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-3.
ಮಧ್ಯಪ್ರದೇಶ: ಟೆಕ್ನಿಷಿಯನ್ ಅಪ್ರೆಂಟಿಸ್-17, ಟ್ರೇಡ್ ಅಪ್ರೆಂಟಿಸ್-8, ಗ್ರಾಜುಯೇಟ್ ಅಪ್ರೆಂಟಿಸ್-29, ಡೇಟಾ ಎಂಟ್ರಿ ಆಪರೇಟರ್-1, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-3.
ಗೋವಾ: ಟೆಕ್ನಿಷಿಯನ್ ಅಪ್ರೆಂಟಿಸ್-4, ಟ್ರೇಡ್ ಅಪ್ರೆಂಟಿಸ್-4, ಗ್ರಾಜುಯೇಟ್ ಅಪ್ರೆಂಟಿಸ್-4, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-2.
ಛತ್ತೀಸ್‌ಗಢ: ಟೆಕ್ನಿಷಿಯನ್ ಅಪ್ರೆಂಟಿಸ್-8, ಟ್ರೇಡ್ ಅಪ್ರೆಂಟಿಸ್-4, ಗ್ರಾಜುಯೇಟ್ ಅಪ್ರೆಂಟಿಸ್-4, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-2.
ದಾದ್ರಾ ಮತ್ತು ನಗರ ಹವೇಲಿ: ಟೆಕ್ನಿಷಿಯನ್ ಅಪ್ರೆಂಟಿಸ್-3, ಟ್ರೇಡ್ ಅಪ್ರೆಂಟಿಸ್-4, ಗ್ರಾಜುಯೇಟ್ ಅಪ್ರೆಂಟಿಸ್-4, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-2.
ದಮನ್ ಮತ್ತು ದಿಯು: ಟೆಕ್ನಿಷಿಯನ್ ಅಪ್ರೆಂಟಿಸ್-4, ಟ್ರೇಡ್ ಅಪ್ರೆಂಟಿಸ್-2, ಗ್ರಾಜುಯೇಟ್ ಅಪ್ರೆಂಟಿಸ್-4, ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು)-2.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಆಯಾ ಟ್ರೇಡ್/ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ಅರ್ಹತೆ ಹೊಂದಿರಬೇಕು.
ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್/ಸಿವಿಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್); ಸಂಬಂಧಿತ ವಿಭಾಗದಲ್ಲಿ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಹೊಂದಿರಬೇಕು (ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು ಮತ್ತು SC/ST/PwBD ಅಭ್ಯರ್ಥಿಗಳಿಗೆ 45% ಅಂಕಗಳು ಕಡ್ಡಾಯ).
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್/ಎಲೆಕ್ಟ್ರಿಷಿಯನ್/ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ಮಷಿನಿಸ್ಟ್); ಮೆಟ್ರಿಕ್ಯುಲೇಷನ್ (10ನೇ ತರಗತಿ) ಜೊತೆಗೆ NCVT/SCVT ಇಂದ ಮಾನ್ಯತೆ ಪಡೆದ 2 ವರ್ಷಗಳ ಐಟಿಐ(ITI) ಕೋರ್ಸ್ ಪೂರ್ಣಗೊಳಿಸಿರಬೇಕು.
ಗ್ರಾಜುಯೇಟ್ ಅಪ್ರೆಂಟಿಸ್ (BA/B.Com/B.Sc/BBA); ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು (ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು ಮತ್ತು SC/ST/PwBD ಅಭ್ಯರ್ಥಿಗಳಿಗೆ 45% ಅಂಕಗಳು ಕಡ್ಡಾಯ).
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್); ಕನಿಷ್ಠ 50% ಅಂಕಗಳೊಂದಿಗೆ 12ನೇ ತರಗತಿ ತೇರ್ಗಡೆಯಾಗಿರಬೇಕು (SC/ST/PwBD ಅಭ್ಯರ್ಥಿಗಳಿಗೆ 45% ಅಂಕಗಳು) ಆದರೆ ಪದವೀಧರರಾಗಿರಬಾರದು.
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್(ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು); 12ನೇ ತರಗತಿ ತೇರ್ಗಡೆಯಾಗಿರಬೇಕು(ಪದವಿಗಿಂತ ಕಡಿಮೆ) ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ‘ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್’ ಕೌಶಲ್ಯ ಪ್ರಮಾಣಪತ್ರ ಹೊಂದಿರಬೇಕು.
(ಗಮನಿಸಿ: ಉನ್ನತ ವೃತ್ತಿಪರ ಅರ್ಹತೆಗಳಾದ B.E./B.Tech, MBA, MCA, CA, LLB ಇತ್ಯಾದಿ ಹೊಂದಿರುವವರು ಅಥವಾ ಪಡೆಯುತ್ತಿರುವವರು ಈ ಹುದ್ದೆಗಳಿಗೆ ಅರ್ಹರಲ್ಲ).
ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷಗಳು ಮತ್ತು ಗರಿಷ್ಠ ವಯಸ್ಸು: 24 ವರ್ಷಗಳು (30.09.2026 ರ ಅನ್ವಯ).
- ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC-NCL ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು PwBD ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳವರೆಗೆ (SC/ST PwBD ಗೆ 15 ವರ್ಷಗಳು ಮತ್ತು OBC PwBD ಗೆ 13 ವರ್ಷಗಳು) ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ(Document Verification) ಮತ್ತು ಪೂರ್ವ-ನೇಮಕಾತಿ ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ (Pre-engagement Medical Fitness Test) ಕರೆಯಲಾಗುತ್ತದೆ.
ಸ್ಟೈಪಂಡ್:
ಅಪ್ರೆಂಟಿಸ್ ಕಾಯ್ದೆ 1961/1973 ಮತ್ತು ಅಪ್ರೆಂಟಿಸ್ ನಿಯಮಗಳು 1992/2019/2025 ರ ಅನ್ವಯ ಮಾಸಿಕ ನಿಗದಿತ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
- ಪೋರ್ಟಲ್‌ನಲ್ಲಿ ನೋಂದಣಿ: ಅಭ್ಯರ್ಥಿಗಳು ಮೊದಲು ತಮ್ಮ ಹುದ್ದೆಗಳಿಗೆ ಅನುಗುಣವಾಗಿ ಕೆಳಗಿನ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳಬೇಕು:
- ಟ್ರೇಡ್ ಅಪ್ರೆಂಟಿಸ್(ITI/DEO) ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.apprenticeshipindia.gov.in/ಗೆ ಭೇಟಿ ನೀಡಿ.
- ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://nats.education.gov.in/student_register.phpಗೆ ಭೇಟಿ ನೀಡಿ.
- ಅರ್ಜಿ ಸಲ್ಲಿಕೆ: ನೋಂದಾಯಿತ ಯೂಸರ್ ಐಡಿ/ಇಮೇಲ್ ಐಡಿ ಬಳಸಿ ಲಾಗಿನ್ ಆಗಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಮಾರ್ಕೆಟಿಂಗ್ ಡಿವಿಷನ್)-ವೆಸ್ಟರ್ನ್ ರೀಜನ್‌ನ ಕೆಳಗಿನ ಎಸ್ಟಾಬ್ಲಿಷ್‌ಮೆಂಟ್ ಐಡಿ(Establishment ID) ಬಳಸಿ ಅರ್ಜಿ ಸಲ್ಲಿಸಬೇಕು:
- NATS ID: WMHMCC000053
- NAPS ID: E01172700332
- ಅಭ್ಯರ್ಥಿಗಳು ಕೇವಲ ಒಂದು ಡಿಸಿಪ್ಲಿನ್ ಕೋಡ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು ನೋಂದಣಿ ಲಿಂಕ್ | ನೋಂದಣಿ ಮಾಡಿ |
| ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಅಭ್ಯರ್ಥಿಗಳು ನೋಂದಣಿ ಲಿಂಕ್ | ನೋಂದಣಿ ಮಾಡಿ |
| ಅಧಿಕೃತ ಜಾಲತಾಣ | https://iocl.com/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |