ಕೆಇಎ: ರೇಷ್ಮೆ ನಿರೀಕ್ಷಕ, ಮಾರುಕಟ್ಟೆ ಮೇಲ್ವಿಚಾರಕರ ಭರ್ತಿ

38 ಹುದ್ದೆಗಳು

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ರೇಷ್ಮೆ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆಯಲ್ಲಿನ ಕಲ್ಯಾಣ-ಕರ್ನಾಟಕ ವೃಂದದ ಗ್ರೂಪ್-ಸಿ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ರೇಷ್ಮೆ ಇಲಾಖೆಯ ರೇಷ್ಮೆ ನಿರೀಕ್ಷಕ 34 ಹುದ್ದೆ, ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ 04 (03 ಸಾಮಾನ್ಯ + 01 ಹಿಂಬಾಕಿ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ನವೆಂಬರ್‌ 18
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್‌ 15
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಡಿಸೆಂಬರ್‌ 16
  • ಕನ್ನಡ ಭಾಷಾ ಪರೀಕ್ಷೆ ದಿನಾಂಕ- 08-01-2027 (ಮಧ್ಯಾಹ್ನ 3.00 ರಿಂದ 5.00 ರವರೆಗೆ)
  • ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಮಾಹೆ- ಫೆಬ್ರವರಿ-2027

ಶೈಕ್ಷಣಿಕ ಅರ್ಹತೆ:

ರೇಷ್ಮೆ ನಿರೀಕ್ಷಕ ಹುದ್ದೆಗೆ; ರೇಷ್ಮೆ ಉದ್ಯಮದಲ್ಲಿ (Sericulture) ಪದವಿ ಅಥವಾ ರೇಷ್ಮೆ ಉದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಜೊತೆಗೆ ವಿಜ್ಞಾನ ಪದವಿ ಹೊಂದಿರಬೇಕು.

ಒಂದು ವೇಳೆ ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಸಸ್ಯಶಾಸ್ತ್ರ (Botany), ಪ್ರಾಣಿಶಾಸ್ತ್ರ (Zoology) ಅಥವಾ ರೇಷ್ಮೆ ಉದ್ಯಮವನ್ನು ಒಂದು ವಿಷಯವಾಗಿ ಹೊಂದಿರುವ ವಿಜ್ಞಾನ ಪದವೀಧರರು ಅಥವಾ ಕೃಷಿ/ತೋಟಗಾರಿಕೆ ಪದವೀಧರರನ್ನು ಪರಿಗಣಿಸಲಾಗುವುದು.

ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ; ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ(ICAR) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕೃಷಿ ಮಾರಾಟ ಮತ್ತು ಸಹಕಾರ)/ಬಿ.ಎಸ್ಸಿ(ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ವ್ಯವಹಾರ ನಿರ್ವಹಣೆ ಪದವಿ ಹೊಂದಿರಬೇಕು.

ಗಮನಿಸಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಪದವಿ ಪ್ರಮಾಣಪತ್ರ/ಅಂಕಪಟ್ಟಿ ಹೊಂದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಗರಿಷ್ಠ ವಯೋಮಿತಿ ವಿವರಗಳು ಈ ಕೆಳಗಿನಂತಿವೆ (ಸರ್ಕಾರದ ಆದೇಶದನ್ವಯ 5 ವರ್ಷಗಳ ಸಡಿಲಿಕೆಯನ್ನು ಒಳಗೊಂಡಂತೆ);

ಸಾಮಾನ್ಯ ಅರ್ಹತೆ(ಜಿಎಂ) ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ, ಪ.ಜಾತಿ/ಪ.ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ, ಮಾಜಿ ಸೈನಿಕರು, ವಿಶೇಷ ಚೇತನರು, ವಿಧವೆಯರು ಹಾಗೂ ಇತರೆ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಸ್ಪರ್ಧಾತ್ಮಕ ಪರೀಕ್ಷೆ (Offline-OMR ಮಾದರಿ), ದಾಖಲಾತಿ ಪರಿಶೀಲನೆ

ವೇತನ ಶ್ರೇಣಿ:

ಮಾಸಿಕ ವೇತನ ಶ್ರೇಣಿ ₹44,425 – ₹83,700/-, ಈ ಹುದ್ದೆಗಳು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ವ್ಯಾಪ್ತಿಗೆ ಒಳಪಡುತ್ತವೆ.

ಅರ್ಜಿ ಶುಲ್ಕ:

ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು:

  • ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ವರ್ಗಗಳು (2A, 2B, 3A, 3B): ರೂ. 750/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳು: ರೂ. 500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/-

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದ “ರೇಷ್ಮೆ ಇಲಾಖೆ/ಕೃಷಿ ಮಾರುಕಟ್ಟೆ ಇಲಾಖೆ(KK) – 2026” ವಿಭಾಗದಲ್ಲಿ ಲಭ್ಯವಿರುವ “ರೇಷ್ಮೆ ಇಲಾಖೆ/ಕೃಷಿ ಮಾರುಕಟ್ಟೆ ನೇಮಕಾತಿ-2026 ಆನ್‌ಲೈನ್ ಅರ್ಜಿ ಲಿಂಕ್. 18-11-2026” ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್‌ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment