ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಆರ್‌ಪಿಸಿ ಹಾಗೂ ಕೆಕೆ ವೃಂದದಲ್ಲಿ ಖಾಲಿಯಿರುವ ಮಹಿಳಾ ಮೇಲ್ವಿಚಾರಕಿ(ಗ್ರೂಪ್-ಸಿ) ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 171 ಹುದ್ದೆಗೆ (ಉಳಿಕೆ ಮೂಲ ವೃಂದ 141 ಹುದ್ದೆ ಮತ್ತು ಕಲ್ಯಾಣ ಕರ್ನಾಟಕ ವೃಂದ 30 ಹುದ್ದೆಗಳು) ನೇಮಕ ಪ್ರಕ್ರಿಯೆ ನಡೆಯುತ್ತಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ನವೆಂಬರ್ 03
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 28
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ನವೆಂಬರ್ 29
- ಕನ್ನಡ ಭಾಷಾ ಪರೀಕ್ಷೆ ದಿನಾಂಕ- 08-01-2027 (ಮಧ್ಯಾಹ್ನ 3.00 ರಿಂದ 5.00 ರವರೆಗೆ).
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗೃಹ ವಿಜ್ಞಾನ(Home Science) ಅಥವಾ ಸಮಾಜ ಕಾರ್ಯ (Social Work) ಅಥವಾ ಸಮಾಜಶಾಸ್ತ್ರ (Sociology) ಅಥವಾ ಬಿ.ಎಸ್ಸಿ. ಗೃಹ ವಿಜ್ಞಾನ/ಕಮ್ಯುನಿಟಿ ಸೈನ್ಸ್ (B.Sc. Home Science/Community Science) ಪದವಿ ಹೊಂದಿರಬೇಕು.
ವಯೋಮಿತಿ:
28.11.2026 ಕ್ಕೆ ಅನ್ವಯಿಸುವಂತೆ;
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು.
ಗರಿಷ್ಠ ವಯೋಮಿತಿ ವಿವರಗಳು (5 ವರ್ಷಗಳ ಸಡಿಲಿಕೆ ಸೇರಿ) ಈ ಕೆಳಗಿನಂತಿವೆ:
- ಸಾಮಾನ್ಯ ಅರ್ಹತೆ(ಜಿಎಂ) ಗರಿಷ್ಠ 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷಗಳು.
- ಪ.ಜಾತಿ/ಪ.ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳು.
(ಮಾಜಿ ಸೈನಿಕರು, ವಿಧವೆಯರು, ವಿಶೇಷಚೇತನರು ಮತ್ತು ಇಲಾಖಾ ಸೇವಾನಿರತ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಮಾಸಿಕವಾಗಿ ₹44,425 ರಿಂದ ₹83,700 ರವರೆಗೆ ಇರಲಿದೆ. ಜತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ವಯಿಸುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ವರ್ಗದ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ₹750/-
- ಪ.ಜಾತಿ(ಎಸ್‌ಸಿ)/ಪ.ಪಂಗಡ(ಎಸ್‌ಟಿ)/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ₹500/-
- ವಿಶೇಷ ಚೇತನ ಅಭ್ಯರ್ಥಿಗಳಿಗೆ ₹250/-
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ. ಮೆನುನಲ್ಲಿ “ನೇಮಕಾತಿ” ವಿಭಾಗದ “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ – 2026” ಉಪವಿಭಾಗದಡಿ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ (ಆರ್‌ಪಿಸಿ ಅಥವಾ ಕೆಕೆ) ವೃಂದದ ಮೇಲೆ ಕ್ಲಿಕ್ಕಿಸಿ. ನಂತರ ಅಲ್ಲಿ “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ-2026 ಆನ್‌ಲೈನ್ ಅರ್ಜಿ ಲಿಂಕ್. 03-11-2026” ಶೀರ್ಷಿಕೆಯಡಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ(ಕೆಕೆ) ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ(ಆರ್‌ಪಿಸಿ) ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |