ಅಂಚೆ ಇಲಾಖೆ: ಜಿಡಿಎಸ್‌ ಮೊದಲ ಮೆರಿಟ್‌ ಪಟ್ಟಿ ಪ್ರಕಟ

Published on:

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಜುಲೈ ಮಾಹೆಯ ಗ್ರಾಮೀಣ ಡಾಕ್‌ ಸೇವಕ್‌(ಜಿಡಿಎಸ್)‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ವೃತ್ತವಾರು ಮೆರಿಟ್ ಪಟ್ಟಿಯನ್ನು ಸೋಮವಾರ(ಅ.12) ಪ್ರಕಟಿಸಿದೆ.

ಕರ್ನಾಟಕ ವೃತ್ತದಲ್ಲಿ ಮೊದಲ ಸುತ್ತಿನಲ್ಲಿ ಒಟ್ಟು 1102 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಸದರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳು, ತಾವು ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ಮೂಲ ದಾಖಲೆಗಳ ಜೊತೆಗೆ ಎರಡು ಸೆಟ್‌ ಝರಾಕ್ಸ್‌ ಪ್ರತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ಅ.27ರೊಳಗೆ ವರದಿ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ.

ಜಿಡಿಎಸ್‌ ಮೊದಲ ಮೆರಿಟ್‌ ಪಟ್ಟಿ ಪಿಡಿಎಫ್‌ ಲಿಂಕ್

ವೃತ್ತದ ಹೆಸರುಮೆರಿಟ್‌ ಪಟ್ಟಿ ಪಿಡಿಎಫ್‌ ಲಿಂಕ್
ಕರ್ನಾಟಕ ವೃತ್ತಡೌನ್ಲೋಡ್‌ ಮಾಡಿ

ಇತರೆ ವೃತ್ತಗಳ ಮೆರಿಟ್‌ ಪಟ್ಟಿಯನ್ನು ಡೌನ್ಲೋಡ್‌ ಮಾಡಿಕೊಳ್ಳಲು ಇಲಾಖೆಯ ಅಧಿಕೃತ ಜಾಲತಾಣ https://www.indiapost.gov.in/gdsonlineengagementಕ್ಕೆ ಸಂದರ್ಶಿಸಬಹುದು.

ಭಾರತೀಯ ಅಂಚೆ ಇಲಾಖೆಯು ನಾನಾ ವೃತ್ತದ ಒಟ್ಟು 23757(ಕರ್ನಾಟಕಕ್ಕೆ 1116) ಜಿಡಿಎಸ್‌ ಹುದ್ದೆಗಳ ನೇಮಕಾತಿಗಾಗಿ ಆ.20, 2026ರಂದು ಅಧಿಸೂಚಿಸಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment