ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವೈಯಕ್ತಿಕ ಸಹಾಯಕ ಹುದ್ದೆಗಳ ನೇಮಕಾತಿ

ಯಾವುದೇ ಪದವಿ ಅರ್ಹತೆ

Published on:

ಭಾರತದ ಸರ್ವೋಚ್ಚ ನ್ಯಾಯಾಲಯವು(ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾ) ನಾನ್-ಗೆಜೆಟೆಡ್ ಗ್ರೂಪ್-ಬಿ ವೃಂದದ ಹಿರಿಯ ವೈಯಕ್ತಿಕ ಸಹಾಯಕ(ಸೀನಿಯರ್‌ ಪರ್ಸನಲ್‌ ಅಸಿಸ್ಟಂಟ್) ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.‌

ಒಟ್ಟು 65(ತಾತ್ಕಾಲಿಕ) ಸ್ಥಾನಗಳಿಗೆ ವಿವಿಧ ಹಂತದ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 20
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 10 (ರಾತ್ರಿ 11:55 ರವರೆಗೆ)
  • ವಸ್ತುನಿಷ್ಠ ಮಾದರಿಯ ಪರೀಕ್ಷೆ(ಓಟಿಟಿ) ನಡೆಯುವ ತಾತ್ಕಾಲಿಕ ದಿನಾಂಕ- ಡಿಸೆಂಬರ್ 7
  • ಓಟಿಟಿ ಉತ್ತರ ಕೀಲಿಗಳನ್ನು ಪ್ರಕಟಿಸುವ ದಿನಾಂಕ- ಡಿಸೆಂಬರ್ 8
  • ಆಕ್ಷೇಪಣೆ ಸಲ್ಲಿಸಲು ತಾತ್ಕಾಲಿಕ ದಿನಾಂಕಗಳು- ಡಿಸೆಂಬರ್ 8 ರಿಂದ 9ರವರೆಗೆ(ರಾತ್ರಿ 11:55 ರವರೆಗೆ)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Any Degree) ಹೊಂದಿರಬೇಕು.

ಇಂಗ್ಲಿಷ್ ಶೀಘ್ರಲಿಪಿಯಲ್ಲಿ(Shorthand) ನಿಮಿಷಕ್ಕೆ 110 ಪದಗಳ ವೇಗವನ್ನು ಹಾಗೂ ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನದೊಂದಿಗೆ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು.

ವಯೋಮಿತಿ:

01-10-2026ರಂತೆ; ಕನಿಷ್ಠ ವಯಸ್ಸು 18 ವರ್ಷಗಳು

ಗರಿಷ್ಠ ವಯಸ್ಸು: 30 ವರ್ಷಗಳು.

ಭಾರತ ಸರ್ಕಾರದ ನಿಯಮಗಳ ಪ್ರಕಾರ, ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡ(ST), ಇತರ ಹಿಂದುಳಿದ ವರ್ಗಗಳು(OBC – Non-Creamy Layer), ದಿವ್ಯಾಂಗರು ಮತ್ತು ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ಗರಿಷ್ಠ 5 ವರ್ಷಗಳ ಸಡಿಲಿಕೆ ಇರುತ್ತದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಇಲಾಖಾ ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ನಾಲ್ಕು ಹಂತಗಳ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ:

  1. ವಸ್ತುನಿಷ್ಠ ಮಾದರಿಯ ಪರೀಕ್ಷೆ (Objective Type Test): 100 ಅಂಕಗಳ ಈ ಪರೀಕ್ಷೆಯು 1½ ಗಂಟೆಗಳ ಅವಧಿಯದ್ದಾಗಿರುತ್ತದೆ (ಕನಿಷ್ಠ ಅರ್ಹತಾ ಅಂಕಗಳು 50). ಇದರಲ್ಲಿ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.
    • ಸಾಮಾನ್ಯ ಇಂಗ್ಲಿಷ್ (25 ಪ್ರಶ್ನೆಗಳು), ಸಾಮಾನ್ಯ ಜ್ಞಾನ (25 ಪ್ರಶ್ನೆಗಳು), ಸಂವಿಧಾನದಲ್ಲಿನ ನ್ಯಾಯಾಂಗಕ್ಕೆ ಸಂಬಂಧಿಸಿದ ನಿಬಂಧನೆಗಳು (25 ಪ್ರಶ್ನೆಗಳು), ಸುಪ್ರೀಂ ಕೋರ್ಟ್ ನಿಯಮಗಳು 2013 (15 ಪ್ರಶ್ನೆಗಳು) ಮತ್ತು ಕಂಪ್ಯೂಟರ್ ಜ್ಞಾನ (10 ಪ್ರಶ್ನೆಗಳು) ಇರುತ್ತವೆ.
  2. ಇಂಗ್ಲಿಷ್ ಶೀಘ್ರಲಿಪಿ ಪರೀಕ್ಷೆ (Shorthand Test): ನಿಮಿಷಕ್ಕೆ 110 ಪದಗಳ ವೇಗದಲ್ಲಿ 7 ನಿಮಿಷಗಳ ಡಿಕ್ಟೇಷನ್ ಇರುತ್ತದೆ. ಲಿಪ್ಯಂತರಕ್ಕೆ (Transcription) 45 ನಿಮಿಷಗಳ ಸಮಯ ನೀಡಲಾಗುತ್ತದೆ. ಗರಿಷ್ಠ ಅಂಕಗಳು 100 (ಕನಿಷ್ಠ ಅರ್ಹತಾ ಅಂಕಗಳು 50). ಗರಿಷ್ಠ ಶೇ.5 ರಷ್ಟು ತಪ್ಪುಗಳಿಗೆ ಮಾತ್ರ ಅವಕಾಶವಿರುತ್ತದೆ.
  3. ಕಂಪ್ಯೂಟರ್ ಟೈಪಿಂಗ್ ವೇಗ ಪರೀಕ್ಷೆ (Typing Speed Test): ಇಂಗ್ಲಿಷ್ ಭಾಷೆಯಲ್ಲಿ 10 ನಿಮಿಷಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ ಕನಿಷ್ಠ 40 w.p.m ವೇಗ ಹೊಂದಿರಬೇಕು. ಗರಿಷ್ಠ ಶೇ.3 ರಷ್ಟು ತಪ್ಪುಗಳಿಗೆ ಅವಕಾಶವಿರುತ್ತದೆ.
  4. ಸಂದರ್ಶನ (Interview): ಗರಿಷ್ಠ 30 ಅಂಕಗಳು (ಕನಿಷ್ಠ ಅರ್ಹತಾ ಅಂಕಗಳು 15).

ಮೊದಲ ಹಂತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:10 ಅನುಪಾತದಲ್ಲಿ ಶೀಘ್ರಲಿಪಿ ಮತ್ತು ಟೈಪಿಂಗ್ ಪರೀಕ್ಷೆಗೆ ಕರೆಯಲಾಗುತ್ತದೆ. ಎಲ್ಲಾ ಮೂರು ಪರೀಕ್ಷೆಗಳಲ್ಲಿ ತೇರ್ಗಡೆಯಾದವರನ್ನು 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಂಬಳ:

ಈ ಹುದ್ದೆಯು ಪೇ ಮ್ಯಾಟ್ರಿಕ್ಸ್‌ನ ಹಂತ 8 ರಲ್ಲಿದ್ದು (Level 8 of Pay Matrix), ರೂ.47,600 – ರೂ.1,51,100/- ವೇತನ ಶ್ರೇಣಿಯನ್ನು ಹೊಂದಿದೆ.

  • ಆರಂಭಿಕ ಮೂಲ ವೇತನ ರೂ.47,600/- ಆಗಿರುತ್ತದೆ ಮತ್ತು ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಅನಾರಕ್ಷಿತ (General/Unreserved) ಅಭ್ಯರ್ಥಿಗಳಿಗೆ- ರೂ.1,500/-
  • ಎಸ್‌ಸಿ/ಎಸ್‌ಟಿ/ಒಬಿಸಿ(ಎನ್‌ಸಿಎಲ್/ಮಾಜಿ ಸೈನಿಕರು/ದಿವ್ಯಾಂಗ ಅಭ್ಯರ್ಥಿಗಳಿಗೆ- ರೂ.750/-

ಶುಲ್ಕವನ್ನು ಯುಸಿಒ (UCO) ಬ್ಯಾಂಕ್ ಒದಗಿಸುವ ಪೇಮೆಂಟ್ ಗೇಟ್‌ವೇ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು (ಬ್ಯಾಂಕ್ ಶುಲ್ಕಗಳು ಹೆಚ್ಚುವರಿ).

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:

  • ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮತ್ತು ಸಹಿ
  • 10ನೇ ತರಗತಿ, 12ನೇ ತರಗತಿ, ಪದವಿ ಪ್ರಮಾಣಪತ್ರಗಳು
  • ಜಾತಿ ಪ್ರಮಾಣಪತ್ರ
  • ದಿವ್ಯಾಂಗ ಪ್ರಮಾಣಪತ್ರ(ಅನ್ವಯಿಸಿದರೆ)
  • ಇತರೆ ದಾಖಲೆಗಳು…

ಅರ್ಜಿ ಸಲ್ಲಿಕೆ ಹೇಗೆ?:

  • ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಆದ www.sci.gov.in ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಲಿಂಕ್ ಮೂಲಕ ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
  • ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳಾದ (10ನೇ ತರಗತಿ, 12ನೇ ತರಗತಿ, ಪದವಿ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ ಮತ್ತು ಅನ್ವಯಿಸಿದರೆ ದಿವ್ಯಾಂಗ ಪ್ರಮಾಣಪತ್ರ) ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
  • ಆನ್‌ಲೈನ್ ಅರ್ಜಿ ಪೂರ್ಣಗೊಂಡ ನಂತರ, ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್ ಅನ್ನು ತಮ್ಮ ದಾಖಲೆಗಾಗಿ ತೆಗೆದುಕೊಳ್ಳಬೇಕು (ಇದನ್ನು ರಿಜಿಸ್ಟ್ರಿಗೆ ಕಳುಹಿಸುವ ಅಗತ್ಯವಿಲ್ಲ).

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್(ಅ.20ರಿಂದ ಆರಂಭ)
ಅಧಿಕೃತ ಜಾಲತಾಣhttps://www.sci.gov.in/
ಮತ್ತಷ್ಟು ಸುದ್ದಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment